Sunday, December 28, 2008

ಶಿವತಾಂಡವಸ್ತೋತ್ರಮ್


ಜಟಾಟವೀಗಲಜ್ಜಲಪ್ರವಾಹಪಾವಿತಸ್ಥಲೆ
ಗಲೇವಲಂಬ್ಯ ಲಮ್ಬಿತಾಂ ಭುಜಂಗತುಂಗಮಾಲಿಕಾಮ್ |
ಡಮಡ್ಡಮಡ್ಡಮಡ್ಡಮನ್ನಿನಾದವಡ್ಡಮರ್ವಯಂ
ಚಕಾರ ಚಂಡಾಂಡವಂ ತನೊತು ನಃ ಶಿವಃ ಶಿವಮ್ || ೧||

ಜಟಾಕಟಾಹಸಂಭ್ರಮಭ್ರಮನ್ನಿಲಿಂಪನಿರ್ಝರೀ
ವಿಲೋಲವೀಚಿವಲ್ಲರೀವಿರಾಜಮಾನಮೂರ್ಧನಿ |
ಧಗದ್ಧಗದ್ಧಗಜ್ಜ್ವಲಲ್ಲಲಾಟಪಟ್ಟಪಾವಕೆ
ಕಿಶೋರಚಂದ್ರಶೇಖರೇ ರತಿಃ ಪ್ರತಿಕ್ಷಣಂ ಮಮ || ೨||

ಧರಾಧರೇಂದ್ರನಂದಿನೀವಿಲಾಸಬಂಧುಬಂಧುರ
ಸ್ಫುರದ್ದಿಗಂತಸಂತತಿಪ್ರಮೋದಮಾನಮಾನಸೆ |
ಕೃಪಾಕಟಾಕ್ಷಧೊರಣೀನಿರುದ್ಧದುರ್ಧರಾಪದಿ
ಕ್ವಚಿದ್ದಿಗಂಬರೇ ಮನೋ ವಿನೋದಮೆತು ವಸ್ತುನಿ || ೩||

ಲತಾಭುಜಂಗಪಿಂಗಲಸ್ಫುರತ್ಫಣಾಮಣಿಪ್ರಭಾ
ಕದಂಬಕುಂಕುಮದ್ರವಪ್ರಲಿಪ್ತದಿಗ್ವಧೂಮುಖೆ |
ಮದಾಂಧಸಿಂಧುರಸ್ಫುರತ್ತ್ವಗುತ್ತರೀಯಮೆದುರೆ
ಮನೋ ವಿನೋದಮದ್ಭುತಂ ಬಿಭರ್ತು ಭೂತಭರ್ತರಿ || ೪||

ಸಹಸ್ರಲೋಚನಪ್ರಭೃತ್ಯಶೇಷಲೇಖಶೇಖರ
ಪ್ರಸೂನಧೂಲಿಧೋರಣೀ ವಿಧೂಸರಾಂಘ್ರಿಪೀಠಭೂಃ |
ಭುಜಂಗರಾಜಮಾಲಯ ನಿಬದ್ಧಜಾಟಜೂಟಕ
ಶ್ರಿಯೈ ಚಿರಾಯ ಜಾಯತಾಂ ಚಕೋರಬಂಧುಶೇಖರಃ || ೫||

ಲಲಾಟಚತ್ವರಜ್ವಲದ್ಧನಂಜಯಸ್ಫುಲಿಂಗಭಾ
ನಿಪೀತಪಂಚಸಾಯಕಂ ನಮನ್ನಿಲಿಂಪನಾಯಕಮ್ |
ಸುಧಾಮಯೂಖಲೇಖಯಾ ವಿರಾಜಮಾನಶೇಖರಂ
ಮಹಾಕಪಾಲಿಸಂಪದೆಶಿರೋಜಟಾಲಮಸ್ತು ನಃ || ೬||

ಕರಾಲಭಾಲಪಟ್ಟಿಕಾಧಗದ್ಧಗದ್ಧಗಜ್ಜ್ವಲ
ದ್ಧನಂಜಯಾಹುತೀಕೃತಪ್ರಚಂಡಣ್ಡಪಂಚಸಾಯಕೆ |
ಧರಾಧರೇಂದ್ರನಂದಿನೀಕುಚಾಗ್ರಚಿತ್ರಪತ್ರಕ
ಪ್ರಕಲ್ಪನೈಕಶಿಲ್ಪಿನಿ ತ್ರಿಲೋಚನೆ ರತಿರ್ಮಮ || ೭||

ನವೀನಮೇಘಮಂಡಲೀ ನಿರುದ್ಧದುರ್ಧರಸ್ಫುರತ್
ಕುಹೂನಿಶೀಥಿನೀತಮಃ ಪ್ರಬಂದಬದ್ಧಕಂದರಃ |
ನಿಲಿಂಪನಿರ್ಝರೀಧರಸ್ತನೋತು ಕೃತ್ತಿಸಿಂಧುರಃ
ಕಲಾನಿಧಾನಬಂಧುರಃ ಶ್ರಿಯಂ ಜಗದ್ಧುರಂಧರಃ || ೮||

ಪ್ರಫುಲ್ಲನೀಲಪಂಕಜಪ್ರಪಂಚಕಾಲಿಮಪ್ರಭಾ
ವಲಂಬಿಕಂಠಕಂದಲೀರುಚಿಪ್ರಬದ್ಧಕಂದರಮ್ |
ಸ್ಮರಚ್ಛಿದಂ ಪುರಚ್ಛಿದಂ ಭವಚ್ಛಿದಂ ಮಖಚ್ಛಿದಂ
ಗಜಚ್ಛಿದಾಂಧಕಛಿದಂ ತಮಂತಕಚ್ಛಿದಂ ಭಜೆ || ೯||

ಅಗರ್ವ ಸರ್ವಮಂಗಲಾಕಲಾಕದಂಬಮಂಜರೀ
ರಸಪ್ರವಾಹಮಾಧುರೀ ವಿಜೃಂಭಣಾಮಧುವ್ರತಮ್ |
ಸ್ಮರಾನ್ತಕಂ ಪುರಾನ್ತಕಂ ಭವಾನ್ತಕಂ ಮಖಾನ್ತಕಂ
ಗಜಾನ್ತಕಾನ್ಧಕಾನ್ತಕಂ ತಮನ್ತಕಾನ್ತಕಂ ಭಜೆ || ೧೦||

ಜಯತ್ವದಭ್ರವಿಭ್ರಮಭ್ರಮದ್ಭುಜಂಗಮಶ್ವಸ
ದ್ವಿನಿರ್ಗಮತ್ಕ್ರಮಸ್ಫುರತ್ಕರಾಲಭಾಲಹವ್ಯವಾಟ್ |
ಧಿಮಿದ್ಧಿಮಿದ್ಧಿಮಿಧ್ವನನ್ಮೃದಂಗತುಂಗಮಂಗಲ
ಧ್ವನಿಕ್ರಮಪ್ರವರ್ತಿತ ಪ್ರಚಂಡತಾಂಡವಃ ಶಿವಃ || ೧೧||

ಸ್ಪೃಷದ್ವಿಚಿತ್ರತಲ್ಪಯೊರ್ಭುಜಂಗಮೌಕ್ತಿಕಸ್ರಜೊರ್
ಗರಿಷ್ಠರತ್ನಲೋಷ್ಠಯೋಃ ಸುಹೃದ್ವಿಪಕ್ಷಪಕ್ಷಯೋಃ |
ತೃಷ್ಣಾರವಿಂದಚಕ್ಷುಷೋ ಪ್ರಜಾಮಹೀಮಹೇಂದ್ರಯೋಃ
ಸಮಪ್ರವೃತ್ತಿಕಃ ಕದಾ ಸದಾಶಿವಂ ಭಜೆ || ೧೨||

ಕದಾ ನಿಲಿಂಪನಿರ್ಝರೀನಿಕುಂಜಕೊಟರೆ ವಸನ್
ವಿಮುಕ್ತದುರ್ಮತಿಃ ಸದಾ ಶಿರಃ ಸ್ಥಮಂಜಲಿಂ ವಹನ್ |
ವಿಮುಕ್ತಲೋಲಲೋಚನೊ ಲಲಾಮಭಾಲಲಗ್ನಕಃ
ಶಿವೇತಿ ಮಂತ್ರಮುಚ್ಚರನ್ ಕದಾ ಸುಖೀ ಭವಾಮ್ಯಹಮ್ || ೧೩||

ಇದಮ್ ಹಿ ನಿತ್ಯಮೇವಮುಕ್ತಮುತ್ತಮೋತ್ತಮಂ ಸ್ತವಂ
ಪಠನ್ ಸ್ಮರನ್ ಬ್ರುವನ್ನರೋ ವಿಶುದ್ಧಿಮೇತಿಸಂತತಮ್ |
ಹರೆ ಗುರೌ ಸುಭಕ್ತಿಮಾಶು ಯಾತಿ ನಾನ್ಯಥಾ ಗತಿಂ
ವಿಮೋಹನಂ ಹಿ ದೇಹಿನಾಂ ಸುಶಂಕರಸ್ಯ ಚಿಂತನಮ್ || ೧೪||

ಪೂಜಾವಸಾನಸಮಯೆ ದಶವಕ್ತ್ರಗೀತಂ ಯಃ
ಶಂಭುಪೂಜನಪರಂ ಪಠತಿ ಪ್ರದೋಷೆ |
ತಸ್ಯ ಸ್ಥಿರಾಂ ರಥಗಜೇಂದ್ರತುರಂಗಯುಕ್ತಾಂ
ಲಕ್ಷ್ಮೀಂ ಸದೈವ ಸುಮುಖಿಂ ಪ್ರದದಾತಿ ಶಂಭುಃ || ೧೫||

ಇತಿ ಶ್ರೀರಾವಣ ಕೃತಮ್ ಶಿವ ತಾಂಡವ ಸ್ತೋತ್ರಮ್ ಸಂಪೂರ್ಣಮ್

Saturday, December 27, 2008

ಸ್ವಾಮಿನಾಥ ಪರಿಪಾಲಯಯಾಶು ಮಾಂ


ಸ್ವಾಮಿನಾಥ ಪರಿಪಾಲಯಯಾಶು ಮಾಂ
ಸ್ವಪ್ರಕಾಶ ವಲ್ಲೀಶ ಗುರುಗುಹ ದೇವಸೇನೆಶ

ಕಾಮಜನಕ ಭಾರತೀಶ ಸೇವಿತ
ಕಾರ್ತಿಕೇಯ ನಾರದಾದಿ ಭಾವಿತ
ವಾಮದೇವ ಪಾರ್ವತಿ ಸುಕುಮಾರ
ವಾರಿಜಾಸ್ತ್ರ ಸಮ್ಮೋಹಿತಾಕಾರ

ಕಾಮಿತಾರ್ಥ ವಿತರಣ ನಿಪುಣ ಚರಣ ಕಾವ್ಯ ನಾಟಕಾಲಂಕಾರ ಭರಣ
ಭುಮಿಜಲಾಗ್ನಿ ವಾಯುಗಗನಕಿರಣ ಭೊಧರೂಪ ನಿತ್ಯಾನಂದ ಕರಣ

Sunday, November 30, 2008

ಕಮಲಾಪ್ತ ಕುಲ


ಕಮಲಾಪ್ತ ಕುಲ ಕಳಶಾಭ್ಧಿಚಂದ್ರ ಕಾವವಯ್ಯನ್ನನ್ನು ಕರುಣಾಸಮುದ್ರ ||ಪ||
ಕಮಲಾಕಳತ್ರ ಕೌಸಲ್ಯಾಸುಪುತ್ರ ಕಾಮನೀಯಗಾತ್ರ ಕಾಮಾರಿಮಿತ್ರ || ಅನು ||

ಮುನುದಾಸುಲ ಬ್ರೋಚಿನದೆಲ್ಲ ಚಾಲ ವಿನಿ ನೀ ಚರಣಶ್ರಿತುಡೈತಿನಯ್ಯ
ಕನಿಕರಂಬುನ ನಾಕಭಯಮೀಯವಯ್ಯ ವನಜಲೋಚನ ಶ್ರೀತ್ಯಾಗರಾಜ ವಿನುತ ||ಚ||

-- ೨೨ನೇ ಖರಹರಪ್ರಿಯಜನ್ಯ ಬೃಂದಾವನಸಾರಂಗರಾಗ ಮತ್ತು ದೇಶಾದಿ ತಾಳದಲ್ಲಿ ಸದ್ಗುರು ಶ್ರೀ ತ್ಯಾಗರಾಜರ ಕೃತಿ -- ಕಮಲಾಪ್ತಕುಲ

Sunday, November 23, 2008

ತಿರುಪತಿಗಿರಿ ವಾಸ ಶ್ರೀ ವೇಂಕಟೇಶ



ಕಲ್ಯಾಣದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ |
ಶ್ರೀಮದ್ ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ||

ತಿರುಪತಿಗಿರಿ ವಾಸ ಶ್ರೀ ವೇಂಕಟೇಶ
ನೀನೊಲಿದ ಮನೆ ಮನೆಯು ಲಕ್ಷ್ಮಿ ನಿವಾಸ
ಅಖಿಲಾಂಡ ಕೋಟಿ ಬ್ರಹ್ಮಾಂಡ ಪಾಲ
ಅಲಮೇಲುಮಂಗ ಮನೊಲ್ಲಾಸ ಲೋಲ
ಪಂಕಜಲೋಚನ ಪತಿತೋದ್ದಾರ ಸಂಕಟಹರಣ ಸುಧಾರಸಧಾರ
ಶಂಖ ಚಕ್ರಧರ ಶ್ರೀಕರ ಸುಂದರ ನಿತ್ಯ ವಿನೂತನ ಸಾಕ್ಷಾತ್ಕಾರ
ವೇದ ಶಾಸ್ತ್ರ ಸಾರ ಸಕಲ ಸೂತ್ರಧಾರ ಶಿರಸಾ ನಮಾಮಿ ಮನಸಾ ಸ್ಮರಾಮಿ

ಇಂದು ಎನಗೆ ಗೋವಿಂದ


ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ ತೋರೋ ಮುಕುಂದನೇ....ಮುಕುಂದನೇ
ಸುಂದರ ವದನನೇ ನಂದ ಗೋಪಿಯ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ ||ಪ||

ನೊಂದೇನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೇ ಕುಂದಿದೇ ಜಗದೊಳು
ಕಂದನಂತೆಂದೆನ್ನ ಕುಂದುಗಳ ಎಣಿಸದೇ
ತಂದೆ ಕಾಯೋ ಕೃಷ್ಣ ಕಂದರ್ಪ ಜನಕನೇ |

ಧಾರುಣಿಯೊಳು ಬಲುಭಾರ ಜೀವನನಾಗಿ
ದಾರಿ ತಪ್ಪಿ ನಡೆದೆ...ಸೇರಿದೆ ಕುಜನರಾ
ಆರುಕಾಯುವರಿಲ್ಲ ಸಾರಿದೆ ನಿನಗಯ್ಯ
ಧೀರ ವೇಣುಗೋಪಾಲ ಪಾರುಗಾಣಿಸೋ ಹರಿಯೇ |

Saturday, November 22, 2008

ಸಾರಿದೆನೊ ನಿನ್ನ ವೆಂಕಟರಮಣ.



ಸಾರಿದೆನೊ ನಿನ್ನ ವೆಂಕಟರಮಣ.
ನೀರಜನಯನ ನಿಶ್ಚಲ ಗುಣ ಪರಿಪೂರ್ಣ.

ಅನಾಥನು ನಾ ಎನಗೆ ಬಂಧುವು ನೀನು
ನಿನ್ನವರಂತೆ ನೊಡೋ ನೀನಾಗಿ ದಯಮಾಡೋ

ಏನ್ನ ಕುಂದುಗಳನ್ನು ಎಣಿಸಲಾಗದೊ ದೇವ
ಪನ್ನಗಾಚಲವಾಸ ನೀನೆ ಕಾಯೋ
ದೇಶ ದೇಶದವರ ಪೊರವಂತೆ ಪೊರಯೆನ್ನ
ಶೇಶಾಚಲಘನ್ನ ಶ್ರೀಷ ಶ್ರೀಹಯವದನ

ಓಡಿ ಬಾರಯ್ಯ




ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯೇ ||

ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ ಕೂಡಿ ಪಾಡಿ ಪೊಗಳುವೆನು ಪರಮ ಪುರುಷ ಹರಿಯೇ ||

ಮಂಗಳಾತ್ಮಕ ಮೋಹನಕಾಯ ರಂಗ ಸಂಗೀತಲೋಲ ಸದ್ಗುಣ ಶೀಲ
ಅಂಗನೇಯರಿಗೆಲ್ಲ ಅತಿಪ್ರಿಯನಾದ ಶುಭಾಂಗ ಶ್ರೀಪುರಂದರ ವಿಠಲರಾಯ ಶ್ರೀ... ||

ಶ್ರೀ ಕಮಲಾಂಬಿಕೆ



ಶ್ರೀರಾಗದ ಮುತ್ತುಸ್ವಾಮಿ ದೀಕ್ಷಿತರ ಕಮಲಾಂಬಿಕಾ ನವಾವರಣ ಮಂಗಳ ಕೃತಿ

ಶ್ರೀ ಕಮಲಾಂಬಿಕೆ ಶಿವೆ ಪಾಹಿಮಾಂ ಲಲಿತೆ
ಶ್ರೀಪತಿ ವಿನುತೆ ಸಿತಾಸಿತೆ ಶಿವಸಹಿತೆ || ಪ ||

ಸಮಸ್ತಿ ಚರಣ

ರಾಕಾಚಂದ್ರಮುಖಿ ರಕ್ಷಿತಕೊಲಮುಖಿ ರಮಾವಾಣಿಸಖಿ ರಾಜಯೋಗ ಸುಖಿ
ಶಾಕಂಬರಿ ಶಾತೋಧರಿ ಚಂದ್ರಕಳಾಧರಿ ಶಂಕರಿ ಶಂಕರ ಗುರುಗುಹ ಭಕ್ತವಶಂಕರಿ
ಏಕಾಕ್ಷರಿ ಭುವನೇಶ್ವರಿ ಈಶಾಪ್ರಿಯಕರಿ ಶ್ರೀಕರಿ ಸುಖಕರಿ ಶ್ರೀಮಹಾತ್ರಿಪುರಸುಂದರಿ

ಶ್ರೀರಾಮ ನಾಮಂ

ಶ್ರೀರಾಮ ನಾಮಂ ಮರುವಾಂ ಮರುವಾಂ
ಸಿದ್ಧಮು ಯಮುನಕು ವೆರುವಾಂ ವೆರುವಾಂ
ಗೋವಿಂದನೀವೇಳ ಗೊಲುದಾಂ ಗೊಲುದಾಂ
ದೇವುನಿ ಗುಣಮುಲು ದಲುದಾಂ ದಲುದಾಂ


ವಿಷ್ಣು ಕಥಲು ಚೆವುಲ ವಿಂದಾಂ ವಿಂದಾಂ
ವೇರೆ ಕಥಲು ಚೆವುಲ ಮಂದಂ ಮಂದಂ
ರಾಮಾದಾಸುಲು ಮಾಕು ಸಾರಂ ಸಾರಂ
ಕಾಮಾದಾಸುಲು ಮಾಕು ದೂರಂ ದೂರಂ

ಅವನೀಜಪತಿ ಸೇವ ಮಾನಂ ಮಾನಂ
ಮರಿಯೋಕ ಜೋಲಂಟೆ ಮೌನಂ ಮೌನಂ
ಶ್ರೀಭದ್ರಗಿರಿಶುಣಿ ಕಂದಾಂ ಕಂದಾಂ
ಭದ್ರಮುತೋ ಮನಮುಂದಾಂ ಉಂದಾಂ

Thursday, May 8, 2008

ಜಯದೇವ ಅಷ್ಟಪದಿ

************

ಜಯದೇವ ಅಷ್ಟಪದಿ

ಶ್ರಿತಕಮಲಾಕುಚ ಮಂಡಲ ಧ್ರುತಕುಂಡಲ ಹೇ
ಕಲಿತಲಲಿತವನಮಾಲ ಜಯಜಯದೇವ ಹರೇ |

ದಿನಮಣಿಮಂಡಲ ಮಂಡನ ಭವಖಂಡನ ಹೇ
ಮುನಿಜನಮಾನಸಹಂಸ ಜಯಜಯದೇವ ಹರೇ |

ಕಾಲಿಯವಿಷಧರಗಂಜನ ಜನರಂಜನ ಹೇ
ಯದುಕುಲನಲಿನದಿನೇಶ ಜಯಜಯದೇವ ಹರೇ |

ಮಧುಮುರನರಕವಿನಾಶನ ಗರುಡಾಸನ ಹೇ
ಸುರಕುಲಕೇಲಿನಿದಾನ ಜಯಜಯದೇವ ಹರೇ |

ಅಮಲಕಮಲದಲಲೋಚನ ಭವಮೋಚನ ಹೇ
ತ್ರಿಭುವನಭುವನನಿಧಾನ ಜಯಜಯದೇವ ಹರೇ |

ಜನಕಸುತಾಕೃತಭೂಷಣ ಜಿತದೂಷಣ ಹೇ
ಸಮರಶಮಿತದಶಕಂಠ ಜಯಜಯದೇವ ಹರೇ |

ಅಭಿನವಜಲಧರಸುಂದರ ಧ್ರುತಮಂದಿರ ಹೇ
ಶ್ರೀಮುಖಚಂದ್ರಚಕೋರ ಜಯಜಯದೇವ ಹರೇ |

ಶ್ರೀ ಜಯದೇವಕವೇರಿದಂ ಕುರುತೇ ಮುದಂ ಹೇ
ಮಂಗಲಮುಜ್ವಲಗೀತಂ ಜಯಜಯದೇವ ಹರೇ |

************

ಅನಿಲತರಲಕುವಲಯನಯನೇನ
ತಪತಿ ನ ಸಾ ಕಿಸಲಯಶಯನೇನ

ಸಖಿಯಾ ರಮಿತಾ ವನಮಾಲಿನಾ

ವಿಕಸಿತಸರಸಿಜಲಲಿತಮುಖೇನ
ಸ್ಫುಟತಿ ನ ಸಾ ಮನಸಿಜವಿಶಿಖೇನ

ಅಮೃತಮಧುರಮೃದುತರವಚನನೇನ
ಜ್ವಲತಿ ನ ಸಾ ಮಲಯಜಪವನೇನ

ಸ್ಥಲಜಲರುಹರುಚಿಕರಚರಣೆನ
ಲುಠತಿ ನ ಸಾ ಹಿಮಕರಕಿರಣೆನ

ಸಜಲಜಲದಸಮುದಯಚಿರೇಣ
ದಲಿತಿ ನ ಸಾ ಹೃದಿ ಚಿರವಿರಹೇಣ

ಕನಕನಿಕಷರುಚಿಶುಚಿವಸನೇನ
ಸ್ವಸಿತಿ ನ ಸಾ ಪರಿನಹಸನೇನ

ಸಕಲಭುವನಜನವರತರುಣೆನ
ವಹತಿ ನ ಸಾ ರುಜಮತಿಕರಣೇನ

ಶ್ರೀಜಯದೇವಭಣಿತವಚನೇನ
ಪ್ರವಿಶತು ಹರಿರಪಿ ಹೃದಯಮನೇನ
************
ಜಯದೇವ ಅಷ್ಟಪದಿ - ಸಪ್ತಮ ಸರ್ಗಃ

ರಮತೆ ಯಮುನಾ ಪುಲಿನವನೇ ವಿಜಯೀ ಮುರಾರಿರಧುನಾ

ಸಮುದಿತಮದನೆ ರಮಣೀ ವದನೆ ಚುಂಬನವಲಿತಾಧರೆ
ಮೃಗಮದತಿಲಕಂ ಲಿಖತಿ ಸಪುಲಕಂ ಮೃಗಮಿವರಜನೀಕರೇ

ಘನಚಯರುಚಿರೆ ರಚಯತಿ ಚಿಕುರೆ ತರಳಿತತರುಣಾನನೆ
ಕುರಬಕಕುಸುಮಂ ಚಪಲಾಸುಶಮಂ ರತಿಪತಿಮೃಗಕಾನನೇ

ಇಹ ರಸಭಣನೆ ಕೃತಹರಿಗುಣನೆ ಮಧುರಿಪುಪದಸೇವಕೇ
ಕಲಿಯುಗಚರಿತಂ ನವಸತು ದುರಿತಂ ಕವಿನೃಪ ಜಯದೇವಹೇ

************
ಜಯದೇವ ಅಷ್ಟಪದಿ - ದ್ವಿತೀಯ ಸರ್ಗಃ

ರಾಸೆ ಹರಿಮಿಹ ವಿಹಿತವಿಲಾಸಂ ಸ್ಮರತಿ ಮನೋ ಮಮ ಕೃತಪರಿಹಾಸಂ

ಸಂಚರದಧರ ಸುಧಾ ಮಧುರ ಧ್ವನಿ ಮುಖರಿತ ಮೋಹನ ವಂಶಂ
ಚಲಿತ ದ್ರುಗಂಚಲ ಚಂಚಲ ಮೌಳಿ ಕಪೋಲ ವಿಲೋಲ ವತಂಸಂ

ಚಂದ್ರಕ ಚಾರು ಮಯೂರ ಶಿಖಂಡಕ ಮಂಡಲ ವಲಿಯಿತ ಕೇಶಂ
ಪ್ರಚುರ ಪುರಂದರ ಧನುರನುರಂಜಿತ ಮೇದುರಮುದಿರ ಸುವೇಶಂ

ವಿಪುಲ ಪುಲಕ ಭುಜ ಪಲ್ಲವ ವಲಯಿತ ವಲ್ಲವ ಯುವತೀ ಸಹಸ್ರಂ
ಕರಚರಣೋರಸಿ ಮಣಿಗಣ ಭೂಷಣ ಕಿರಣ ವಿಭಿನ್ನತ ಮಿತ್ರಂ

ಶ್ರೀಜಯದೇವ ಭಣಿತಮತಿಸುಂದರ ಮೋಹನ ಮಧುರಿಪು ರೂಪಂ
ಹರಿಚರಣ ಸ್ಮರಣಂ ಪ್ರತಿ ಸಂಪ್ರತಿ ಪುಣ್ಯವತಾ ಅನುರೂಪಂ

************
ಜಯದೇವ ಅಷ್ಟಪದಿ - ದ್ವಾದಶ ಸರ್ಗಃ

ನಿಜಗಾದ ಸಾ ಯದುನಂದನೆ ಕ್ರೀಡತಿ ಹೃದಯಾನಂದನೆ ||

ಕುರು ಯದುನಂದನ ಚಂದನ ಶಶಿರ ತರೇಣ ಕರೇಣ ಪಯೋಧರೆ|
ಮೃಗಮದಪತ್ರಕಮತ್ರ ಮನೋಭವ ಮಂಗಳ ಕಳಶ ಸಹೋದರೆ||

ಅಳಿಕುಲಗಂಜನ ಮಂಜನಕಂ ರತಿನಾಯಕ ಸಾಯಕ ಮೋಚನೆ|
ಸ್ವಧಧರ ಚುಂಬಿತ ಲಂಭಿತ ಕಜ್ಜಲಮುಜ್ವಲಯ ಪ್ರಿಯಲೋಚನೆ||

ಭ್ರಮರಚಯಂ ರಚಯಂತಮುಪರಿ ರುಚಿರಂ ಸುಚಿರಂ ಮಮ ಸಮ್ಮುಖೆ|
ಜಿತ ಕಮಲೆ ವಿಮಲೆ ಪರಿಕರ್ಮಯ ನರ್ಮಜನಕ ಮಲಕಂ ಮುಖೆ||

ಶ್ರೀಜಯದೇವ ವಚಸಿ ರುಚಿರೆ ಹ್ರಿದಯಂ ಸದಯಂ ಕುರು ಮಂಡನೆ|
ಹರಿಚರಣ ಸ್ಮರಣಾಮೃತ ಕೃತಕಲಿ ಕಲುಶ ಭವಜ್ವರ ಖಂಡನೆ||
************

ಪೋಂಗೊಳನೂದುತಿಹ ಯದುಕುಲೂತ್ತುಂಗ

***********
ಪೋಂಗೊಳನೂದುತಿಹ ಯದುಕುಲೂತ್ತುಂಗ

ರಾಗ : ದೇಶಿ
ತಾಳ : ಅಟ್ಟ

ಪೋಂಗೊಳನೂದುತಿಹ ಯದುಕುಲೂತ್ತುಂಗ
ತಿಂಗಳಾ ಪಾಂಗನೇ ರಜತ ಶುಭಾಂಗ
ಸಲಿಲಚರ ಧರಾ ಧರನು ಇಳಧರೋಜ್ವಲನೇತ್ರ
ಬಲಿಯ ಬೇಡಿದನು ಭೃಗುಕುಲದಿ ಜನಿಸಿ
ಬಲಿಯ ಬಿಲ್ಲನೆ ಮುರಿದು ಲಲನೆಯರ ಒಳನಗಾಗಿ
ಹೊಳರ ಸಂಭೋಧಿಸಿದ ಚೆಲುವ ಹಯವಿದನ
ವಾರಿಚರ ಕೂರ್ಮಾವತಾರ ಸೂಕರ ಕ್ರೂರ
ಧರಣಿಯನೆಳೆದು ಸೂರನಾ ಗೆಲಿದು
ನೀರಜಾಕ್ಷಿಯ ತಂದು ನಾರೀಪ್ರಿಯ ವ್ರತವಳಿದು
ಏರಿದನು ಹಯವ ಶ್ರೀ ಪುರಂದರ ವಿಠಲಾ

************

ರೋಗಹರನೆ ಕೃಪಾಸಾಗರ

***********

ರೋಗಹರನೆ ಕೃಪಾಸಾಗರ

ರಾಗ : ದೇಶಿ
ತಾಳ : ಅಟ್ಟ

ರೋಗಹರನೆ ಕೃಪಾಸಾಗರ ಶ್ರೀಗುರು
ರಾಘವೇಂದ್ರ ಪರಿಪಾಲಿಸೋ

ಸಂತತದುರ್ಮತ ಧ್ವಾಂತ ದಿವಾಕರ
ಸಂತವಿನುತ ಮಾತ ಲಾಲಿಸೋ

ಪಾವನಗಾತ್ರ ದೇವವರನೆ ತವ
ಸೇವಕ ಜನರೊಳಗಾಡಿಸೊ

ಘನ್ನಮಹಿಮ ಜಗನ್ನಾತ ವಿಠಲಪ್ರಿಯ
ನಿನ್ನಾರಾಧನೆ ಮಾಡಿಸಸೊ
***********

ನಮ್ಮಮ್ಮ ಶಾರದೆ ಉಮಾಮಹೇಶ್ವರಿ

************

ನಮ್ಮಮ್ಮ ಶಾರದೆ ಉಮಾಮಹೇಶ್ವರಿ

ರಾಗ : ಮೋಹನ
ತಾಳ : ಅಟ್ಟ


ನಮ್ಮಮ್ಮ ಶಾರದೆ ಉಮಾಮಹೇಶ್ವರಿ
ನಿಮ್ಮೊಳಗಿಹನ್ಯಾರಮ್ಮ

ಕಮ್ಮಗೋಲನ ವೈರಿಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೆ

ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ
ಕೋರೆದಾಡೆಯವನ್ಯಾರಮ್ಮ
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ
ಧೀರ ತಾ ಗಣನಾಥನೆ ಅಮ್ಮಯ್ಯ

ಉಟ್ಟದಟ್ಟಿಯು ಬಿಗಿದುಟ್ಟ ಚಲ್ಲಣದ
ದಿಟ್ಟಿ ತಾನಿವನ್ಯಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರ
ಹೊಟ್ಟೆಯ ಗಣನಾಥನೆ ಅಮ್ಮಯ್ಯ

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ
ಭಾಶಿಗನಿವವ್ಯಾರಮ್ಮ ಲೇಸಾಗಿ ಜನರ ಸಲಹುವ ಕಾಗಿನೆಲೆಯಾದಿ
ಕೇಶವ ದಾಸ ಕಾಣೆ ಅಮ್ಮಯ್ಯ
***********

ಮಂದಗಮನೆ ಇವನ್ಯಾರೆ ಪೇಳಮ್ಮ

************

ಮಂದಗಮನೆ ಇವನ್ಯಾರೆ ಪೇಳಮ್ಮ

ರಾಗ : ಮೋಹನ
ತಾಳ: ಆದಿ

ಮಂದಗಮನೆ ಇವನ್ಯಾರೆ ಪೇಳಮ್ಮ
ಮಂದಧರ ಧರ ಗೋವಿಂದ ಕಾಣಮ್ಮ

ಕೆಂದಳಿರು ನಖ ಶಶಿಬಿಂಬ ಪದಪದ್ಮ
ಅಂದುಗ ಇಟ್ಟವನಾರೆ ಪೇಳಮ್ಮ

ಅಂದು ಕಾಳಿಂಗನ ಪೆಡೆಯ ತುಳಿದ ದಿಟ್ಟ
ನಂದನ ಕಂದ ಮುಕುಂದ ಕಾಣಮ್ಮ

ಕಂಬುಕಂಧರ ಕರ್ಣಾಲಂಬಿತಕುಂಡಲ
ಅಂಬುಜ ಮುಖದವನಾರೆಂದು ಹೇಳಮ್ಮ
ರಂಭೆ ಕೇಳೀತ ಶ್ರೀ ಪುರಂದರವಿಠಲನು
ನಂಬಿದ ಭಕ್ತ ಕುಟುಂಬಿ ಕಾಣಮ್ಮ
************

ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ

************
ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ

ರಾಗ : ಪೂರ್ವಿ
ತಾಳ: ಆದಿ

ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ ಭೂ
ಮಂಡಲಕ್ಕೆ ಪಾಂಡುರಂಗ ವಿಠ್ಥಲನೆ ಪರದೈವ ವೆಂದು

ಹರಿಯು ಮುಡಿದ ಹೋವು ಹರಿವಾಣದೊಳಗಿಟ್ಟುಕೊಂಡು
ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತ

ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು
ಢಂಢಂ ಢಣಾ ಢಣಾರೆಂದು ಹೊಡೆದು ಚಪ್ಪಾಳಿಕ್ಕುತ

ಇಂತು ಜಗಕೆಲ್ಲ ಲಕ್ಷ್ಮೀಕಾಂತನಲ್ಲದಿಲ್ಲವೆಂದು
ಸಂತತ ಶ್ರೀಪುರಂದರವಿಠಲ ಪರದೈವವೆಂದು

************

Sunday, April 20, 2008

ಮಂದಗಮನೆ


ಮಂದಗಮನೆ ಇವನ್ಯಾರೆ ಪೇಳಮ್ಮ ಮಂಧರಧರ ಗೋವಿಂದ ಕಣಮ್ಮ
ಕೆಂದಳ ಪೋಲ್ವ ಪದಪದ್ಮದಲ್ಲಿ ಅಂಜಿಕೆಗಿಟ್ಟವನು ಯಾರೆಂದು ಪೇಳಮ್ಮ
ಅಂದು ಕಾಳಿಂಗನ ಪೆಡಯ ತುಳಿದ ದಿಟ್ಟ ನಂದನ ಕಂದ ಮುಕುಂದ ಕಣಮ್ಮ
ಕಂಬು ಕಂದರ ಕರ್ಣಾಲಂಬಿತ ಕುಂಡಲ ಅಂಬುಜ ಮುಖದವನ್ಯಾರೆಂದು ಹೇಳಮ್ಮ
ರಂಭೆ ಕೇಳೀತ ಶ್ರೀ ಪುರಂದರವಿಠಲನು ನಂಬಿದ ಭಕ್ತಕುಟುಂಬಿ ಕಣಮ್ಮ

ರಾಮಚಂದ್ರಾಯ

ರಾಮಚಂದ್ರಾಯ ಜನಕರಾಜಜಾ ಮನೋಹರಾಯ ಮಾಮಕಾಭೀಷ್ಟದಾಯ ಮಹಿತ ಮಂಗಳಂ
ಕೋಸಲೇಶಾಯ ಮಂದಹಾಸ ಪೋಷಣಾಯ ವಾಸವಾದಿ ವಿನುತ ಸರ್ವರಾಯ ಮಂಗಳಂ
ವಿಮಲರೂಪಾಯ ವಿವಿಧ ವೇದಾಂತವೇದಾಯ ಸುಮುಖ ಚಿತ್ತ ಕಾಮಿತಾಯ ಶುಭ್ರಮಂಗಳಂ
ರಾಮದಾಸಾಯ ಮ್ರುದುಲ ಹೃದಯ ಕಮಲ ವಾಸಯ ಸ್ವಾಮಿಭದ್ರ ಗಿರಿವರಾಯ ಸರ್ವಮಂಗಳಂ

ಮಧುಕರ ವೃತ್ತಿ ಎನ್ನದು.

ಮಧುಕರ ವೃತ್ತಿ ಎನ್ನದು.
ಪದುಮನಾಭನ ಪಾದ ಪದುಮ ಮಧುಪವೆಂಬ ಮಧುಕರ ವೃತ್ತಿ ಎನ್ನದು.
ಕಾಲಿಗೆ ಗೆಜ್ಜೆ ಕಟ್ಟಿ ನೀಲವರ್ಣನ ಗುಣ ಆಲಾಪಿಸುತ ಬಲು ಓಲಗ ಮಾಡುವಂತ
ರಂಗನಾಥನ ಗುಣ ಹಿಂಗದೆ ಪಾಡುತ್ತ ಶೃಂಗಾರ ನೋಡುತ್ತ ಕಂಗಳ ಆನಂದವೆಂಬ
ಇಂದಿರಾಪತಿ ಪುರಂದರ ವಿಠಲನಲ್ಲಿ ಚಂದದ ಭಕ್ತಿಯಿಂದ ಆನಂದ ಪಡುವಂತ

ಹಾಡಿದರೆ

ಹಾಡಿದರೆ ಎನ್ನ ಒಡೆಯನ ಹಾಡುವೆ.
ಬೆಡಿದರೆ ಎನ್ನ ಓಡೆಯನ ಬೇಡುವೆ
ಓಡೆಯಗೆ ಒಡಲನು ತೋರುವೇ
ಎನ್ನ ಬಡತನ ಬಿನ್ನಹ ಮಾಡುವೆ.
ಓಡೆಯ ಶ್ರೀಪುರಂದರ ವಿಠಲರಾಯನ
ಅಡಿಗಳನು ಸಾರಿ ಬದುಕುವೆ

Friday, April 18, 2008

ಭಾವಯಾಮಿ ರಘುರಾಮಂ

II ಭಾವಯಾಮಿ ರಘುರಾಮಂ II
ರಾಗಮಾಲಿಕ
ತಾಳ: ರೂಪಕ
ರಚನೆ: ಮಹಾರಾಜ ಸ್ವಾತಿ ತಿರುನಾಳ್
II ಭಾವಯಾಮಿ ರಘುರಾಮಂ ಭವ್ಯ ಸುಗುಣಾ ರಾಮಂ I
I ಭಾವುಕ ವಿತರಣಾಪರಾಪಾಂಗ ಲೀಲಾ ಲಸಿತಂ II
ಚರಣ ೧
**********
II ದಿನಕರಾನ್ವಯ ತಿಲಕಂ ದಿವ್ಯಗಾಧಿ ಸುತ ಸವನ I
I ವನ ರಚಿತ ಸುಬಾಹುಮುಖವಧಂ; ಅಹಲ್ಯಾ ಪಾವನಂ II
II ಅನಘಮೀಶ ಚಾಪ ಭಂಗಂ ಜನಕ ಸುತಾ ಪ್ರಾಣೆಶಂ I
I ಘನ ಕುಪಿತ ಭೃಗುರಾಮಾ ಗರ್ವಹರಾಮಿತ ಸಾಕೇತಂ II
ಚರಣ ೨
**********
II ವಿಹತ ಅಭಿಷೇಕಮತ ವಿಪಿನ ಗತಮಾರ್ಯವಾಚ I
I ಸಹಿತ ಸೀತಾ ಸೌಮಿತ್ರೀಮ್ ಶಾಂತತಮ ಶೀಲಂ II
II ಗುಹ ನಿಲಯ ಗತಂ ಚಿತ್ರಕೂಟಾಗತ ಭಾರತ ದತ್ತ I
I ಮಹಿತ ರತ್ನಮಯ ಪಾದುಕಂ ಮದನ ಸುಂದರಾಂಗಂ II
ಚರಣ ೩
**********
II ಕನಕ ಮೃಗರೂಪಧರ ಖಲ ಮಾರೀಚ ಹರಾಮಿಹ I
I ಸುಜನವಿಮತ ದಶಾಸ್ಯಂ ಶೃತ ಜನಕಜಾನ್ವೇಶಣಂ II
II ಅನಘ ಪಂಪಾತೀರ ಸಂಗತಾಂಜನೆಯ ನಭೋಮಣಿ I
I ತನುಜ ಸಖ್ಯಕರಮ್ ವಾಲೀ ತನುದಳನಮೀಶಂ II
ಚರಣ ೪
***********
II ವಿತತ ದಂಡಕಾರಂಣ್ಯಕ ಗತವಿರಾಧ ದಳನಂ I
I ಸುಚರಿತ ಘಟಜ ದತ್ತಾನುಪಮಿತ ವೈಷ್ಣವಾಸ್ತ್ರಂ II
II ಪತಗ ವರ ಜಟಾಯುನುತಂ ಪಂಚವಟಿ ವಿಹಿತ ವಾಸಂ I
I ಅತಿ ಘೋರ ಶೂರ್ಪಣಖಾ ವಚನಾಗತ ಖರಾದಿಹರಂ II
ಚರಣ ೫
***********
II ಕನಕ ಮೃಗರೂಪಧರ ಖಲಮಾರೀಚ ಹರಾಮಿಹ I
I ಸುಜನ ವಿಮತ ದಶಾಸ್ಯಂ ಹೃತ ಜನಕ ಜಾನ್ವೇಷನಂ II
II ಅನಘ ಪಂಪಾತೀರ ಸಂಗತಾಂಜನೇಯ ನಭೋಮಣಿ I
I ತನುಜ ಸಖ್ಯಕರಮ್ ವಾಲಿ ತನುದಳನಮೀಶಂ II
ಚರಣ ೬
**********
II ವಾನರೋತ್ತಮ ಸಹಿತ ವಾಯುಸೂನು ಕರಾರ್ಪಿತ I
I ಭಾನು ಶತ ಭಾಸ್ಕರ ಭವ್ಯ ರತ್ನಾಂಗುಲೀಯಂ II
II ತೇನ ಪುನರಾನೀತಂ ನ್ಯೂನ ಚೂಡಾಮಣಿ ದರ್ಶನಂ I
I ಶ್ರೀನಿಧಿಂ ಉದಧಿ ತೀರಾಶೃತ ವಿಭೀಷಣ ವಿನುತಂ II
ಚರಣ ೭
**********
II ಕಲಿತವರ ಸೇತು ಬಂಧಂ ಖಲನಿಸ್ಸೀಮ ವಿಶಿತಾಶನ I
I ದಳನಂ ಉರು ದಶಕಂಠ ವಿದಾರಂ ಅತಿಧೀರಂ II
II ಜ್ವಲನ ಪೂತ ಜನಕ ಸುತ ಸಹಿತ ಯಾತ ಸಾಕೇತಂ I
I ವಿಲಸಿತ ಪಟ್ಟಾಭಿಷೇಕಂ ವಿಶ್ವಪಾಲಂ ಪದ್ಮನಾಭಂ II

** ಶ್ರೀ ರಾಮಂ ರವಿಕುಲಾಬ್ದಿ ಸೋಮಂ **

** ಶ್ರೀ ರಾಮಂ ರವಿಕುಲಾಬ್ದಿ ಸೋಮಂ **
ರಾಗ: ನಾರಾಯಣಗೌಳ
ತಾಳ: ಆದಿ
ರಚನೆ: ಶ್ರೀ ಮುತ್ತುಸ್ವಾಮಿ ದೀಕ್ಷಿತರ್
II ಪಲ್ಲವಿ II
II ಶ್ರೀ ರಾಮಂ ರವಿ ಕುಲಾಬ್ದಿ ಸೋಮಂ I
I ಶ್ರಿತ ಕಲ್ಪ ಭೂರುಹಂ ಭಜೇಹಂ II
II ಅನುಪಲ್ಲವಿ II
II ಧೀರಾಗ್ರಗಣ್ಯಂ ವರೇಣ್ಯಂ; ದೀನ ಜನಾಧಾರಂ ರಘುವೀರಂ I
I ನಾರದಾದಿ ಸನ್ನುತ ರಾಮಾಯಣ ಪಾರಾಯಣ ಮುದಿತ ನಾರಾಯಣಂ II
II ಚರಣ II
II ದಶರಥಾತ್ಮಜಂ ಲಕ್ಷ್ಮಣಾಗ್ರಜಂ; ದಾನವ ಕುಲ ಭೀಕರಂ ಶ್ರೀಕರಮ್ I
I ಕುಶಲವ ತಾತಂ ಸೀತೋಪೇತಂ; ಕುವಲಯ ನಯನಂ ಸುದರ್ಪ ಶಯನಂ II
II ಸುಷರ ಚಾಪ ಪಾಣಿಂ ಸುಧೀಮಣಿಂ I
I ಸೂನ್ರುತ ಭಾಷಂ ಗುರುಗುಹ ತೋಷಂ II
II ದಶ ವದನ ಭಂಜನಂ ನಿರಂಜನಂ I
I ದಾನ ನಿಧಿಂ ದಯಾರಸಜಲನಿಧಿಂ II

Tuesday, March 25, 2008

ವಲ್ಲಭ ನಾಯಕಸ್ಯ


...
ವಲ್ಲಭ ನಾಯಕಸ್ಯ
ರಾಗ: ಬೇಗಡೆ
ತಾಳ: ರೂಪಕ
ರಚನೆ: ಮುತ್ತುಸ್ವಾಮಿ ದೀಕ್ಷಿತರ್

ಪಲ್ಲವಿ
**********
ವಲ್ಲಭ ನಾಯಕಸ್ಯ ಭಕ್ತೋ ಭಾವಾಮಿ
ವಾನ್ಚಿತಾರ್ಥ ದಾಯಕಸ್ಯ ವರ ಮೂಷಿಕ ವಾಹನಸಯ

ಚರಣ
**********
ಪಲ್ಲವ ಪದ ಮೃದು ದರಸ್ಯ ಪಾಶಾಂಕುಷಾದಿ ಧರಸ್ಯ
ಮಲ್ಲಿಕಾ ಜಾಜಿ ಚಂಪಕ ಹಾರಸ್ಯ ಮನಿಮಾಳಸ್ಯ

ವಲ್ಲಿ ವಿವಾಹ ಕಾರನಸ್ಯ ಗುರುಗುಹ ಪೂಜಿತಸ್ಯ
ಕಾಳಿ ಕಲಾ ಮಾಲಿನಿ ಕಮಲಾಕ್ಷಿ ಸನ್ನುತಸ್ಯ

Monday, March 24, 2008

ಮಮ ಹೃದಯೇ ವಿಹರ ದಯಾಳೋ


ಮಮ ಹೃದಯೇ ವಿಹರ ದಯಾಳೋ

ರಾಗ: ರೀತಿಗೌಳ
ತಾಳ: ಖಂಡ ತ್ರಿಪುಟತಾಳ
ರಚನೆ: ಮೈಸೂರು ವಾಸುದೇವಾಚಾರ್ಯರು.
ಹಾಡುಗಾರಿಕೆ: ಸಂಗೀತ ಕಲಾನಿಧಿ ವಿದ್ವಾನ್ ಶ್ರೀ ಆರ್.ಕೆ. ಶ್ರೀಕಂಠನ್
ರಾಗಭಾವ: ಕರುಣಾರಸ ಜನಕ ರಾಗ.

ಮಮ ಹೃದಯೇ ವಿಹರ ದಯಾಳೋ, ಕೃಷ್ಣ
ಮಂಧರಧರ ಗೋವಿಂದ ಮುಕುಂದ || ಪ ||

ಮಂಥದಾಮ ಸುವಿರಾಜಿತ ಶ್ರೀಕೃಷ್ಣ
ಮಂಧಹಾಸ ವದನಾರವಿಂದ ನಯನಾ ||

ಯದುಕುಲ ವಾರಿಧಿ ಪೂರ್ಣಚಂದ್ರ
ವಿಧುರವಂದಿತ ಪಾದ ಗುಣಸಾಂದ್ರ ||

ಮದನಜನಕ ಶ್ರೀಕರ ಮಹಾನುಭಾವ
ಸದಯ ಹೃದಯ ಶ್ರೀವಾಸುದೇವ ಸದಾ ||

Sunday, March 23, 2008

ಗಿರಿಜಾ ರಮಣ


ಕೃತಿ = ಗಿರಿಜಾ ರಮಣ
ರಚನೆ : ಮೈಸೂರು ವಾಸುದೇವಚಾರ್ಯರು
ರಾಗ : ಗಂಭೀರ ನಾಟ
ತಾಳ : ಅದಿ

ಪಲ್ಲವಿ
********

ಗಿರಿಜಾ ರಮಣ ನತಜನ ಶರಣ
ಕರುಣಾರಸ ಪೂರ್ಣ ಸ್ಮರಹರ ನಾಗಾಭರಣ

ಅನುಪಲ್ಲವಿ
****************

ಪರ ವಾಸುದೆವಾರಾಧನ ಧುರೀಣ
ಕರಧೃತ ಹರಿಣಾ ಕಲಿಮಲ ಹರಣ

ಚರಣ
*******

ಮಹಾ ಪಂಚಾಕ್ಷರಿ ಮಂತ್ರ ಮೂರ್ತೆ
ಮಹಾಭಕ್ತ ಕೌಂತೇಯ ನುತ ಕೀರ್ತೆ

ಮಹಾಗಣಪತಿ ಗುಹಸೇವಿತ ಮೂರ್ತೆ
ಮಹಾದೇವ ಪರಿಹೃತ ದೀನಜನಾರ್ತೆ
ಮಹಾನಂದಿ ಭೃಂಗ್ಯಾದಿ ಗಂಭೀರನಾಟ್ಯಪ್ರದರ್ಶಕ ಕೈಲಾಸಪತೆ

ಗೋಪಿಕ ಮನೋಹರಂ ಭಜೇಹಂ



ಕೃತಿ: ಗೋಪಿಕ ಮನೋಹರಂ ಭಜೇಹಂ
ರಚನೆ: ಮುತ್ತುಸ್ವಾಮಿ ದೀಕ್ಷಿತರು
ರಾಗ : ಮೋಹನ
ತಾಳ: ಆದಿ

ಗೋಪಿಕ ಮನೋಹರಂ ಭಜೇಹಂ
ಗೊವರ್ಧನ ಗಿರಿಧರಂ ಸುರವರಂ ಮುರಹರಂ

|ಸಮಷ್ಠಿ ಚಾರಣಂ|

ತಾಪಸ ಹೃದಯ ವೇಶಂ ರಮೇಶಂ
ತಾಪಾರ್ಥಿಹರ ವಿನುತಂ ನತ ಚತುರಂ
ಗೋಪಾಲಂ ಕೌಸ್ತುಭಮಣಿ ಭೂಶಂ ಕಂಸ ಹರಂ ಕಾಮಿತ್ಯ ಮೃದುಭಾಷಂ
ಅಪರಾಜಿತ ಅನಂತ ವೇದಘೋಷಂ ಅಮರೇಶನುತ ಗುರುಗುಹ ಸಂತೋಶಂ
***

ದಾಸನೆಂತಾಗುವೆನು




ದಾಸನೆಂತಾಗುವೆನು ಧರೆಯೊಳಗೆ ನಾನು
ವಾಸುದೇವನಲ್ಲಿ ಲೇಶಭಕುತಿ ಕಾಣೆ
ಗೂಟನಾಮವ ಹೋಡೆದು
ಗುಂಡು ತಂಬಿಕೆ ಹಿಡಿದು
ಗೋಟಂಚು ಧೋತರ ಮಡಿಯನ್ನುಟ್ಟು
ದಾಟುಗಾಲಟ್ಟು ನಾ ಬರಲೆನ್ನ
ಬೂಟಕತನ ನೋಡಿ ಭ್ರಮಿಸಿದಿರಿ ಜನರೇ
ಅರ್ಥದಲ್ಲೆ ಮನಸು ಆಸ್ಕತವಾಗಿದ್ದು
ವ್ಯರ್ಥವಾಯಿತು ಜನ್ಮ ವಸುಧೆಯೊಳಗೆ
ಅರ್ತಿಯಿಂದಲಿ ಹರಿಯ ಚರ್ಚಿಸದಿಲ್ಲ ನಾ
ಸತ್ಯ ಸೌಚಗಳಿರಿಯೆ ಸಜ್ಜನರು ಕೇಳಿ
ಇಂದಿರೇಶನ ಪೂಜೆ ಎಂದು ಮಾಡಿದ್ದಿಲ್ಲ
ಸಂಧ್ಯಾ ಜಪತಪಗಳರಿಯೆ
ಒಂದು ಸಾಧನ ಕಾಣೆ ಪುರಂಧರವಿಠಲನ
ದ್ವಂದ್ವಪಾದಗಳ ನಂಬಿ ಅರಿತು ಭಜಿಸದೆಲೆ
***

ಈ ಪರಿಯ ಸೊಬಗಾವ


***
ಈ ಪರಿಯ ಸೊಬಗಾವ ದೇವರೊಳು ನಾ ಕಾಣೆ
ಗೋಪಿಜನ ಪ್ರಿಯಾ ಗೋಪಾಲಗಲ್ಲದೆ
ದೊರೆಯತನದಲಿ ನೋಡೆ ಧರಣಿ ದೇವಿಗೆ ರಮಣ
ಸಿರಿತನದಲಿ ನೋಡೆ ಶ್ರೀಕಾಂತನು
ಹಿರಿಯತನದಲಿ ಸರಸಿಜೋದ್ಭವನಯ್ಯ
ಗುರುವುತನದಲಿ ನೋಡೆ ಜಗದಾದಿಗುರುವು
ಪಾವನತ್ವದಿ ನೋಡೆ ಅಮರಗಂಗಾಜನಕ
ದೇವತ್ವದಿ ನೋಡೆ ದಿವಿಜರೋಡೆಯ
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ
ಆವಧೈರ್ಯದಿ ನೋಡೆ ಅಸುರಾಂತಕ
ಗಗನದಲಿ ಸಂಚರಿಪ ಗರುಡದೇವನೆ ತುರಗ
ಜಗವ ಧರಿಸಿದ ಶೇಷಪರ್ಯಂಕ ಶಯನ
ನಿಗಮಗೋಚರ ಪುರಂದರವಿಠಲಗಲ್ಲದೆ
ಮಿಗಿಲಾದ ದೈವಗಳಿಗೀ ಭಾಗ್ಯ ಉಂಟೇ?
***

Saturday, March 15, 2008

ಸಾಹಿತ್ಯ

ಹರಿದಾಸರಸಂಘ ದೊರಕಿತು ಎನಗೀಗ ಇನ್ನೇನಿನ್ನೇನು
ವರಗುರು ಉಪದೇಶ ನೆರವಾಯ್ತು ಎನಗೆ ಇನ್ನೇನಿನ್ನೇನು
ಮಾಯದ ಸಂಸಾರ ಮಮಕಾರ ತಗ್ಗಿತು ಇನ್ನೇನಿನ್ನೇನು
ತೋಯಜಾಕ್ಷನ ನಾಮ ಜಿಹ್ವೆಯೊಳು ನೆಲೆಸಿತು ಇನ್ನೇನಿನ್ನೇನು
ಹಲವು ದೈವಗಳೆಂಬ ಹಂಬಲ ಬಿಟ್ಟಿತು ಇನ್ನೇನಿನ್ನೇನು
ಜಲಜನಾಭನ ಧ್ಯಾನ ಹೃದಯದೊಳು ದೊರಕಿತು ಇನ್ನೇನಿನ್ನೇನು
ತಂದೆತಾಯಿ ಮುಚುಕುಂದ ವರದನಾದ ಇನ್ನೇನಿನ್ನೇನು
ಸಂದೇಹವಿಲ್ಲ ಮುಕುಂದ ದಯಮಾಡ್ದ ಇನ್ನೇನಿನ್ನೇನು
ಏನೆಂದು ಹೇಳಲಿ ಆನಂದ ಸಂಭ್ರಮ ಇನ್ನೇನಿನ್ನೇನು
ಆ ನಂದಗೋಪನ ಕಂದನ ಮಹಿಮೆಯು ಇನ್ನೇನಿನ್ನೇನು
ಎನ್ನ ವಂಶಗಳೆಲ್ಲವು ಪಾವವಂಶಗಳೆಲ್ಲ ಪಾವನ ಆದವು ಇನ್ನೇನಿನ್ನೇನು
ಚಿನ್ಮಯ ಪುರಂದರವಿಠಲಯ್ಯ ದೊರಕಿದ ಇನ್ನೇನಿನ್ನೇನು!
****

ಶ್ರೀ ಗಣೇಶಾಯ ನಮಃ




ಗಜವದನಾ ಬೇಡುವೇ ಗೌರಿ ತನಯ
ತ್ರಿಜಗ ವಂದಿತನೇ ಸುಜನರ ಪೊರೆವನೆ ಪ

ಪಾಶಂಕುಶಧರ ಪಾರಮಪವಿತ್ರ
ಮೂಷಿಕವಾಹನ ಮುನಿಜನ ಪ್ರೇಮ ಅ. ಪ

ಮೋದದಿ ನಿನ್ನಯ ಪಾದಾವ ತೋರೋ
ಸಾಧು ವಂದಿತನೆ ಆದರದಿಂದಲಿ
ಸರಸಿಜಾನಾಭ ಶ್ರೀಪ್ರರಂದರ ವಿಠಲನ
ನಿರುತ ನೆನೆಯುವಂತೆ ದಯಮಡೋ ಚ

***