Wednesday, June 10, 2009

ಶ್ರೀಸ್ವಾಮಿನಾಥಸ್ತೋತ್ರಮ್

ಹೇ ಸ್ವಾಮಿನಾಥಾರ್ತ ಬಂಧೋ — ಭಸ್ಮ ಲಿಪ್ತಾಙ್ಗ ಗಾಂಗೇಯ ಕಾರುಣ್ಯ ಸಿಂಧೋ ।
ಹೇ ಸ್ವಾಮಿನಾಥಾರ್ತ ಬಂಧೋ ॥

ರುದ್ರಾಕ್ಷಧಾರಿನ್ನಮಸ್ತೇ ರೌದ್ರ ರೋಗಂ ಹರ ತ್ವಂ ಪುರಾರೇರ್ಗುರೋರ್ಮೇ ।
ರಾಕೇನ್ದುವಕ್ತ್ರಂ ಭವನ್ತಂ ಮಾರ ರೂಪಂ ಕುಮಾರಂ ಭಜೇ ಕಾಮರೂಪಮ್ ॥೧॥

ಮಾಂ ಪಾಹಿ ರೋಗಾದಘೋರಾತ್ - ಮಙ್ಗಳಾಪಾಙ್ಗಪಾತೇನ ಭಙ್ಗಾತ್ಸ್ವರಾಣಾಮ್ ।
ಕಾಲಾಚ್ಚ ದುಷ್ಪಾಕ ಕೂಲಾತ್ ಕಾಲಕಾಲಸ್ಯ ಸೂನುಂ ಭಜೇ ಕಾಂತ ಸೂನುಮ್ ॥೨॥

ಬ್ರಹ್ಮಾದಯೋ ಯಸ್ಯ ಶಿಷ್ಯಾಃ ಬ್ರಹ್ಮಪುತ್ರಾ ಗಿರೌ ಯಸ್ಯ ಸೋಪಾನಭೂತಾಃ ।
ಸೈನ್ಯಂ ಸುರಾಶ್ಚಾಪಿ ಸರ್ವೇ ಸಾಮವೇದಾದಿಗೇಯಂ ಭಜೇ ಕಾರ್ತಿಕೇಯಮ್ ॥೩॥

ಕಾಷಾಯ ಸಂವೀತಗಾತ್ರಂ ಕಾಮರೋಗಾದಿ ಸಂಹಾರಿ ಭಿಕ್ಷಾನ್ನ ಪಾತ್ರಮ್ ।
ಕಾರುಣ್ಯ ಸಮ್ಪೂರ್ಣ ನೇತ್ರಂ ಶಕ್ತಿ ಹಸ್ತಂ ಪವಿತ್ರಂ ಭಜೇ ಶಂಭುಪುತ್ರಮ್ ॥೪॥

ಶ್ರೀಸ್ವಾಮಿಶೈಲೇ ವಸನ್ತಂ ಸಾಧುಸಙ್ಘಸ್ಯ ರೋಗಾನ್ ಸದಾ ಸಂಹರಂತಂ ।
ಓಂಕಾರತತ್ತ್ವಂ ವದನ್ತಂ ಶಮ್ಭುಕರ್ಣೇ ಹಸನ್ತಂ ಭಜೇಽಹಂ ಶಿಶುನ್ತಮ್ ॥೫॥

ಸ್ತೋತ್ರಂ ಕೃತಂ ಚಿತ್ರ ಚಿತ್ರಂ ದೀಕ್ಷಿತಾನಂತರಾಮೇಣ ಸರ್ವಾರ್ಥಸಿದ್ಧ್ಯೈ ।
ಭಕ್ತ್ಯಾ ಪಠೇದ್ಯಃ ಪ್ರಭಾತೇ ದೇವದೇವಪ್ರಸಾದಾತ್ ಲಭೇತಾಷ್ಟಸಿದ್ಧಿಮ್ ॥೬॥

॥ ಇತಿ ಶ್ರೀಅನಂತರಾಮದೀಕ್ಷಿತೇನ ವಿರಚಿತಂ ಶ್ರೀಸ್ವಾಮಿನಾಥಸ್ತೋತ್ರಮ್ ॥

Sunday, June 7, 2009

ಸುಬ್ರಹ್ಮಣ್ಯ ಪಂಚರತ್ನಂ




* ಕುಮಾರಧಾರ ತಟನಿವಾಸಿಯಾದ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ಕುರಿತಾದ ಪಂಚರತ್ನ ಸ್ತೋತ್ರ. ಆದಿ ಶಂಕರರು ಕುಕ್ಕೆಯಲ್ಲಿ ತಂಗಿದ್ದರೆನ್ನಲಾಗಿದೆ.

ಷಡಾನನಂ ಚಂದನಲೇಪಿತಾಂಗಂ
ಮಹೋರಸಂ ದಿವ್ಯಮಯೂರವಾಹಂ
ರುದ್ರಸ್ಯ ಸೂನುಂ ಸುರಲೋಕ ನಾಥಂ
ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ||೧||


ಜಾಜ್ವಲ್ಯಮಾನಂ ಸುರಬೃಂದ ವಂದ್ಯಂ
ಕುಮಾರಧಾರಾ ತಟಮಂದಿರಸ್ತಂ
ಕಂದರ್ಪರೂಪಂ ಕಮನೀಯಗಾತ್ರಂ
ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ||೨||

ದ್ವಿಷಡ್ಭುಜಂ ದ್ವಾದಶ ದಿವ್ಯನೇತ್ರಂ
ತ್ರಯೀತನುಂ ಶೂಲಮಸಿಂದಧಾನಂ
ಶೇಶಾವತಾರಂ ಕಮನೀಯರೂಪಂ
ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ||೩||

ಸುರಾರಿಘೋರಾಹವ ಶೋಭಮಾನಂ
ಸುರೋತ್ತಮಂ ಶಕ್ತಿಧರಂ ಕುಮಾರಂ
ಸುಧಾರ ಶಕ್ತ್ಯಾಯುಧ ಶೋಭಿ ಹಸ್ತಂ
ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ||೪||

ಇಷ್ಟಾರ್ತಸಿದ್ಧಿಪ್ರಧಮೀಶ ಪುತ್ರಂ
ಇಷ್ಟಾನ್ನಧಂ ಭೂಸುರಕಾಮಧೇನುಂ
ಗಂಗೋದ್ಭವಂ ಸರ್ವಜನಾನುಕೂಲಂ
ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ||೫||

ಫಲಶೃತಿ

ಯಶ್ಲೋಕ ಪಂಚಕಮಿದಂ ಪಠತೇಚ ಭಕ್ತ್ಯ
ಬ್ರಹ್ಮಣ್ಯದೇವ ನಿವೇಶೈತಮಾನಸಃ ಸನ್
ಪ್ರಾಪ್ನೋತಿಭೋಗಮಕಿಲಂ ಭುವಿಯದ್ಯಾದಿಶ್ತಂ
ಅಂತೆ ಚ ಗಚ್ಛತಿ ಮುದಾ ಗುಹ ಸಾಮ್ಯಮೇವ

’ ********

ಶ್ರೀ ಸುಬ್ರಹ್ಮಣ್ಯ ಷಟ್ಕಂ


ಶರಣಾಗತಮಾತುರಮಾಧಿಜಿತಂ ಕರುಣಾಕರ ಕಾಮದ ಕಾಮಹತಂ
ಶರಕಾನನ ಸಂಭವ ಚಾರುರುಚೇ ಪರಿಪಾಲಯ ತಾರಕ ಮಾರಕ ಮಾಂ ||೧||
ಹರಸಾರ ಸಮುದ್ಭವ ಹೈಮವತೀ ಕರಪಲ್ಲವ ಲಾಲಿತ ಕಮ್ರತನೋ
ಮುರವೈರಿ ವಿರಿಂಚಿಮುದಂಬುನಿಧೇ ಪರಿಪಾಲಯ ತಾರಕ ಮಾರಕ ಮಾಂ ||೨||
ಗಿರಿಜಾಸುತತಾರಕ ಭಿನ್ನಗಿರೇ ಸುರಸಿಂಧು ತನೂಜ ಸುವರ್ಣ ರುಚೇ
ಶಿರಜಾತ ಶಿಖಾನಲ ವಾಹನ ಹೇ ಪರಿಪಾಲಯ ತಾರಕ ಮಾರಕ ಮಾಂ ||೩||
ಜಯವಿಪ್ರಜನಪ್ರಿಯ ವೀರ ನಮೋ ಜಯ ಭಕ್ತ ಜನಪ್ರಿಯ ಭದ್ರ ನಮಃ
ಜಯದೇವ ವಿಶಾಖಕುಮಾರ ನಮಃ ಪರಿಪಾಲಯ ತಾರಕ ಮಾರಕ ಮಾಂ ||೪||
ಪುರತೋ ಭವ ಮೇ ಪರಿತೋ ಭವ ಮೇ ಪಥಿಮೇ ಭಗವಾನ್ ಭವ ರಕ್ಷಗತಂ
ವಿತರಾಜಿಷು ಮೇ ವಿಜಯಂ ಭಗವನ್ ಪರಿಪಾಲಯ ತಾರಕ ಮಾರಕ ಮಾಂ ||೫||
ಶರದಿಂದು ಸಮಾನ ಷಡಾನನಯಾ ಸರಸೀರುಹ ಚಾರುವಿಲೋಚನಯಾ
ನಿರುಪಾಧಿಕಯಾ ನಿಜಬಾಲಜಯಾ ಪರಿಪಾಲಯ ತಾರಕ ಮಾರಕ ಮಾಂ ||೬||

ಇತಿ ಕುಕ್ಕುಟ ಕೇತು ಮನುಸ್ಮರತಃ ಪಠತಾಮಪಿ ಷಣ್ಮುಖ ಷಟ್ಕಮಿದಂ
ನಮತಾಮಪಿ ನಂದನಮಿಂದುಭೃತೋನ ಭಯಂ ಶರೀರಭೃತಾಂ ||೭||

* ಭಯ ನಿವಾರಣೆಗೆ

ಶ್ರೀ ಸುಬ್ರಹ್ಮಣ್ಯ ಭುಜಂಗಂ


ಸದಾ ಬಾಲರೂಪಾಪಿ ವಿಘ್ನಾದ್ರಿಹಂತ್ರೀ
ಮಹಾದಂತಿವಕ್ತ್ರಾಪಿ ಪಂಚಾಸ್ಯಮಾನ್ಯಾ
ವಿಧೀಂದ್ರಾದಿಮೃಗ್ಯಾ ಗಣೇಶಾಭಿಧಾನಾ
ವಿಧತ್ತಾಂ ಶ್ರಿಯಂ ಕಾಪಿ ಕಲ್ಯಾಣಮೂರ್ತಿಃ ||೧||

ನ ಜಾನಾಮಿ ಪದ್ಯಂ ನ ಜಾನಾಮಿ ಗದ್ಯಂ
ನ ಜಾನಾಮಿ ಶಬ್ದಂ ನ ಜಾನಾಮಿ ಚಾರ್ಥಮ್
ಚಿದೇಕಾ ಷಡಾಸ್ಯಾ ಹೃದೀ ದ್ಯೋತತೇ ಮೇ
ಮುಖಾನ್ನಿಃಸರಂತೇ ಗಿರಿಶ್ಚಾಪಿ ಚಿತ್ರಮ್ ||೨||

ಮಯೂರಾಧಿರೂಢಂ ಮಹಾವಾಕ್ಯಗೂಢಂ
ಮನೋಹಾರಿದೇಹಂ ಮಹಚ್ಚಿತ್ತಗೇಹಂ
ಮಹೀದೇವದೇವಂ ಮಹಾವೇದಭಾವಂ
ಮಹಾದೇವಬಾಲಂ ಭಜೆ ಲೋಕಪಾಲಂ ||೩||

ಯದಾ ಸನ್ನಿಧಾನಂ ಗತಾ ಮಾನವಾ ಮೇ
ಭವಾಂಭೋಧಿಪಾರಂ ಗತಾಸ್ತೇ ತದೈವ|
ಇತಿ ವ್ಯಂಜಯನ್ಸಿಂಧುತೀರೇ ಯ ಆಸ್ತೇ
ತಮೀಡೇ ಪವಿತ್ರಂ ಪರಾಶಕ್ತಿಪುತ್ರಂ ||೪||

ಯಥಾಬ್ದೇಸ್ತರಂಗಾ ಲಯಂ ಯಾಂತಿ ತುಂಗಾ-
ಸ್ತಥೈವಾಪದಃ ಸನ್ನಿಧೌ ಸೇವತಾಂ ಮೇ|
ಇತೀವೋರ್ಮಿಪಂಕ್ತೀರ್ನೃಣಾಂ ದರ್ಶಯಂತಂ
ಸದಾ ಭಾವಯೇ ಹೃತ್ಸರೋಜೇ ಗುಹಂ ತಂ ||೫||

ಗಿರೌ ಮನ್ನಿವಾಸೇ ನರಾ ಯೇಧಿರೂಢಾ
ಸ್ತದಾ ಪರ್ವತೇ ರಾಜತೇ ತೇಧಿರೂಢಾಃ
ಇತೀವ ಬ್ರುವನ್ಗಂಧಶೈಲಾಧಿರೂಢಃ
ಸ ದೇವೋ ಮುದೇ ಮೇ ಸದಾ ಷಣ್ಮುಖೋಸ್ತು ||೬||

ಮಹಾಂಭೋಧಿತೀರೇ ಮಹಾಪಾಪಚೋರೇ
ಮುನೀಂದ್ರಾನುಕೂಲೇ ಸುಗಂಧಾಖ್ಯ ಶೈಲೇ
ಗುಹಾಯಾಂ ವಸಂತಂ ಸ್ವಭಾಸಾ ಲಸಂತಂ
ಜನಾರ್ತಿಂ ಹರಂತಂ ಶ್ರಯಾಮೋ ಗುಹಂ ತಂ ||೭||

ಲಸತ್ಸ್ವರ್ಣಗೇಹೆ ನೃಣಾಂ ಕಾಮದೋಹೇ
ಸುಮಸ್ತೋಮ ಸಂಛನ್ನ ಮಾಣಿಕ್ಯಮಂಚೇ
ಸಮುದ್ಯತ್ಸಹಸ್ರಾರ್ಕತುಲ್ಯ ಪ್ರಕಾಶಂ
ಸದಾ ಭಾವಯೇ ಕಾರ್ತಿಕೇಯಂ ಸುರೇಶಂ ||೮||

ರಣದ್ದಂಸಕೇ ಮಂಜುಳೇತ್ಯಂತ ಶೋಣೇ
ಮನೋಹಾರಿ ಲಾವಣ್ಯ ಪೀಯೂಷಪೂರ್ಣೇ
ಮನಷಠ್ಪದೋ ಮೇ ಭವಕ್ಲೇಶತಪ್ತಃ
ಸದಾ ಮೋದತಾಂ ಸ್ಕಂದ ತೇ ಪಾದಪದ್ಮೇ ||೯||

ಸುವರ್ಣಾಭದಿವ್ಯಾಂಬರೈರ್ಭಾಸಮಾನಾಂ
ಕ್ಷಣತ್ಕಿಂಕಿಣೀ ಮೇಖಲಾ ಶೋಭಮಾನಾಂ
ಲಸದ್ದೇಮಪಟ್ಟೇನ ವಿದ್ಯೋತಮಾನಾಂ
ಕಟಿಂಭಾವಯೇ ಸ್ಕಂದ ತೇ ದೀಪ್ಯಮಾನಾಂ ||೧೦||

ಪುಳಿಂದೇಶಕನ್ಯಾಘನಾಭೋಗತುಂಗ
ಸ್ತನಾಲಿಂಗನಾಸಕ್ತಕಾಶ್ಮೀರರಾಗಂ
ನಮಸ್ಯಾಮ್ಯಹಂ ತಾರಕಾರೇ ತವೋರಃ
ಸ್ವಭಕ್ತಾವನೇ ಸರ್ವದಾ ಸಾನುರಾಗಂ ||೧೧||

ವಿಧೌ ಕ್ಲೃಪ್ತದಂಡಾನ್ ಸ್ವಲೀಲಾಧ್ರುತಾಂಡಾ
ನ್ನಿರಸ್ತೇಭಶುಂಡಾನ್ ದ್ವಿಷತ್ಕಾಲದಂಡಾನ್
ಹತೇಂದ್ರಾರಿಷಂಡಾನ್ ಜಗತ್ತ್ರಾಣಶೌಂಡಾ
ನ್ಸದಾ ತೇ ಪ್ರಚಂಡಾನ್ ಶ್ರಯೇ ಬಾಹುದಂಡಾನ್ ||೧೨||

ಸದಾ ಶಾರದಾಃ ಷಣ್ ಮೃಗಾಂಕಾ ಯದಿ ಸ್ಯುಃ
ಸಮುದ್ಯಂತ ಏವ ಸ್ಥಿತಾಶ್ಚೇತ್ಸಮಂತಾತ್
ಸದಾ ಪೂರ್ಣಬಿಂಬಃ ಕಲಂಕೈಶ್ಚ ಹೀನಾ
ಸ್ತದಾ ತ್ವನ್ಮುಖಾನಾಂ ಬ್ರುವೇ ಸ್ಕಂದ ಸಾಮ್ಯಮ್ ||೧೩||

ಸ್ಫುರನ್ಮಂದಹಾಸೈಃ ಸಹಂಸಾನಿ ಚಂಚ
ತ್ಕಟಾಕ್ಷಾವಲೀಭೃಂಗಸಂಘೋಜ್ವಲಾನಿ
ಸುಧಾಸ್ಯಂದಿಬಿಂಬಾಧರಾಣೀಶಸೂನೋ
ತವಾಲೋಕಯೇ ಷಣ್ಮುಖಾಂಭೋರುಹಾಣಿ ||೧೪||

ವಿಶಾಲೇಷು ಕರ್ಣಾಂತದೀರ್ಘೇಷ್ವಜಸ್ರಂ
ದಯಾಸ್ಯಂದಿಷು ದ್ವಾದಶಸ್ವೀಕ್ಷಣೇಷು
ಮಯೀಷತ್ಕಟಾಕ್ಷಃ ಸಕೃತ್ಪಾತಿತಶ್ಚೇ
- ದ್ಭವೇತ್ತೇ ದಯಾಶೀಲ ಕಾ ನಾಮ ಹಾನಿಃ ||೧೫||

ಸುತಾಂಗೋದ್ಭವೋ ಮೇಸಿ ಜೀವೇತಿ ಷಡ್ದಾ
ಜಪನ್ಮಂತ್ರಮೀಶೋ ಮುದಾ ಜಿಘ್ರತೇ ಯಾನ್
ಜಗದ್ಭಾರಭೃದ್ಭ್ಯೋ ಜಗನ್ನಾಥ ತೇಭ್ಯಃ
ಕಿರೀಟೋಜ್ವಲೇಭ್ಯೋ ನಮೋ ಮಸ್ತಕೇಭ್ಯಃ ||೧೬||

ಸ್ಫುರದ್ರತ್ನಕೇಯೂರಹಾರಾಭಿರಾಮ
ಶ್ಚಲತ್ಕುಂಡಲಶ್ರೀಲಸದ್ಗಂಡಭಾಗಃ
ಕಟೌ ಪೀತವಾಸಾಃ ಕರೇ ಚಾರುಶಕ್ತಿಃ
ಪುರಸ್ತಾನ್ಮಮಾಸ್ತಾಂ ಪುರಾರೇಸ್ತನೂಜಃ ||೧೭||

ಇಹಾಯಾಹಿ ವತ್ಸೇತಿ ಹಸ್ತಾನ್ಪ್ರಸಾರ್ಯಾ
ಹ್ವಯತ್ಯಾದರಾಚ್ಛಂಕರೇ ಮಾತುರಂಕಾತ್
ಸಮುತ್ಪತ್ಯ ತಾತಂ ಶ್ರಯಂತಂ ಕುಮಾರಂ
ಹರಾಶ್ಲಿಷ್ಟಗಾತ್ರಂ ಭಜೇ ಬಾಲಮೂರ್ತಿಂ ||೧೮||

ಕುಮಾರೇಶಸೂನೋ ಗುಹಸ್ಕಂದ ಸೇನಾ
ಪತೇ ಶಕ್ತಿಪಾಣೇ ಮಯೂರಾಧಿರೂಢ
ಪುಲಿಂದಾತ್ಮಜಾಕಾಂತ ಭಕ್ತಾರ್ತಿಹಾರಿನ್
ಪ್ರಭೋ ತಾರಕಾರೇ ಸದಾ ರಕ್ಷ ಮಾಂ ತ್ವಂ ||೧೯||

ಪ್ರಶಾಂತೇಂದ್ರಿಯೇ ನಷ್ಟಸಂಜ್ಞೇ ವಿಚೇಷ್ಟೇ
ಕಫೋದ್ಗಾರಿವಕ್ತ್ರೇ ಭಯೋತ್ಕಂಪಿಗಾತ್ರೇ
ಪ್ರಯಾಣೋನ್ಮುಖೇ ಮಯ್ಯನಾಥೇ ತದಾನೀಂ
ದ್ರುತಂ ಮೇ ದಯಾಲೋ ಭವಾಗ್ರೇ ಗುಹ ತ್ವಂ ||೨೦||

ಕೃತಾಂತಸ್ಯ ದೂತೇಷು ಚಂಡೇಷು ಕೋಪಾ
ದ್ದಹ ಚ್ಛಿಂದ್ಧಿ ಭಿಂದ್ದೀತಿ ಮಾಂ ತರ್ಜಯತ್ಸು
ಮಯೂರಂ ಸಮಾರುಹ್ಯ ಮಾ ಭೈರಿತಿ ತ್ವಂ
ಪುರಃ ಶಕ್ತಿಪಾಣಿರ್ಮಮಾಯಾಹಿ ಶೀಘ್ರಂ ||೨೧||

ಪ್ರಣಮ್ಯಾಸಕೃತ್ಪಾದಯೋಸ್ತೇ ಪತಿತ್ವಾ
ಪ್ರಸಾದ್ಯ ಪ್ರಭೋ ಪ್ರಾರ್ಥಯೇನೇಕವಾರಂ
ನ ವಕ್ತುಂ ಕ್ಷಮೋಹಂ ತದಾನೀಂ ಕೃಪಾಬ್ದೇ
ನ ಕಾರ್ಯಾಂತಕಾಲೇ ಮನಾಗಪ್ಯುಪೇಕ್ಷಾ ||೨೨||

ಸಹಸ್ರಾಂಡಭೋಕ್ತಾ ತ್ವಯಾ ಶೂರನಾಮಾ
ಹತಸ್ತಾರಕಃ ಸಿಂಹವಕ್ತ್ರಶ್ಚ ದೈತ್ಯಃ
ಮಮಾಂತರ್ಹೃದಿಸ್ಥಂ ಮನಃಕ್ಲೇಶಮೇಕಂ
ನ ಹಂಸಿ ಪ್ರಭೋ ಕಿಂ ಕರೋಮಿ ಕ್ವ ಯಾಮಿ ||೨೩||

ಅಹಂ ಸರ್ವದಾ ದುಃಖಭಾರಾವಸನ್ನೋ
ಭವಾನ್ದೀನಬಂಧುಸ್ತ್ವದನ್ಯಂ ನ ಯಾಚೇ
ಭವದ್ಭಕ್ತಿರೋಧಂ ಸದಾ ಕ್ಲೃಪ್ತಬಾಧಂ
ಮಮಾಧಿಂ ದ್ರುತಿಂ ನಾಶಯೋಮಾಸುತ ತ್ವಂ ||೨೪||

ಅಪಸ್ಮಾರಕುಷ್ಟಕ್ಷಯಾರ್ಶಃಪ್ರಮೇಹ
ಜ್ವರೋನ್ಮಾದಗುಲ್ಮಾದಿರೋಗಾ ಮಹಾಂತಃ
ಪಿಶಾಚಾಶ್ಚ ಸರ್ವೇ ಭವತ್ಪತ್ರಭೂತಿಂ
ವಿಲೋಕ್ಯ ಕ್ಷಣಾತ್ತಾರಕಾರೇ ದ್ರವಂತೇ ||೨೫||

ದೃಶಿ ಸ್ಕಂದಮೂರ್ತಿಃ ಶ್ರುತೌ ಸ್ಕಂದಕೀರ್ತಿರ್ಮುಖೇ
ಮೇ ಪವಿತ್ರಂ ಸದಾ ತಚ್ಚರಿತ್ರಂ
ಕರೇ ತಸ್ಯ ಕೃತ್ಯಂ ವಪುಸ್ತಸ್ಯ ಭೃತ್ಯಂ
ಗುಹೇ ಸಂತು ಲೀನಾ ಮಮಾಶೇಷಭಾವಾಃ ||೨೬||

ಮುನೀನಾಮುತಾಹೋ ನೃಣಾಂ ಭಕ್ತಿಭಾಜಾ-
ಮಭೀಷ್ಟಪ್ರದಾಃ ಸಂತಿ ಸರ್ವತ್ರ ದೇವಾಃ
ನೃಣಾಂಮಂತ್ಯಜಾನಾಮಪಿ ಸ್ವಾರ್ಥದಾನೇ
ಗುಹಾದ್ದೈವಮನ್ಯಂ ನ ಜಾನೇ ನ ಜಾನೇ ||೨೭||

ಕಲತ್ರಂ ಸುತಾ ಬಂಧುವರ್ಗಃ ಪಶುರ್ವಾ
ನರೋ ವಾಥ ನಾರೀ ಗೃಹೇ ಯೇ ಮದೀಯಾಃ
ಯಜಂತೋ ನಮಂತಃ ಸ್ತುವಂತೋ ಭವಂತಂ
ಸ್ಮರಂತಶ್ಚ ತೇ ಸಂತು ಸರ್ವೇ ಕುಮಾರ ||೨೮||

ಮೃಗಾಃ ಪಕ್ಷಿಣೋ ದಂಶಕಾ ಯೇ ಚ ದುಷ್ಟಾ-
ಸ್ತಥಾ ವ್ಯಾಧಯೋ ಬಾಧಕಾ ಯೇ ಮದಂಗೇ
ಭವಚ್ಛಕ್ತಿತೀಕ್ಷ್ಣಾಗ್ರಭಿನ್ನಾಃ ಸುದೂರೇ
ವಿನಶ್ಯಂತು ತೇ ಚೂರ್ಣಿತಕ್ರೌಂಚಶೈಲ ||೨೯||

ಜನಿತ್ರಿ ಪಿತಾ ಚ ಸ್ವಪುತ್ರಾಪರಾಧಂ
ಸಹೇತೇ ನ ಕಿಂ ದೇವಸೇನಾಧಿನಾಥ
ಅಹಂ ಚಾತಿಬಾಲೋ ಭವಾನ್ ಲೋಕತಾತಃ
ಕ್ಷಮಸ್ವಾಪರಾಧಂ ಸಮಸ್ತಂ ಮಹೇಶ ||೩೦||

ನಮಃ ಕೇಕಿನೇ ಶಕ್ತಯೇ ಚಾಪಿ ತುಭ್ಯಂ
ನಮಶ್ಛಾಗ ತುಭ್ಯಂ ನಮಃ ಕುಕ್ಕುಟಾಯ
ನಮಃ ಸಿಂಧವೇ ಸಿಂಧುದೇಶಾಯ ತುಭ್ಯಂ
ಪುನಃ ಸ್ಕಂದಮೂರ್ತೇ ನಮಸ್ತೇ ನಮೋಸ್ತು ||೩೧||

ಜಯಾನಂದಭೂಮನ್ ಜಯಾಪಾರಧಾಮನ್
ಜಯಾಮೋಘಕೀರ್ತೇ ಜಯಾನಂತಮೂರ್ತೇ
ಜಯಾನಂದ ಸಿಂಧೋ ಜಯಾಶೇಷಬಂಧೋ
ಜಯ ತ್ವಂ ಸದಾ ಮುಕ್ತಿದಾನೇಶಸೂನೋ ||೩೨||

ಭುಜಂಗಾಖ್ಯವೃತ್ತೇನ ಕ್ಲೃಪ್ತಂ ಸ್ತವಂ ಯಃ
ಪಠೇದ್ಭಕ್ತಿಯುಕ್ತೋ ಗುಹಂ ಸಂಪ್ರಣಮ್ಯ
ಸ ಪುತ್ರಾನ್ಕಳತ್ರಂ ಧನಂ ಧೀರ್ಘಮಾಯುಃ
ಲಭೇತ್ಸ್ಕಂದಸಾಯುಜ್ಯಮಂತೇ ನರಃ ಸಃ ||೩೩||

||ಇತಿ ಶ್ರೀಶಂಕರ ವಿರಚಿತ ಶ್ರೀಸುಬ್ರಹ್ಮಣ್ಯ ಭುಜಂಗಂ ಸಂಪೂರ್ಣಂ||

***
ಶ್ರೀ ಶಂಕರಭಗವತ್ಪಾದರಿಂದ ರಚಿತವಾದ ಶ್ರೀ ಸುಬ್ರಹ್ಮಣ್ಯ ಭುಜಂಗ ಸ್ತೋತ್ರವು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಕೃಪೆಯಿಂದ ಆಯುರಾರೋಗ್ಯ ಐಸ್ವರ್ಯಾಭಿವೃದ್ಧಿಯನ್ನು ಪಡೆಯಲು ಅತ್ಯಂತ ಪ್ರಭಾವಶಾಲಿಯಾಗಿದೆ. ಶ್ರೀ ಶಂಕರಭಗವತ್ಪಾದರ ವಿರೋಧಿಗಳು ಅವರ ಮೇಲೆ ನಡೆಸಿದ ವಾಮಾಚಾರದಿಂದ ಉಂಟಾದ ಅನಾರೋಗ್ಯವನ್ನು ಅವರು ತಿರುಚ್ಚೆಂದೂರಿನ ಶ್ರೀ ಸುಬ್ರಹ್ಮಣ್ಯಸ್ವಾಮಿಯನ್ನು ಈ ಸ್ತೋತ್ರದ ಮೂಲಕ ೪೮ ದಿನಗಳು ಸೇವಿಸಿ ಗುಣಹೊಂದಿದರೆಂದು ಪ್ರತೀತಿ ಇದೆ.

Saturday, June 6, 2009

ಶ್ರೀ ಕಾರ್ತಿಕೇಯ ನಾಮಾನುಕೀರ್ತನಂ

ಶ್ರೀ ಸ್ಕಂದ ಉವಾಚ

ಯೋಗೀಶ್ವರೋ ಮಹಾಸೇನಃ ಕಾರ್ತಿಕೇಯಾಗ್ನಿನಂದನಃ
ಸ್ಕಂದಃ ಕುಮಾರಃ ಸೇನಾನೀಃ ಸ್ವಾಮೀ ಶಂಕರಸಂಭವಃ ||೧||
ಗಾಂಗೇಯಸ್ತಾಮ್ರ ಚೂಡಶ್ಚಬ್ರಹ್ಮಚಾರೀ ಶಿಖಿಧ್ವಜಃ
ತಾರಕಾರೀರುಮಾಪುತ್ರಃ ಕ್ರೌಂಚಾರಿಶ್ಚಷಡಾನನಃ ||೨||
ಶಬ್ಧಬ್ರಹ್ಮಸಮುದ್ಗಶ್ಚ ಸಿದ್ಧಃ ಸಾರಸ್ವತೋ ಗುಹಃ
ಸನತ್ಕುಮಾರೋ ಭಗವಾನ್ ಭೋಗಮೋಕ್ಷಫಲಪ್ರದಃ ||೩||
ಶರಜನ್ಮಾ ಗಣಾಧೀಶ ಪೂರ್ವಜೋ ಮುಕ್ತಿಮಾರ್ಗಕೃತ್
ಸರ್ವಾಗಮ ಪ್ರಣೇತಾ ಚ ವಾಂಚಿತಾರ್ಥ ಪ್ರದರ್ಶನಃ ||೪||
ಅಷ್ಟಾವಿಂಶತಿ ನಾಮಾನಿ ಮದೀಯಾನೀಹ ಯಃ ಪಠೇತ್
ಪ್ರತ್ಯೂಷಂ ಶ್ರದ್ದಯಾಯುಕ್ತೋ ಮೂಕೋ ವಾಚಸ್ಪತಿರ್ಭವೇತ್ ||೫||
ಮಹಾಮಂತ್ರ ಮಯಾನೀತಿ ಮಮ ನಾಮಾನುಕೀರ್ತನಂ
ಮಹಾಪ್ರಙ್ನಾಮವಾಪ್ನೋತಿ ನಾತ್ರ ಕಾರ್ಯ ವಿಚಾರಣಾ ||೬||

||ಇತಿ ಶ್ರೀ ರುದ್ರಯಾಮಲೇ ಪ್ರಙ್ನಾವಿವರ್ಧನಾಖ್ಯಂ ಶ್ರೀಮತ್ ಕಾರ್ತಿಕೇಯಾ ಸ್ತೋತ್ರಂ ಸಂಪೂರ್ಣಂ ||


* ಪ್ರಾಚೀನ ತಂತ್ರ ಗ್ರಂಥವಾದಂತಹ ರುದ್ರ ಯಾಮಲದಲ್ಲಿ ಸ್ವತಃ ಶ್ರೀ ಸ್ಕಂದಮೂರ್ತಿಯೇ ನೀಡಿರುವಂತಹ ಕಾರ್ತಿಕೇಯ ನಾಮನುಕೀರ್ತನೆ ೨೮ ನಾಮಗಳನ್ನೊಳಗೊಂಡು ಪ್ರಙ್ನಾ ವರ್ಧಕ ಸ್ತೋತ್ರವಾಗಿದೆ.

Sunday, May 3, 2009

ಸುಬ್ರಹ್ಮಣ್ಯಾಶ್ಟಕಂ





ಹೇ ಸ್ವಾಮಿನಾಥ ಕರುಣಾಕರ ದೀನ ಬಂಧೋ
ಶ್ರೀ ಪಾರ್ವತೀಶ ಮುಖ ಪಂಕಜ ಪದ್ಮ ಬಂಧೋ
ಶ್ರೀಶಾಧಿ ದೇವ ಗಣ ಪೂಜಿತ ಪಾದ ಪದ್ಮ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೧||

ದೇವಾಧಿ ದೇವ ಸುತ ದೇವ ಗಣಾಧಿನಾಥ
ದೇವೇಂದ್ರ ವಂದ್ಯ ಮೃದು ಪಂಕಜ ಮಂಜುಪಾದ
ದೇವರ್ಷಿ ನಾರದ ಮುನೀಂದ್ರ ಸುಗೀತ ಕೀರ್ಥೆ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೨||

ನಿತ್ಯಾನ್ನದಾನ ನಿರಥಾಖಿಲ ರೋಗ ಹರಿನ್
ಭಾಗ್ಯ ಪ್ರಧಾನ ಪರಿಪೂರಿತ ಭಕ್ತ ಕಾಮ
ಶೃತ್ಯಾಗಮ ಪ್ರಣವ ವಾಚ್ಯ ನಿಜ ಸ್ವರೊಪ.
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೩||

ಕ್ರೌಂಚಾ ಸುರೇಂದ್ರ ಮದಕಂಡನ ಶಕ್ತಿ ಶೂಲ
ಛಾಪಾದಿಶಸ್ತ್ರ ಪರಿಮಂಡಿತ ದಿವ್ಯಪಾಣಿ
ಶ್ರೀಕುಂಡಲೀಶ ದೃತತುಂಡ ಶಿಖೀಂದ್ರವಾಹ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೪||

ದೇವಾಧಿದೀವ ರಥ ಮಂಡಲಮದ್ಯವೇಧ್ಯ
ದೇವೇಂದ್ರ ಪೀಡ ನಕರಂ ದೃಢಛಾಪ ಹಸ್ತ
ಶೂರಂನಿಹತ್ಯಸುರಕೋಟಿಭಿರಾದಮ್ಯಮಾನ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೫||

ಹಾರಾದಿ ರತ್ನ ಮಣಿ ಯುಕ್ತ ಕಿರೀಟಹಾರ
ಕೇಯೂರಕುಂಡಲಸ್ಥ್ಕವಚಾಭಿರಾಮ
ಹೇ ವೀರ ತಾರಕ ಜಯಾಮರ ಬೃಂದ ವಂದ್ಯ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೬||

ಪಂಚಾಕ್ಷರಾದಿ ಮನು ಮಂತ್ರಿತ ಗಾಂಗತೋಯೈಃ
ಪಂಚಾಮೃತ ಪ್ರೌಮುತೀಂದ್ರ ಮುಖೈರ್ಮುನೀಂದ್ರೈ
ಪಟ್ಟಾಭಿಶಿಕ್ತ ಹರಿಯುಕ್ತ ಪರಾಶನಾಥ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೭||

ಶ್ರೀ ಕಾರ್ತಿಕೇಯ ಕರುಣಾಮೃತ ಪೂರ್ಣದೃಶ್ಟ್ಯ
ಕಾಮಾದಿರೋಗ ಕಲುಶೀಕೃತದೃಶ್ಟಚಿತ್ತಂ
ಸಿಕ್ಥ್ವಾ ತು ಮಾಮವ ಕಳಾಧರ ಕಾಂತಿಕಾಂತ್ಯ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೮||

ಸುಬ್ರಹ್ಮಣ್ಯಾಶ್ಟಕಂ ಪುಣ್ಯಂ ಯಃ ಪಠತಿ ದ್ವಿಜೋತ್ತಮ
ತೇ ಸರ್ವೆ ಮುಕ್ತಿಮಾಯಾಂತಿ ಸುಬ್ರಹ್ಮಣ್ಯಪ್ರಸಾದತಃ
ಸುಬ್ರಹ್ಮಣ್ಯಾಶ್ಟಕಮಿದಂ ಪ್ರಾತರುತ್ಥಾಯ ಯಃ ಪಠೇತ್
ಕೋಟಿ ಜನ್ಮ ಕೃತಂ ಪಾಪಂ ತತ್ಕ್ಷಣಾದೇವ ನಶ್ಯತಿ ||


' ******

ಅಂಬಿಕಾತನಯಂ ಸ್ಕಂದಂ ಷಣ್ಮುಖಂ ಕುಕ್ಕುಟಧ್ವಜಂ
ಶಕ್ತಿಹಸ್ತಂ ಮಯೂರಸ್ಥಂ ಕಾರ್ತಿಕೇಯಂ ನಮಾಮ್ಯಹಂ ||

’*****
ಗಾಂಗೇಯಂ ವಹ್ನಿಗರ್ಭಂ ಶರವಣಜನಿತಂ ಜ್ನಾನಶಕ್ಟಿಂ ಕುಮಾರಂ
ಬ್ರಹ್ಮಣ್ಯಂ ಸ್ಕಂದದೇವಂ ಗುಹಮಚಲಭಿದಂ ರುದ್ರತೇಜಃಸ್ವರೂಪಂ|
ಸೇನಾನ್ಯಂ ತಾರಕಾಘ್ನಂ ಗಜಮುಖಸಹಿತಂ ಕಾರ್ತಿಕೇಯಂ ಷಡಾಸ್ಯಂ
ಸುಬ್ರಹ್ಮಣ್ಯಂ ಮಯೂರಧ್ವಜರಥಸಹಿತಂ ದೇವದೇವಂ ನಮಾಮಿ ||
’*****
ಗಂಗಾಸುತಾಯ ದೇವಾಯ ಸ್ಕಂದಾಯ ಬ್ರಹ್ಮಚಾರಿಣೇ
ಕುಂಡಲೀನಿಸ್ವರೂಪಾಯ ಸ್ವಾಮಿನಾಥಾಯ ಮಂಗಳಂ ||
'*****

Monday, March 23, 2009

ಕೆಲವು ಕನ್ನಡ ಭಜನೆಗಳು

*******
ಆತ್ಮಾರಾಮ ಆನಂದರಮಣ
ಅಚ್ಯುತಕೇಶವ ಹರಿನಾರಾಯಣ
ಭವಭಯಹರಣ ವಂದಿತಚರಣ
ರಘುಕುಲ ಭೂಷಣ ರಾಜೀವ ಲೋಚನ
ಆದಿನಾರಯಣ ಅನಂತಶಯನ
ಸಚ್ಚಿದಾನಂದ ಶ್ರೀಸತ್ಯನಾರಾಯಣ

*******
ರಾಧೆ ರಾಧೆ ರಾಧೆ .... ರಾಧೆ ಗೋವಿಂದಾ
ಬೃಂದಾವನ ಕಂದ ಬೃಂದಾವನ ಕಂದ
ನಂದಕಿಶೋರ ನವನೀತಚೋರ ರಾಧೆ ಗೋವಿಂದ
ಅನಾಥನಾಥ ದೀನಬಂಧು ರಾಧೆ ಗೋವಿಂದ
ಪಂಢರಿನಾಥ ಪಾಂಡುರಂಗ ರಾಧೆ ಗೋವಿಂದ
ಜಯ ವಿಟ್ಠಲ ಜಯಹರಿ ವಿಟ್ಠಲ ರಾಧೆ ಗೋವಿಂದ
*****

Sunday, March 15, 2009

ಶೃಂಗಪುರಾಧೀಶ್ವರಿ


ಪಲ್ಲವಿ:

ಶೃಂಗಪುರಾಧೀಶ್ವರಿ ಶಾರದೆ
ಶುಭಮಂಗಳೆ ಸರ್ವಾಭೀಷ್ಟಪ್ರಧೆ

ಅನುಪಲ್ಲವಿ:

ಶಂಕರ ಸನ್ನುತೆ ಶ್ರೀ ಪದ್ಮಚರಣೇ ಸಕಲಕಲಾ ವಿಶಾರದೆ ವರದೆ
ಸಲಹೆನ್ನ ತಾಯೆ ಸಾಮಗಾನಪ್ರಿಯೇ

ಚರಣ:

ಕರುಣಿಸೆನ್ನ ಶ್ರುತಿ ಗತಿಗಳ ಮಾತೆ
ಕಮನೀಯ ಸಪ್ತಸ್ವರಸುಪೂಜಿತೆ

ಕಾವ್ಯ ಗಾನ ಕಲಾಸ್ವರೂಪಿಣೀ
ಕಾಮಿತ ದಾಯಿನಿ ಕಲ್ಯಾಣಿ ಜನನಿ

Monday, February 16, 2009

ಹಿಂದಿನ ಸಾಲಿನ ಹುಡುಗರು

* ಕೆ. ಎಸ್. ನರಸಿಂಹಸ್ವಾಮಿ ಅವರ ಶಿಲಾಲತೆ ಕವನ ಸಂಕಲನದಿಂದ ಆಯ್ದ ಕವನ
ಬೆರಳಚ್ಚು ನೆರವು: ಕು| ಮಮತಾ. ವಿ.

ಹಿಂದಿನ ಸಾಲಿನ ಹುಡುಗರು ಎಂದರೆ
ನಮಗೇನೇನು ಭಯವಿಲ್ಲ!
ನಮ್ಮಿಂದಾಗದು ಶಾಲೆಗೆ ತೊಂದರೆ;
ನಮಗೆಂದೆಂದು ಜಯವಿಲ್ಲ!

ನೀರಿನ ಜೋರಿಗೆ ತೇಲದು ಬಂಡೆ;
ಅಂತೆಯೇ ನಾವೀ ತರಗತಿಗೆ!
ಪರೀಕ್ಷೆ ಎಂದರೆ ಹೂವಿನ ಚೆಂಡೆ ?
ಚಿಂತಿಸಬಾರದು ದುರ್ಗತಿಗೆ.

ವರುಷ ವರುಷವೂ ನಾವಿದ್ದಲ್ಲಿಯೇ
ಹೊಸ ವಿದ್ಯಾರ್ಥಿಗಳಾಗುವೆವು;
ಪುಟಗಳ ತೆರೆಯದೆ ತಟತಟ ಓದದೆ
ಬಿಸಿಲಿಗೆ ಗಾಳಿಗೆ ಮಾಗುವೆವು!

ಜೊತೆಯಲಿ ಕೂರುವ ತಮ್ಮತಂಗಿಯರ
ಓದುಬಾರವನು ನೋಯಿಸೆವು;
ನಮ್ಮಂತಾಗದೆ ಅವರೀ ಶಾಲೆಯ
ಬಾವುಟವೆರಿಸಲೆನ್ನುವೆವು.

ಸಂಬಳ ಸಾಲದ ಉಪಾಧ್ಯಾಯರಿಗೆ
ಬೆಂಬಲವಾಗಿಯೇ ನಿಲ್ಲುವೆವು;
ಪಾಠಪ್ರವಚನ ರುಚಿಸದೆ ಹೋದರೆ
ಪಾಕಂಪೊಪ್ಪನು ಮೆಲ್ಲುವೆವು.

ತರಗತಿಗೆನೋ ನಾವೇ ಹಿಂದು;
ಹಿಂದುಳಿದವರೇ ನಾವಿಲ್ಲಿ!
ಆಟದ ಬಯಲಲಿ ನೋಡಲಿ ಬಂದು
ಆಂಜನೇಯರೇ ನಾವಲ್ಲಿ!

ಪಂಪ ಕುಮಾರವ್ಯಾಸರ ದಾಸರ
ಹರಿಹರ ಶರಣರ ಕುಲ ನಾವು!
ಕನ್ನಡದಲ್ಲೇ ತೆರ್ಗಡೆಯಾಗದ
ಪಂಡಿತಪುತ್ರರ ಪಡೆ ನಾವು!

ಗೆದ್ದವರೆಲ್ಲಾ ನಮ್ಮವರೇ ಸರಿ;
ಗೆಲ್ಲುವಾತುರವೇ ನಮಗಿಲ್ಲ.
ಸೋತವರಿಗೆ ನಾವಿಲ್ಲವೇ ಮಾದರಿ?
ಕೆರೆಗೆ ಬೀಳುವಿದು ತರವಲ್ಲ.

ಗೆದ್ದವರೇರುವ ಭಾಗ್ಯದ ದಾರಿಗೆ
ಕದಲದ ದೀಪಗಳಾಗುವೆವು;
ಹಲವರು ಸೋಲದೆ ಕೆಲವರ ಗೆಲುವಿಗೆ
ಬೆಲೆಯಿರದೆಂದೆ ನಂಬಿಹೆವು.

ಊರಿಗೆ ಊರೇ ಹಸೆಯಲಿ ನಿಂತರೆ
ಆರತಿ ಬೆಳಗಲು ಜನವೆಲ್ಲಿ?
ಎಲ್ಲ ಹಾಡುವ ಬಾಯೇ ಆದರೆ
ಚಪ್ಪಾಳೆಗೆ ಜನವಿನ್ನೆಲ್ಲಿ?

ಲೋಕದ ಶಾಲೆಯ ಬಾಗ್ಯದ ಸೆರೆಯಲಿ
ಅನಂತಸುಖವನು ಕಂಡಿಹೆವು.
ಇದೇ ಸತ್ಯವೆಮಗಿದರಾಸರೆಯಲಿ
ಜಯಾಪಜಯಗಳ ದಾಟುವೆವು.

ಪುಸ್ತಕ ಓದದೆ ಪ್ರೀತಿಯನರಿತೆವು;
ಗೆಲ್ಲದೆ ಹೆಮ್ಮೆಯ ಗಳಿಸಿದೆವು;
ನಾವೀ ಶಾಲೆಯನೆಂದು ಬಿಡೆವು;
ನೆಮ್ಮದಿಯಾಗಿಯೇ ಉಲಿಯುವೆವು!

ಹಿಂದಿನ ಸಾಲಿನ ಹುಡುಗರು

* ಕೆ. ಎಸ್. ನರಸಿಂಹಸ್ವಾಮಿ ಅವರ ಶಿಲಾಲತೆ ಕವನ ಸಂಕಲನದಿಂದ ಆಯ್ದ ಕವನವವನ್ನು ಟೈಪ್ ಮಾಡಿ ಕೊಟ್ಟವರು ಕು| ಮಮತ ವಿ.

ಹಿಂದಿನ ಸಾಲಿನ ಹುಡುಗರು ಎಂದರೆ
ನಮಗೇನೇನು ಭಯವಿಲ್ಲ!
ನಮ್ಮಿಂದಾಗದು ಶಾಲೆಗೆ ತೊಂದರೆ;
ನಮಗೆಂದೆಂದು ಜಯವಿಲ್ಲ!

ನೀರಿನ ಜೋರಿಗೆ ತೇಲದು ಬಂಡೆ;
ಅಂತೆಯೇ ನಾವೀ ತರಗತಿಗೆ!
ಪರೀಕ್ಷೆ ಎಂದರೆ ಹೂವಿನ ಚೆಂಡೆ ?
ಚಿಂತಿಸಬಾರದು ದುರ್ಗತಿಗೆ.

ವರುಷ ವರುಷವೂ ನಾವಿದ್ದಲ್ಲಿಯೇ
ಹೊಸ ವಿದ್ಯಾರ್ಥಿಗಳಾಗುವೆವು;
ಪುಟಗಳ ತೆರೆಯದೆ ತಟತಟ ಓದದೆ
ಬಿಸಿಲಿಗೆ ಗಾಳಿಗೆ ಮಾಗುವೆವು!

ಜೊತೆಯಲಿ ಕೂರುವ ತಮ್ಮತಂಗಿಯರ
ಓದ್ಹುಬಾರವನು ನೋಯಿಸೆವು;
ನಮ್ಮಂತಾಗದೆ ಅವರೀ ಶಾಲೆಯ
ಬಾವುತವೆರಿಸಲೆನ್ನುವೆವು.

ಸಂಬಳ ಸಾಲದ ಉಪಾದ್ಯಾಯರಿಗೆ
ಬೆಂಬಲವಾಗಿಯೇ ನಿಲ್ಲುವೆವು;
ಪಾಠಪ್ರವಚನ ರುಚಿಸದೆ ಹೋದರೆ
ಪಾಕಂಪೊಪ್ಪನು ಮೆಲ್ಲುವೆವು.

ತರಗತಿಗೆನೋ ನಾವೇ ಹಿಂದು;
ಹಿಂದುಳಿದವರೇ ನಾವಿಲ್ಲಿ!
ಆಟದ ಬಯಲಲಿ ನೋಡಲಿ ಬಂದು
ಆಂಜನೆಯರೇ ನಾವಲ್ಲಿ!

ಪಂಪ ಕುಮಾರವ್ಯಾಸರ ದಾಸರ
ಹರಿಹರ ಶರಣರ ಕುಲ ನಾವು!
ಕನ್ನಡದಲ್ಲೇ ತೆರ್ಗದೆಯಾಗದ
ಪಂಡಿತಪುತ್ರರ ಪದೆನಾವು!

ಗೆದ್ದವರೆಲ್ಲಾ ನಮ್ಮವರೇ ಸರಿ;
ಗೆಲ್ಲುವಾತುರವೇ ನಮಗಿಲ್ಲ.
ಸೋತವರಿಗೆ ನಾವಿಲ್ಲವೇ ಮಾದರಿ?
ಕೆರೆಗೆ ಬೀಳುವಿದು ತರವಲ್ಲ.

ಗೆದ್ದವರೇರುವ ಬಾಗ್ಯದ ದಾರಿಗೆ
ಕದಲದ ದೀಪಗಲಾಗುವೆವು;
ಹಲವರು ಸೋಲದೆ ಕೆಲವರ ಗೆಲುವಿಗೆ
ಬೆಲೆಯಿರದೆಂದೆ ನಂಬಿಹೆವು.

ಊರಿಗೆ ಊರೇ ಹಸೆಯಲಿ ನಿಂತರೆ
ಆರತಿ ಬೆಳಗಲು ಜನವೆಲ್ಲಿ?
ಎಲ್ಲ ಹಾಡುವ ಬಾಯೇ ಆದರೆ
ಚಪ್ಪಾಳೆಗೆ ಜನವಿನ್ನೆಲ್ಲಿ?

ಲೋಕದ ಶಾಲೆಯ ಬಾಗ್ಯದ ಸೆರೆಯಲಿ
ಅನಂತಸುಕವನು ಕಂಡಿಹೆವು.
ಇದೇ ಸತ್ಯವೆಮಗಿದರಾಸರೆಯಲಿ
ಜಯಾಪಜಯಗಳ ದಾಟುವೆವು.

ಪುಸ್ತಕ ಓದದೆ ಪ್ರೀತಿಯನರಿತೆವು;
ಗೆಲ್ಲದೆ ಹೆಮ್ಮೆಯ ಗಳಿಸಿದೆವು;
ನಾವೀ ಶಾಲೆಯನೆಂದು ಬಿಡೆವು;
ನೆಮ್ಮದಿಯಾಗಿಯೇ ಉಲಿಯುವೆವು!

Monday, January 12, 2009

ಶ್ರೀರಾಮರಕ್ಷಾಸ್ತೋತ್ರ




॥ ಶ್ರೀಗಣೇಶಾಯ ನಮಃ ॥

ವಿನಿಯೋಗಃ-
ಅಸ್ಯ ಶ್ರೀರಾಮರಕ್ಷಾಸ್ತೋತ್ರಮಂತ್ರಸ್ಯ । ಬುಧ-ಕೌಶಿಕ ಋಷಿಃ । ಅನುಷ್ಟುಪ್ ಛಂದಃ । ಶ್ರೀಸೀತಾರಾಮಚಂದ್ರೋ ದೇವತಾ । ಸೀತಾ ಶಕ್ತಿಃ । ಶ್ರೀಮದ್ ಹನುಮಾನ ಕೀಲಕಮ್ ।ಶ್ರೀರಾಮಚಂದ್ರ-ಪ್ರೀತ್ಯರ್ಥೇ ಶ್ರೀರಾಮ-ರಕ್ಷಾ-ಸ್ತೋತ್ರ-ಮನ್ತ್ರ-ಜಪೇ ವಿನಿಯೋಗಃ ॥
ಋಷ್ಯಾದಿ-ನ್ಯಾಸಃ-
ಬುಧ-ಕೌಶಿಕ ಋಷಯೇ ನಮಃ ಶಿರಸಿ । ಅನುಷ್ಟುಪ್ ಛಂದಸೇ ನಮಃ ಮುಖೇ । ಶ್ರೀಸೀತಾ-ರಾಮಚಂದ್ರೋ ದೇವತಾಯೈ ನಮಃ ಹೃದಿ । ಸೀತಾ ಶಕ್ತಯೇ ನಮಃ ನಾಭೌ । ಶ್ರೀಮದ್ ಹನುಮಾನ ಕೀಲಕಾಯ ನಮಃ ಪಾದಯೋ ।ಶ್ರೀರಾಮಚಂದ್ರ-ಪ್ರೀತ್ಯರ್ಥೇ ಶ್ರೀರಾಮ-ರಕ್ಷಾ-ಸ್ತೋತ್ರ-ಮನ್ತ್ರ-ಜಪೇ ವಿನಿಯೋಗಾಯ ನಮಃ ಸರ್ವಾಂಗೇ ॥

॥ ಅಥ ಧ್ಯಾನಮ್ ॥
ಧ್ಯಾಯೇದಾಜಾನು-ಬಾಹುಂ ಧೃತ-ಶರ-ಧನುಷಂ ಬದ್ಧ-ಪದ್ಮಾಸನಸ್ಥಮ್ ।
ಪೀತಂ ವಾಸೋ ವಸಾನಂ ನವ-ಕಮಲ-ದಲ-ಸ್ಪರ್ಧಿ-ನೇತ್ರಂ ಪ್ರಸನ್ನಮ್ ।
ವಾಮಾಂಕಾರೂಢ-ಸೀತಾ-ಮುಖ-ಕಮಲ-ಮಿಲಲ್ಲೋಚನಂ ನೀರದಾಭಮ್ ।
ನಾನಾಲಂಕಾರ-ದೀಪ್ತಂ ದಧತಮುರು-ಜಟಾಮಂಡನಂ ರಾಮಚಂದ್ರಮ್॥
॥ಇತಿ ಧ್ಯಾನಮ್॥

॥ಮೂಲ-ಪಾಠ॥
ಚರಿತಂ ರಘುನಾಥಸ್ಯ ಶತ-ಕೋಟಿ ಪ್ರವಿಸ್ತರಮ್ ।
ಏಕೈಕಮಕ್ಷರಂ ಪುಂಸಾಂ, ಮಹಾಪಾತಕನಾಶನಮ್ ॥ ೧॥
ಧ್ಯಾತ್ವಾ ನೀಲೋತ್ಪಲ-ಶ್ಯಾಮಂ, ರಾಮಂ ರಾಜೀವ-ಲೋಚನಮ್ ।
ಜಾನಕೀ-ಲಕ್ಷ್ಮಣೋಪೇತಂ, ಜಟಾ-ಮುಕುಟ-ಮಣ್ಡಿತಮ್ ॥ ೨॥
ಸಾಸಿ-ತೂಣ-ಧನುರ್ಬಾಣ-ಪಾಣಿಂ ನಕ್ತಂ ಚರಾನ್ತಕಮ್ ।
ಸ್ವ-ಲೀಲಯಾ ಜಗತ್-ತ್ರಾತುಮಾವಿರ್ಭೂತಮಜಂ ವಿಭುಮ್ ॥ ೩॥
ರಾಮರಕ್ಷಾಂ ಪಠೇತ್ಪ್ರಾಜ್ಞಃ, ಪಾಪಘ್ನೀಂ ಸರ್ವ-ಕಾಮದಾಮ್ ।
ಶಿರೋ ಮೇ ರಾಘವಃ ಪಾತು, ಭಾಲಂ ದಶರಥಾತ್ಮಜಃ ॥ ೪॥
ಕೌಸಲ್ಯೇಯೋ ದೃಶೌ ಪಾತು, ವಿಶ್ವಾಮಿತ್ರಪ್ರಿಯಃ ಶ್ರುತೀ ।
ಘ್ರಾಣಂ ಪಾತು ಮಖ-ತ್ರಾತಾ, ಮುಖಂ ಸೌಮಿತ್ರಿ-ವತ್ಸಲಃ ॥ ೫॥
ಜಿಹ್ವಾಂ ವಿದ್ಯಾ-ನಿಧಿಃ ಪಾತು, ಕಣ್ಠಂ ಭರತ-ವಂದಿತಃ ।
ಸ್ಕಂಧೌ ದಿವ್ಯಾಯುಧಃ ಪಾತು, ಭುಜೌ ಭಗ್ನೇಶ-ಕಾರ್ಮುಕಃ ॥ ೬॥
ಕರೌ ಸೀತಾ-ಪತಿಃ ಪಾತು, ಹೃದಯಂ ಜಾಮದಗ್ನ್ಯ-ಜಿತ್ ।
ಮಧ್ಯಂ ಪಾತು ಖರ-ಧ್ವಂಸೀ, ನಾಭಿಂ ಜಾಮ್ಬವದಾಶ್ರಯಃ ॥ ೭॥
ಸುಗ್ರೀವೇಶಃ ಕಟೀ ಪಾತು, ಸಕ್ಥಿನೀ ಹನುಮತ್ಪ್ರಭುಃ ।
ಊರೂ ರಘೂತ್ತಮಃ ಪಾತು, ರಕ್ಷಃ-ಕುಲ-ವಿನಾಶ-ಕೃತ್ ॥ ೮॥
ಜಾನುನೀ ಸೇತುಕೃತ್ಪಾತು, ಜಂಘೇ ದಶಮುಖಾನ್ತಕಃ ।
ಪಾದೌ ಬಿಭೀಷಣ-ಶ್ರೀದಃ, ಪಾತು ರಾಮೋಽಖಿಲಂ ವಪುಃ ॥ ೯॥
ಏತಾಂ ರಾಮ-ಬಲೋಪೇತಾಂ ರಕ್ಷಾಂ ಯಃ ಸುಕೃತೀ ಪಠೇತ್ ।
ಸ ಚಿರಾಯುಃ ಸುಖೀ ಪುತ್ರೀ, ವಿಜಯೀ ವಿನಯೀ ಭವೇತ್ ॥ ೧೦॥
ಪಾತಾಲ-ಭೂತಲ-ವ್ಯೋಮ-ಚಾರಿಣಶ್ಛದ್ಮ-ಚಾರಿಣಃ ।
ನ ದ್ರಷ್ಟುಮಪಿ ಶಕ್ತಾಸೇ, ರಕ್ಷಿತಂ ರಾಮ-ನಾಮಭಿಃ ॥ ೧೧॥
ರಾಮೇತಿ ರಾಮ-ಭದ್ರೇತಿ ರಾಮಚಂದ್ರೇತಿ ವಾ ಸ್ಮರನ್ ।
ನರೋ ನ ಲಿಪ್ಯತೇ ಪಾಪೈಃ ಭುಕ್ತಿಂ ಮುಕ್ತಿಂ ಚ ವಿನ್ದತಿ ॥ ೧೨॥
ಜಗಜ್ಜೈತ್ರೈಕ-ಮನ್ತ್ರೇಣ ರಾಮ-ನಾಮ್ನಾಽಭಿರಕ್ಷಿತಮ್ ।
ಯಃ ಕಂಠೇ ಧಾರಯೇತ್-ತಸ್ಯ ಕರಸ್ಥಾಃ ಸರ್ವ-ಸಿದ್ಧಯಃ ॥ ೧೩॥
ವಜ್ರ-ಪಂಜರ-ನಾಮೇದಂ, ಯೋ ರಾಮಕವಚಂ ಸ್ಮರೇತ್ ।
ಅವ್ಯಾಹತಾಜ್ಞಃ ಸರ್ವತ್ರ, ಲಭತೇ ಜಯ-ಮಂಗಲಮ್ ॥ ೧೪॥
ಆದಿಷ್ಟ-ವಾನ್ ಯಥಾ ಸ್ವಪ್ನೇ ರಾಮ-ರಕ್ಷಾಮಿಮಾಂ ಹರಃ ।
ತಥಾ ಲಿಖಿತ-ವಾನ್ ಪ್ರಾತಃ, ಪ್ರಬುದ್ಧೋ ಬುಧಕೌಶಿಕಃ ॥ ೧೫॥
ಆರಾಮಃ ಕಲ್ಪ-ವೃಕ್ಷಾಣಾಂ ವಿರಾಮಃ ಸಕಲಾಪದಾಮ್ ।
ಅಭಿರಾಮಸ್ತ್ರಿ-ಲೋಕಾನಾಂ, ರಾಮಃ ಶ್ರೀಮಾನ್ ಸ ನಃ ಪ್ರಭುಃ ॥ ೧೬॥
ತರುಣೌ ರೂಪ-ಸಂಪನ್ನೌ ಸುಕುಮಾರೌ ಮಹಾಬಲೌ ।
ಪುಂಡರೀಕ-ವಿಶಾಲಾಕ್ಷೌ ಚೀರ-ಕೃಷ್ಣಾಜಿನಾಮ್ಬರೌ ॥ ೧೭॥
ಫಲ-ಮೂಲಾಶಿನೌ ದಾನ್ತೌ, ತಾಪಸೌ ಬ್ರಹ್ಮಚಾರಿಣೌ ।
ಪುತ್ರೌ ದಶರಥಸ್ಯೈತೌ ಭ್ರಾತರೌ ರಾಮ-ಲಕ್ಷ್ಮಣೌ ॥ ೧೮॥
ಶರಣ್ಯೌ ಸರ್ವ-ಸತ್ತ್ವಾನಾಂ ಶ್ರೇಷ್ಠೌ ಸರ್ವ-ಧನುಷ್ಮತಾಮ್ ।
ರಕ್ಷಃ ಕುಲ-ನಿಹಂತಾರೌ, ತ್ರಾಯೇತಾಂ ನೋ ರಘೂತ್ತಮೌ ॥ ೧೯॥
ಆತ್ತ-ಸಜ್ಜ-ಧನುಷಾವಿಶು-ಸ್ಪೃಶಾವಕ್ಷಯಾಶುಗ-ನಿಷಂಗ-ಸಂಗಿನೌ ।
ರಕ್ಷಣಾಯ ಮಮ ರಾಮ-ಲಕ್ಷ್ಮಣಾವಗ್ರತಃ ಪಥಿ ಸದೈವ ಗಚ್ಛತಾಮ್ ॥ ೨೦॥
ಸನ್ನದ್ಧಃ ಕವಚೀ ಖಡ್ಗೀ ಚಾಪ-ಬಾಣ-ಧರೋ ಯುವಾ ।
ಗಚ್ಛನ್ಮನೋರಥೋಽಸ್ಮಾಕಂ, ರಾಮಃ ಪಾತು ಸಲಕ್ಷ್ಮಣಃ ॥ ೨೧॥
ರಾಮೋ ದಾಶರಥಿಃ ಶೂರೋ, ಲಕ್ಷ್ಮಣಾನುಚರೋ ಬಲೀ ।
ಕಾಕುತ್ಸ್ಥಃ ಪುರುಷಃ ಪೂರ್ಣಾ, ಕೌಸಲ್ಯೇಯೋ ರಘುತ್ತಮಃ ॥ ೨೨॥
ವೇದಾನ್ತ-ವೇದ್ಯೋ ಯಜ್ಞೇಶಃ, ಪುರಾಣ-ಪುರುಷೋತ್ತಮಃ ।
ಜಾನಕೀ-ವಲ್ಲಭಃ ಶ್ರೀಮಾನಪ್ರಮೇಯ-ಪರಾಕ್ರಮಃ ॥ ೨೩॥
ಇತ್ಯೇತಾನಿ ಜಪನ್ನಿತ್ಯಂ, ಮದ್ಭಕ್ತಃ ಶ್ರದ್ಧಯಾನ್ವಿತಃ ।
ಅಶ್ವಮೇಧಾಧಿಕಂ ಪುಣ್ಯಂ, ಸಂಪ್ರಾಪ್ನೋತಿ ನ ಸಂಶಯಃ ॥ ೨೪॥
ರಾಮಂ ದುರ್ವಾ-ದಲ-ಶ್ಯಾಮಂ, ಪದ್ಮಾಕ್ಷಂ ಪೀತ-ವಾಸಸಮ್ ।
ಸ್ತುವಂತಿ ನಾಮಭಿರ್ದಿವ್ಯೈರ್ನ ತೇ ಸಂಸಾರಿಣೋ ನರಃ ॥ ೨೫॥
ರಾಮಂ ಲಕ್ಷ್ಮಣಪೂರ್ವಜಂ ರಘುವರಂ ಸೀತಾಪತಿಂ ಸುಂದರಮ್ ।
ಕಾಕುತ್ಸ್ಥಂ ಕರುಣಾರ್ಣವಂ ಗುಣನಿಧಿಂ ವಿಪ್ರಪ್ರಿಯಂ ಧಾರ್ಮಿಕಮ್ ।
ರಾಜೇಂದ್ರಂ ಸತ್ಯ-ಸನ್ಧಂ ದಶರಥ-ತನಯಂ ಶ್ಯಾಮಲಂ ಶಾಂತ-ಮೂರ್ತಮ್ ।
ವಂದೇ ಲೋಕಾಭಿರಾಮಂ ರಘು-ಕುಲ-ತಿಲಕಂ ರಾಘವಂ ರಾವಣಾರಿಮ್ ॥ ೨೬॥
ರಾಮಾಯ ರಾಮ-ಭದ್ರಾಯ ರಾಮಚಂದ್ರಾಯ ವೇಧಸೇ ।
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ॥ ೨೭॥
ಶ್ರೀರಾಮ ರಾಮ ರಘುನಂದನ ರಾಮ ರಾಮ । ಶ್ರೀರಾಮ ರಾಮ ಭರತಾಗ್ರಜ ರಾಮ ರಾಮ ।
ಶ್ರೀರಾಮ ರಾಮ ರಣ-ಕರ್ಕಶ ರಾಮ ರಾಮ । ಶ್ರೀರಾಮ ರಾಮ ಶರಣಂ ಭವ ರಾಮ ರಾಮ ॥ ೨೮॥
ಶ್ರೀರಾಮಚಂದ್ರ-ಚರಣೌ ಮನಸಾ ಸ್ಮರಾಮಿ । ಶ್ರೀರಾಮಚಂದ್ರ-ಚರಣೌ ವಚಸಾ ಗೃಣಾಮಿ ।
ಶ್ರೀರಾಮಚಂದ್ರ-ಚರಣೌ ಶಿರಸಾ ನಮಾಮಿ । ಶ್ರೀರಾಮಚಂದ್ರ-ಚರಣೌ ಶರಣಂ ಪ್ರಪದ್ಯೇ ॥ ೨೯॥
ಮಾತಾ ರಾಮೋ ಮತ್ಪಿತಾ ರಾಮಚಂದ್ರಃ । ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ ।
ಸರ್ವಸ್ವಂ ಮೇ ರಾಮಚಂದ್ರೋ ದಯಾಲುಃ । ನಾನ್ಯಂ ಜಾನೇ ನೈವ ಜಾನೇ ನ ಜಾನೇ ॥ ೩೦॥
ದಕ್ಷಿಣೇ ಲಕ್ಷ್ಮಣೋ ಯಸ್ಯ, ವಾಮೇ ತು ಜನಕಾತ್ಮಜಾ ।
ಪುರತೋ ಮಾರುತಿರ್ಯಸ್ಯ ತಂ ವಂದೇ ರಘು-ನಂದನಮ್ ॥ ೩೧॥
ಲೋಕಾಭಿರಾಮಂ ರಣ-ರಂಗ-ಧೀರಮ್, ರಾಜೀವ-ನೇತ್ರಂ ರಘು-ವಂಶ-ನಾಥಮ್ ।
ಕಾರುಣ್ಯ-ರೂಪಂ ಕರುಣಾಕರಂ ತಮ್, ಶ್ರೀರಾಮಚಂದ್ರಮ್ ಶರಣಂ ಪ್ರಪದ್ಯೇ ॥ ೩೨॥
ಮನೋಜವಂ ಮಾರುತ-ತುಲ್ಯ-ವೇಗಮ್, ಜಿತೇನ್ದ್ರಿಯಂ ಬುದ್ಧಿ-ಮತಾಂ ವರಿಷ್ಠಮ್ ।
ವಾತಾತ್ಮಜಂ ವಾನರ-ಯೂಥ-ಮುಖ್ಯಮ್, ಶ್ರೀರಾಮ-ದೂತಂ ಶರಣಂ ಪ್ರಪದ್ಯೇ ॥ ೩೩॥
ಕೂಜನ್ತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ ।
ಆರುಹ್ಯ ಕವಿತಾ-ಶಾಖಾಂ ವಂದೇ ವಾಲ್ಮೀಕಿ-ಕೋಕಿಲಮ್ ॥ ೩೪॥
ಆಪದಾಂ ಅಪಹರ್ತಾರಂ, ದಾತಾರಂ ಸರ್ವಸಂಪದಾಮ್ ।
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ॥ ೩೫॥
ಭರ್ಜನಂ ಭವ-ಬೀಜಾನಾಂ ಅರ್ಜನಂ ಸುಖ-ಸಮ್ಪದಾಮ್ ।
ತರ್ಜನಂ ಯಮ-ದೂತಾನಾಂ ರಾಮ ರಾಮೇತಿ ಗರ್ಜನಮ್ ॥ ೩೬॥
ರಾಮೋ ರಾಜ-ಮಣಿಃ ಸದಾ ವಿಜಯತೇ ರಾಮಂ ರಮೇಶಂ ಭಜೇ ।
ರಾಮೇಣಾಭಿಹತಾ ನಿಶಾಚರ-ಚಮೂ ರಾಮಾಯ ತಸ್ಮೈ ನಮಃ ।
ರಾಮಾನ್ನಾಸ್ತಿ ಪರಾಯಣಂ ಪರ-ತರಂ ರಾಮಸ್ಯ ದಾಸೋಽಸ್ಮ್ಯಹಮ್ ।
ರಾಮೇ ಚಿತ್ತ-ಲಯಃ ಸದಾ ಭವತು ಮೇ ಭೋ ರಾಮ ಮಾಮುದ್ಧರ ॥ ೩೭॥
ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ ।
ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ ॥ ೩೮॥
ಇತಿ ಶ್ರೀಬುಧಕೌಶಿಕವಿರಚಿತಂ ಶ್ರೀರಾಮರಕ್ಷಾಸ್ತೋತ್ರಂ ಸಂಪೂರ್ಣಮ್ ॥
॥ ಶ್ರೀಸೀತಾರಾಮಚಂದ್ರಾರ್ಪಣಮಸ್ತು ॥

Sunday, January 11, 2009

ಸಕಲ ಗ್ರಹ ಬಲ

ಸಕಲ ಗ್ರಹ ಬಲ ನೀನೆ ಸರಸಿಜಾಕ್ಷ ನಿಖಿಲ ರಕ್ಷಕ ನೀನೆ ವಿಶ್ವ ವ್ಯಾಪಕನೆ
ರವಿಚಂದ್ರ ಬುಧ ನೀನೆ ರಾಹು ಕೇತುವು ನೀನೆ ಕವಿ ಗುರು ಶನಿಯು ಮಂಗಳನು ನೀನೆ
ದಿವ ರಾತ್ರಿಯು ನೀನೆ ನವ ವಿಧಾನವು ನೀನೆ ಭವರೋಗ ಹರ ನೀನೆ ಬೇಷಜನು ನೀನೆ.
ಪಕ್ಷಮಾಸವು ನೀನೆ ಪರ್ವ ಕಾಲವು ನೀನೆ ನಕ್ಷತ್ರ ಯೋಗ ತಿಥಿ ಕರಣ ನೀನೆ.
ಅಕ್ಷಯವಾಗಿ ದ್ರೌಪದಿಯ ಮಾನವಕಾಯ್ದ ಪಕ್ಷಿವಾಹನ ನೀನೆ ರಕ್ಷಕನು ನೀನೆ.
ಋತು ವತ್ಸರವು ನೀನೆ ಪ್ರತ ಯುಗಾದಿಯು ನೀನೆ ಕ್ರತು ಹೋಮ ಯಗ್ನ ಸದ್ಗತಿಯು ನೀನೆ.
ಜಿತವಾಗಿ ಎನ್ನೋಡೆಯ ಪುರಂದರ ವಿಟ್ಠಲಾ ಶ್ರುತಿಗೆ ಸಿಲುಕದ ಮಹಾ ಮಹಿಮ ನೀನೆ.

ಆದಿತ್ಯಹೃದಯಮ್




|| ಆದಿತ್ಯಹೃದಯಮ್||

ತತೋ ಯುದ್ಧಪರಿಶ್ರಾನ್ತಂ ಸಮರೇ ಚಿನ್ತಯಾ ಸ್ಥಿತಮ್|
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್|| ೧||

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್|
ಉಪಾಗಮ್ಯಾಬ್ರವೀದ್ರಾಮಮಗಸ್ತ್ಯೋ ಭಗವಾನ್ ಋಷಿಃ|| ೨||

ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್|
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ|| ೩||

ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್|
ಜಯಾವಹಂ ಜಪೇನ್ನಿತ್ಯಮ್ ಅಕ್ಷಯ್ಯಂ ಪರಮಂ ಶಿವಮ್|| ೪||

ಸರ್ವಮಙ್ಗಲಮಾಙ್ಗಲ್ಯಂ ಸರ್ವಪಾಪಪ್ರಣಾಶನಮ್|
ಚಿನ್ತಾಶೋಕಪ್ರಶಮನಮ್ ಆಯುರ್ವರ್ಧನಮುತ್ತಮಮ್|| ೫||

ರಶ್ಮಿಮಂತಂ ಸಮುದ್ಯನ್ತಂ ದೇವಾಸುರನಮಸ್ಕೃತಮ್|
ಪೂಜಯಸ್ವ ವಿವಸ್ವನ್ತಂ ಭಾಸ್ಕರಂ ಭುವನೇಶ್ವರಮ್|| ೬||

ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ|
ಏಷ ದೇವಾಸುರಗಣಾಂಲ್ಲೋಕಾನ್ ಪಾತಿ ಗಭಸ್ತಿಭಿಃ|| ೭||

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕನ್ದಃ ಪ್ರಜಾಪತಿಃ|
ಮಹೇನ್ದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ|| ೮||

ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ|
ವಾಯುರ್ವಹ್ನಿಃ ಪ್ರಜಾಪ್ರಾಣ ಋತುಕರ್ತಾ ಪ್ರಭಾಕರಃ|| ೯||

ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್|
ಸುವರ್ಣಸದೃಶೋ ಭಾನುರ್ಹಿರಣ್ಯರೇತಾ ದಿವಾಕರಃ|| ೧೦||

ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿರ್ಮರೀಚಿಮಾನ್|
ತಿಮಿರೋನ್ಮಥನಃ ಶಮ್ಭುಸ್ತ್ವಷ್ಟಾ ಮಾರ್ತಾಣ್ಡ ಅಂಶುಮಾನ್|| ೧೧||

ಹಿರಣ್ಯಗರ್ಭಃ ಶಿಶಿರಸ್ತಪನೋ ಭಾಸ್ಕರೋ ರವಿಃ|
ಅಗ್ನಿಗರ್ಭೋಽದಿತೇಃ ಪುತ್ರಃ ಶಙ್ಖಃ ಶಿಶಿರನಾಶನಃ|| ೧೨||

ವ್ಯೋಮನಾಥಸ್ತಮೋಭೇದೀ ಋಗ್ಯಜುಃಸಾಮಪಾರಗಃ|
ಘನವೃಷ್ಟಿರಪಾಂ ಮಿತ್ರೋ ವಿನ್ಧ್ಯವೀಥೀಪ್ಲವಙ್ಗಮಃ|| ೧೩||

ಆತಪೀ ಮಣ್ಡಲೀ ಮೃತ್ಯುಃ ಪಿಙ್ಗಲಃ ಸರ್ವತಾಪನಃ|
ಕವಿರ್ವಿಶ್ವೋ ಮಹಾತೇಜಾಃ ರಕ್ತಃ ಸರ್ವಭವೋದ್ಭವಃ|| ೧೪||

ನಕ್ಷತ್ರಗ್ರಹತಾರಾಣಾಮಧಿಪೋ ವಿಶ್ವಭಾವನಃ|
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್ ನಮೋಽಸ್ತು ತೇ|| ೧೫||

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ|
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ|| ೧೬||

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ|
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ|| ೧೭||

ನಮ ಉಗ್ರಾಯ ವೀರಾಯ ಸಾರಙ್ಗಾಯ ನಮೋ ನಮಃ|
ನಮಃ ಪದ್ಮಪ್ರಬೋಧಾಯ ಮಾರ್ತಾಣ್ಡಾಯ ನಮೋ ನಮಃ|| ೧೮||

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯವರ್ಚಸೇ|
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ|| ೧೯||

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾಮಿತಾತ್ಮನೇ|
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ|| ೨೦||

ತಪ್ತಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ|
ನಮಸ್ತಮೋಽಭಿನಿಘ್ನಾಯ ರುಚಯೇ ಲೋಕಸಾಕ್ಷಿಣೇ|| ೨೧||

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ|
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ|| ೨೨||

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ|
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿಹೋತ್ರಿಣಾಮ್|| ೨೩||

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ|
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ|| ೨೪||

|| ಫಲಶ್ರುತಿಃ||

ಏನಮಾಪತ್ಸು ಕೃಚ್ಛ್ರೇಷು ಕಾನ್ತಾತೇಷು ಭಯೇಷು ಚ|
ಕೀರ್ತಯನ್ ಪುರುಷಃ ಕಶ್ಚಿನ್ನಾವಸೀದತಿ ರಾಘವ|| ೨೫||

ಪೂಜಯಸ್ವೈನಮೇಕಾಗ್ರೋ ದೇವದೇವಂ ಜಗತ್ಪತಿಮ್|
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ|| ೨೬||

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ|
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್|| ೨೭||

ಏತಚ್ಛ್ರುತ್ವಾ ಮಹಾತೇಜಾ ನಷ್ಟಶೋಕೋಽಭವತ್ತದಾ|
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್|| ೨೮||

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್|
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್|| ೨೯||

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್|
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋಽಭವತ್|| ೩೦||

ಅಥ ರವಿರವದನ್ನಿರೀಕ್ಷ್ಯ ರಾಮಂ
ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ|
ನಿಶಿಚರಪತಿಸಂಕ್ಷಯಂ ವಿದಿತ್ವಾ
ಸುರಗಣಮಧ್ಯಗತೋ ವಚಸ್ತ್ವರೇತಿ|| ೩೧||


ಆದಿತ್ಯ ಹೃದಯಂ - ಇಲ್ಲಿ ಕೇಳಬಹುದಾಗಿದೆ

Saturday, January 10, 2009

ಸ್ಕಂದ ಶೋಡಷಂ



ಷಡ್ವಕ್ತ್ರಂ ಶಿಖಿವಾಹನಂ ತ್ರಿನಯನಂ ಚಿತ್ರಾಂಬರಾಲಂಕ್ರಿತಂ
ಶಕ್ತಿಂ ವಜ್ರಮಥೊ ತ್ರಿಶೂಲಮಭಯಂ ಖೇಟಂ ಧನುಃ ಸ್ವಸ್ತಿಕಂ
ಪಾಶಂ ಕುಕ್ಕುಟಮಂಕುಶಂಚ ಧೋರ್ಭಿರ್ಧಧಾನಾಂ ಸದಾ
ಧ್ಯಾಯೇದೇಪ್ಸಿತ ಸಿದ್ಧಿದಂ ಶಿವಸುತಂ ಸ್ಕಂದಂ ಸುರಾರಾದಿತಂ
ಸುಬ್ರಹ್ಮಣ್ಯಂ ಪ್ರಣಮಾಮ್ಯಹಂ ಸರ್ವಙ್ನ ಸರ್ವದಾ ಸದಾ
ಅಭೀಷ್ಟ ಫಲ ಸಿದ್ಯರ್ಥಂ ಪ್ರವಕ್ಷ್ಯೇ ನಾಮ ಶೋಡಷಂ

Sunday, January 4, 2009

ರತ್ನಗರ್ಭ ಗಣಪತಿ


ಓಂ ರತ್ನಗರ್ಭ ಗಣಪತಿಂ ಸಮಾಶ್ರಯಾಮಿ ಸಂತತಂ
ರತ್ನ ವಚನ ಗೀಯಮಾನ ನಿಜ ಚರಿತ್ರ ವೈಭವಂ
ತುಮುಲಯೇಶ ಶೇಖರಂ ಪ್ರಣವಮಯ ಸ್ವರೂಪಿನಂ
ಶಿವಸುತಂ ಭವದಮಖಿಲ ಭುವನ ಮಂಗಳಪ್ರದಂ
ರತ್ನಗರ್ಭ ಗಣಪತಿಂ ಪಾಹಿಮಾಂ ಪಾಹಿಮಾಂ
ರತ್ನಗರ್ಭ ಗಣಪತಿಂ ರಕ್ಷಮಾಂ ರಕ್ಷಮಾಂ

ಭಿನ್ನದಂತಮಖಿಲ ದೇಹ ಸನ್ನುತಂ ದಯಾನ್ವಿತಂ
ಪನ್ನಗೋಪ ವೀತಮಾನ ಪನ್ನಪಾದಮಾದರಂ
ಕಷ್ಯಪಾದಿ ಮೌನಿಹೃದಯ ಕಮಲ ಕುಹುಲ ಮಧುಕರಂ
ಋಷ್ಯಶ್ರಿಂಗ ಪ್ರಳಯತೀಂದ್ರ ವಷ್ಯಮಿಷ್ಟದಾಯಕಂ
ರತ್ನಗರ್ಭ ಗಣಪತಿಂ ಪಾಹಿಮಾಂ ಪಾಹಿಮಾಂ
ರತ್ನಗರ್ಭ ಗಣಪತಿಂ ರಕ್ಷಮಾಂ ರಕ್ಷಮಾಂ

Click here to listen

Friday, January 2, 2009

ಎಲ್ಲಿ ಹನುಮನೊ ಅಲ್ಲಿ ರಾಮನು




*********
ಎತ್ತಲೊ ಮಾಯವಾದ ಮುತ್ತಿನ ಮೂಗುತಿ ನೀನು
ಎತ್ತಿತಂದೆ ಎಲ್ಲಿಂದ ರಾಯ? ಮುತ್ತೆತ್ತ ರಾಯ.

ಅತ್ತಾ ಸೀತಮ್ಮನ ಮುದ್ದು ಮೊಗದಲ್ಲಿ ಮತ್ತೆ
ನಗೆಯ ತಂದೆಯಾ ಮಹನೀಯಾ? ಮಾರುತಿರಾಯ!

ಸೀತಮ್ಮ ಸ್ನಾನ ಮಾಡಿ, ಮೂಗುತಿಯ ಹುಡುಕಾಡಿ
ನಿನ್ನ ಕೂಗಿದಳೇನು ಹನುಮಂತ ರಾಯ!

ನೀರಲ್ಲಿ ಬಾಲ ಬಿಟ್ಟು ನದಿಯನ್ನೆ ಶೋಧಿಸಿದೆ
ಎಂತ ಶ್ರದ್ಧೆಯೋ ಮಹನೀಯಾ, ಹನುಮಂತ ರಾಯ!

ಅಮ್ಮಾ ಸೀತಮ್ಮನು ನಿನ್ನ ಭಕ್ತಿಗೆ ಮೆಚ್ಚಿ ಮುತ್ತೆತ್ತೆರಾಯನೆಂದು ಹರಸಿದಳೇನು?
ನಿನ್ನಂತ ದಾಸನನು ಪಡೆದಾ ಶ್ರೀ ರಾಮನು ಎಂಥ ಭಾಗ್ಯವಂಥನಯ್ಯ, ಹನುಮಂತ ರಾಯ

ನಿನ್ನಂತೆ ಭಕ್ತಿ ಇಲ್ಲ, ನಿನ್ನಂತೆ ಶಕ್ತಿ ಇಲ್ಲ.
ಏನೂ ಇಲ್ಲದ ಜೀವ ನನ್ನದು ಸ್ವಾಮಿ
ನಿನ್ನೆ ನಾ ನಂಬಿ ಬಂದೆ ನೀನೆ ನನ್ನ ತಾಯಿ ತಂದೆ.
ಕಾಪಾಡುವಾ ಹೊಣೆಯು ನಿನ್ನದು, ತಂದೆ ನಿನ್ನದು.

’*******

ಎಲ್ಲಿ ಹನುಮನೊ ಅಲ್ಲಿ ರಾಮನು ಎಲ್ಲಿ ರಾಮನೊ ಅಲ್ಲಿ ಹನುಮನು
ರಾಮನೆ ಉಸಿರೇ ಹನುಮಾ, ಹನುಮನ ಪ್ರಾಣವೇ ರಾಮಾ

ಎಲ್ಲಿ ನೆನೆದರು ಅಲ್ಲಿಯೇ ಇರುವನು; ಎಲ್ಲಿ ಕರೆದರು ಅಲ್ಲಿ ಬರುವನು
ನೆರಳಿನಂತೆಯೆ ಬಳಿಯಲಿರುವನು, ಕರುಣೆಯಿಂದಲಿ ಸುಖ ಶಾಂತಿ ನೀಡುವ ಮುಖ್ಯಪ್ರಾಣ

ಮಂತ್ರಾ, ತಂತ್ರಾ ಕೇಳನು, ಸ್ತೋತ್ರ ಮಾಡುತಾ ತನ್ನ ಹೊಗಳು ಎನ್ನನು
ಪ್ರೇಮದಿಂದ ನೀ ಕರೆಯೆ ಬರುವನು, ಭಕ್ತನೊಬ್ಬನೆ ಅವನ ಗೆಲವನು ಎಂದೆಂದು

ಸ್ಮರಣೆ ಮಾತ್ರದಿ ಮನೆದಿ ಬೆರೆವನು, ಕಾಮ ಕ್ರೋಧ ಕ್ಷಣದಲ್ಲಿ ದಹಿಸಿ ಬಿಡುವನು
ಶಾಂತಿ ಕೊಡುವನು ನೆಮ್ಮದಿಯ ತರುವನು ಮನಸಿಗೆ ಮಹದಾನಂದ ನೀಡುವ ಮುಖ್ಯ ಪ್ರಾಣ

’******

ನಿನ್ನಂತೆ ನಾನಾಗಲಾರೆ ಏನುಮಾಡಲಿ ಹನುಮ
ನಿನ್ನಂತಾಗದೆ, ನನ್ನವನಾಗನೆ ನಿನ್ನ ಪ್ರಭು ಶ್ರೀ ರಾಮ

ಏಟುಕದ ಹಣ್ಣನೆ ನಾ ತರಲಾರೆ ಮೇಲಕೆ ಎಗರಿ ಹನುಮ
ಸೂರ್ಯನ ಹಿಡಿವ ಸಾಹಸಕಿಳಿದರೆ ಆ ಕ್ಷಣ ನಾ ನಿರ್ನಾಮ
ಹಾದಿಯ ಹಳ್ಳವೆ ದಾಟಲಸಾಧ್ಯ ಹೀಗಿರುವಾಗ ಹನುಮ
ಸಾಗರ ದಾಟುವ ಹಂಬಲ ಸಾಧ್ಯವೆ ಅಯ್ಯೋ ರಾಮರಾಮ

ಜಗಳ ಕಂಡರೆ ಓಡುವೆ ದೂರ ಎದೆಯಲಿ ಡವ ಡವ ಹನುಮ
ರಕ್ಕಸರಾ ನಾ ಕನಸಲಿ ಕಂಡರು ಬದುಕಿಗೆ ಪೂರ್ಣವಿರಾಮ
ಅಟ್ಟವ ಹತ್ತಲೆ ಶಕ್ತಿಯು ಇಲ್ಲ ಅಂತ ದೇಹವು ಹನುಮಾ
ಬೆಟ್ಟವನೆತ್ತುವೆನೆಂದರೆ ನನ್ನನು ನಂಬುವನೆ ಶ್ರೀರಾಮ?

ಕನಸಲಿ ಮನಸಲಿ ನಿನ್ನ ಉಸಿರಲಿ ತುಂಬಿದೆ ರಾಮನನಾಮ
ಚಂಚಲವಾದ ನನ್ನ ಮನದಲಿ ನನ್ನೀ ಮನದಲಿ ನಿಲ್ಲುವರಾರೂ ಹನುಮ
ಭಕ್ತಿಯು ಇಲ್ಲ ಶಕ್ತಿಯು ಇಲ್ಲ ಹುಟ್ಟಿದೆ ಯಾತಕೊ ಕಾಣೆ
ನೀ ಕೃಪೆಮಾಡದೆ ಹೋದರೆ ಹನುಮ ನಿನ್ನಯ ರಾಮನ ಆಣೇ

’ ********

ಗೋವಿಂದ ಗೋವಿಂದ ಶ್ರೀ ಶ್ರೀನಿವಾಸ



ಗೋವಿಂದ ಗೋವಿಂದ ಶ್ರೀ ಶ್ರೀನಿವಾಸ - ಪಾರುಪಲ್ಲಿ ರಂಗನಾಥ್ ಅವರು ಸಂಗೀತ ಸಂಯೋಜಿಸಿ ಹಾಡಿರುವ ಈ ಕ್ಯಾಸೆಟ್ ಕೇಳಿಕೊಂಡು ತಿರುಪತಿ ಬೇಟ್ಟ ಹತ್ತುವುದು ಎಂದರೆ ಪರಮ ಸೌಭಾಗ್ಯ. ಗೀತರಚನೆ ಶ್ರೀಯುತ ವಿ.ಸೂರ್ಯನಾರಾಯಣ ರಾವ್

ಹಾಡುಗಳನ್ನು ಲಾಲಿಸುವುದಕ್ಕೆ ಇಲ್ಲಿ ಕ್ಲಿಕ್ಕಿಸಿ : ಗೋವಿಂದ ಗೋವಿಂದ ಶ್ರೀ ಶ್ರೀನಿವಾಸ

೧.ಜಯ ವೆಂಕಟೇಶನೆ ಸಂಕಟ ಹರಣನೆ

ಜಯ ವೆಂಕಟೇಶನೆ ಸಂಕಟ ಹರಣನೆ ಜಯ ಭೋ
ಜಯ ನಮ್ಮಪ್ಪ ವೆಂಕಪ್ಪ ನಾಗಾಧೀಶನೆ ಜಯ ಭೋ

ನಂಬಿದ ಭಕ್ತರಿಗೆಲ್ಲ ಜಯವು ತಜ್ಯವು(?)
ತಜ್ಯವು(?) ದೇವ ನಿನ್ನ ದಾಸರಿಗೆ ಶಾಂತಿ ಭೋಗಗಳು
ನಿನ್ನ ದರುಶನವು ಹೊಂದಿದ ಕ್ಷಣವೇ ನಮಗೂ ಶಾಂತಿಯು
ನಿನ್ನ ದರುಶನದ ದಿವ್ಯಭಾಗ್ಯವೆ ಸೌಭಾಗ್ಯವು

ಏಳು ಬೆಟ್ಟಗಳ ಹತ್ತುವ ಕಾರ್ಯವು ನಮ್ಮ ಸಾಧನೆಯು
ನಾಮಸ್ಮರಣೆಯ ಮಾಡುವ ಕಾರ್ಯವು ನಮ್ಮ ಜೀವನವು
ನಂಬಿದ ನಮ್ಮನು ಕಾಯುವ ಕಾರ್ಯವು ನಿನ್ನ ಭಾರವೆಲೊ
ಕರುಣೆಯ ತೋರುತ ವರಗಳ ನೀಡುತ ಪೊರೆಯೊ ತಂದೆ

ಧ್ಯಾನಿಪ ಭಕ್ತನ ಹೃದಯದೆ ನೆಲೆಸಿದ ದೈವವು ನೀನಯ್ಯ
ಕರ್ಮದ ಮರ್ಮವನರಿಯಲು ಕಾರಣವಯ್ಯ ನಿನ್ನ ದಯಾ
ಬಂಧವ ಬಿಡಿಸಿ ಪರಿರಕ್ಷಿಸುವ ಬಾಂಧವ ನೀನಯ್ಯ
ಬಂಧ ಮೋಕ್ಷಗಳ ಭಾವನನಿರಿಯದ ಬಡವನು ನಾನಯ್ಯ

*********


೨. ಮಹಿತ ವೇದ ವಿಹಿತನೆ.

ಮಹಿತ ವೇದ ವಿಹಿತನೆ ವೇಂಕಟೇಶನೆ
ಇಹಪರಗಳು ನಿನ ವರಗಳು ಶ್ರೀನಿವಾಸನೆ
ಕರುಣಾರಸ ವರುಣಾಲಯ ಕಮಲಾಪ್ರಿಯಾ
ಉರಗಶಯನ ಗರುಡಗಮನ ಉರಾಗಾದ್ರೀಶ

ಕೈವಲ್ಯವ ಬಿಟ್ಟು ಜನರಿಗಾಗಿ ನೀನು
ಗಿರಿ ಶಿಖರದ ಮೇಲೆ ನೆಲೆಸಿರುವೆಯೊ ದೇವ
ದೇವಾ ನೀನಿರುವ ಸ್ಥಳವು ನಿಜ ಕೈವಲ್ಯ
ನಿನ್ನ ದಿವ್ಯ ದರುಶನವೇ ನಮ್ಮ ಭಾಗ್ಯ

ಶರಣು ಶರಣು ಶರಣೆಂಬೆನು ತಿರುಮಲ ತಿಮ್ಮಪ್ಪ
ಚರಣ ಕಮಲಗಳ ನಂಬಿಹೆ ಪರಿಪಾಲನೆ ಮಾಡೋ

ತಪ್ಪದೆ ದಾಸರ ಕಾಯುವ ದಯಾಸಾಗರ
ತಪ್ಪುಗಳನು ಗಣಿಸದ ವೆಂಕಪ್ಪ ನೀನೆ.
ತಂದೆ ತಾಯಿ ನೀನೆ ಶೆಷಾದ್ರಿವಾಸನೆ
ವಾಸವಾದಿ ವಂದಿತನೆ ವಾಸುದೇವನೆ.

************

೩. ಸಿರಿಸತಿ ಚಿತ್ತವ


ಸಿರಿಸತಿ ಚಿತ್ತವ ಹರಿಸಿದ ಚೋರನೆ ಶ್ರೀವೆಂಕಟೇಶನೆ
ದುರಿತಗಳನು ಗಛ್ಚಾಳನೆ ಮಾಡುವ ಕೋನೇರಿರಾಯನೆ
ಪಾಪಹರ ಚಕ್ರಧರ ಪಾಲನೆಮಾಡೋ ಪರಮಾತ್ಮ
ತಿರುಪತಿ ವೆಂಕಟರಮಣ ರಕ್ಷಿಸು ಕರುಣಾಭರಣ

ಸಾಸಿರ ನಾಮದ ಸಾರ್ವಭೌಮನೆ ಸಾಕಾರದೇವನೆ
ಸಕಲವು ನಿನ ಸಂಕಲ್ಪದ ಮಹಿಮೆ ಸಕಲವು ಅರಿತವನೆ , ಪ್ರಭುವೆ.
ಪಾಪಹರ ಚಕ್ರಧರ ಪಾಲನೆಮಾಡೋ ಪರಮಾತ್ಮ
ತಿರುಪತಿ ವೆಂಕಟರಮಣ ರಕ್ಷಿಸು ಕರುಣಾಭರಣ


ವಿಧವಿಧರೂಪದಿ ವಿಶ್ವವ ಪೊರೆವ ಅವತಾರಾನ್ವಿತನೆ
ನಾಮರೂಪಗಳ ಲೀಲಾಮಯನೆ ನಾಗಾದ್ರಿನಾಥನೆ
ಪಾಪಹರ ಚಕ್ರಧರ ಪಾಲನೆಮಾಡೋ ಪರಮಾತ್ಮ
ತಿರುಪತಿ ವೆಂಕಟರಮಣ ರಕ್ಷಿಸು ಕರುಣಾಭರಣ

******
೪.ಏಳು ಬೆಟ್ಟಗಳ ಅರಸ

ಏಳು ಬೆಟ್ಟಗಳ ಅರಸ ಜಗದೀಶ ಆಳುವಾ ದೊರೆ ನೀನಯ್ಯ
ನಿರ್ಮಲಾಂತಃಕರಣನೆ ಶ್ರೀಕರನೆ ನಿಗಮಪ(?)ತಿ ಉದ್ಧಾರನೆ
ದಯೆ ತೋರಿಸೊ, ನೀ ಪಾಲಿಸೋ ಕಾಪಾಡೆಲೊ ನೀ ದಯಾಳೋ

ದೀನ ಜನ ಮಂದಾರ ತ್ರಿಗುಣಗಳ ಸಂಹಾರ ಎನೆಗೆ ಸಕಲವೂ ನೀನೆಲೊ
ತಿರುಮಲೆಯ ಗಿರಿ ಮೇಲೆ ವರಗಳನು ವರ್ಷಿಸುವ ಪರಮದೈವವು ನೀನೆಲೊ
ದಯೆ ತೋರಿಸೊ, ನೀ ಪಾಲಿಸೋ ಕಾಪಾಡೆಲೊ ನೀ ದಯಾಳೋ

ನಿನ್ನ ದಯ ಬಯಸಿ ನಿನ್ನ ಸನ್ನಿಧಿಗೆ ಬಂದಿರುವ ಬಡವ ಭಕ್ತರ ಕಾಣೆಲೋ
ಎಲ್ಲೆ ಇಲ್ಲದಂತ ನಿನ ಕರುಣೆಯನು ಪಸರಿಸಿ ಚರಿತಾರ್ಥರನ್ನಾಗಿಸೊ
ದಯೆ ತೋರಿಸೊ, ನೀ ಪಾಲಿಸೋ ಕಾಪಾಡೆಲೊ ನೀ ದಯಾಳೋ

*********