Tuesday, March 25, 2008

ವಲ್ಲಭ ನಾಯಕಸ್ಯ


...
ವಲ್ಲಭ ನಾಯಕಸ್ಯ
ರಾಗ: ಬೇಗಡೆ
ತಾಳ: ರೂಪಕ
ರಚನೆ: ಮುತ್ತುಸ್ವಾಮಿ ದೀಕ್ಷಿತರ್

ಪಲ್ಲವಿ
**********
ವಲ್ಲಭ ನಾಯಕಸ್ಯ ಭಕ್ತೋ ಭಾವಾಮಿ
ವಾನ್ಚಿತಾರ್ಥ ದಾಯಕಸ್ಯ ವರ ಮೂಷಿಕ ವಾಹನಸಯ

ಚರಣ
**********
ಪಲ್ಲವ ಪದ ಮೃದು ದರಸ್ಯ ಪಾಶಾಂಕುಷಾದಿ ಧರಸ್ಯ
ಮಲ್ಲಿಕಾ ಜಾಜಿ ಚಂಪಕ ಹಾರಸ್ಯ ಮನಿಮಾಳಸ್ಯ

ವಲ್ಲಿ ವಿವಾಹ ಕಾರನಸ್ಯ ಗುರುಗುಹ ಪೂಜಿತಸ್ಯ
ಕಾಳಿ ಕಲಾ ಮಾಲಿನಿ ಕಮಲಾಕ್ಷಿ ಸನ್ನುತಸ್ಯ

Monday, March 24, 2008

ಮಮ ಹೃದಯೇ ವಿಹರ ದಯಾಳೋ


ಮಮ ಹೃದಯೇ ವಿಹರ ದಯಾಳೋ

ರಾಗ: ರೀತಿಗೌಳ
ತಾಳ: ಖಂಡ ತ್ರಿಪುಟತಾಳ
ರಚನೆ: ಮೈಸೂರು ವಾಸುದೇವಾಚಾರ್ಯರು.
ಹಾಡುಗಾರಿಕೆ: ಸಂಗೀತ ಕಲಾನಿಧಿ ವಿದ್ವಾನ್ ಶ್ರೀ ಆರ್.ಕೆ. ಶ್ರೀಕಂಠನ್
ರಾಗಭಾವ: ಕರುಣಾರಸ ಜನಕ ರಾಗ.

ಮಮ ಹೃದಯೇ ವಿಹರ ದಯಾಳೋ, ಕೃಷ್ಣ
ಮಂಧರಧರ ಗೋವಿಂದ ಮುಕುಂದ || ಪ ||

ಮಂಥದಾಮ ಸುವಿರಾಜಿತ ಶ್ರೀಕೃಷ್ಣ
ಮಂಧಹಾಸ ವದನಾರವಿಂದ ನಯನಾ ||

ಯದುಕುಲ ವಾರಿಧಿ ಪೂರ್ಣಚಂದ್ರ
ವಿಧುರವಂದಿತ ಪಾದ ಗುಣಸಾಂದ್ರ ||

ಮದನಜನಕ ಶ್ರೀಕರ ಮಹಾನುಭಾವ
ಸದಯ ಹೃದಯ ಶ್ರೀವಾಸುದೇವ ಸದಾ ||

Sunday, March 23, 2008

ಗಿರಿಜಾ ರಮಣ


ಕೃತಿ = ಗಿರಿಜಾ ರಮಣ
ರಚನೆ : ಮೈಸೂರು ವಾಸುದೇವಚಾರ್ಯರು
ರಾಗ : ಗಂಭೀರ ನಾಟ
ತಾಳ : ಅದಿ

ಪಲ್ಲವಿ
********

ಗಿರಿಜಾ ರಮಣ ನತಜನ ಶರಣ
ಕರುಣಾರಸ ಪೂರ್ಣ ಸ್ಮರಹರ ನಾಗಾಭರಣ

ಅನುಪಲ್ಲವಿ
****************

ಪರ ವಾಸುದೆವಾರಾಧನ ಧುರೀಣ
ಕರಧೃತ ಹರಿಣಾ ಕಲಿಮಲ ಹರಣ

ಚರಣ
*******

ಮಹಾ ಪಂಚಾಕ್ಷರಿ ಮಂತ್ರ ಮೂರ್ತೆ
ಮಹಾಭಕ್ತ ಕೌಂತೇಯ ನುತ ಕೀರ್ತೆ

ಮಹಾಗಣಪತಿ ಗುಹಸೇವಿತ ಮೂರ್ತೆ
ಮಹಾದೇವ ಪರಿಹೃತ ದೀನಜನಾರ್ತೆ
ಮಹಾನಂದಿ ಭೃಂಗ್ಯಾದಿ ಗಂಭೀರನಾಟ್ಯಪ್ರದರ್ಶಕ ಕೈಲಾಸಪತೆ

ಗೋಪಿಕ ಮನೋಹರಂ ಭಜೇಹಂ



ಕೃತಿ: ಗೋಪಿಕ ಮನೋಹರಂ ಭಜೇಹಂ
ರಚನೆ: ಮುತ್ತುಸ್ವಾಮಿ ದೀಕ್ಷಿತರು
ರಾಗ : ಮೋಹನ
ತಾಳ: ಆದಿ

ಗೋಪಿಕ ಮನೋಹರಂ ಭಜೇಹಂ
ಗೊವರ್ಧನ ಗಿರಿಧರಂ ಸುರವರಂ ಮುರಹರಂ

|ಸಮಷ್ಠಿ ಚಾರಣಂ|

ತಾಪಸ ಹೃದಯ ವೇಶಂ ರಮೇಶಂ
ತಾಪಾರ್ಥಿಹರ ವಿನುತಂ ನತ ಚತುರಂ
ಗೋಪಾಲಂ ಕೌಸ್ತುಭಮಣಿ ಭೂಶಂ ಕಂಸ ಹರಂ ಕಾಮಿತ್ಯ ಮೃದುಭಾಷಂ
ಅಪರಾಜಿತ ಅನಂತ ವೇದಘೋಷಂ ಅಮರೇಶನುತ ಗುರುಗುಹ ಸಂತೋಶಂ
***

ದಾಸನೆಂತಾಗುವೆನು




ದಾಸನೆಂತಾಗುವೆನು ಧರೆಯೊಳಗೆ ನಾನು
ವಾಸುದೇವನಲ್ಲಿ ಲೇಶಭಕುತಿ ಕಾಣೆ
ಗೂಟನಾಮವ ಹೋಡೆದು
ಗುಂಡು ತಂಬಿಕೆ ಹಿಡಿದು
ಗೋಟಂಚು ಧೋತರ ಮಡಿಯನ್ನುಟ್ಟು
ದಾಟುಗಾಲಟ್ಟು ನಾ ಬರಲೆನ್ನ
ಬೂಟಕತನ ನೋಡಿ ಭ್ರಮಿಸಿದಿರಿ ಜನರೇ
ಅರ್ಥದಲ್ಲೆ ಮನಸು ಆಸ್ಕತವಾಗಿದ್ದು
ವ್ಯರ್ಥವಾಯಿತು ಜನ್ಮ ವಸುಧೆಯೊಳಗೆ
ಅರ್ತಿಯಿಂದಲಿ ಹರಿಯ ಚರ್ಚಿಸದಿಲ್ಲ ನಾ
ಸತ್ಯ ಸೌಚಗಳಿರಿಯೆ ಸಜ್ಜನರು ಕೇಳಿ
ಇಂದಿರೇಶನ ಪೂಜೆ ಎಂದು ಮಾಡಿದ್ದಿಲ್ಲ
ಸಂಧ್ಯಾ ಜಪತಪಗಳರಿಯೆ
ಒಂದು ಸಾಧನ ಕಾಣೆ ಪುರಂಧರವಿಠಲನ
ದ್ವಂದ್ವಪಾದಗಳ ನಂಬಿ ಅರಿತು ಭಜಿಸದೆಲೆ
***

ಈ ಪರಿಯ ಸೊಬಗಾವ


***
ಈ ಪರಿಯ ಸೊಬಗಾವ ದೇವರೊಳು ನಾ ಕಾಣೆ
ಗೋಪಿಜನ ಪ್ರಿಯಾ ಗೋಪಾಲಗಲ್ಲದೆ
ದೊರೆಯತನದಲಿ ನೋಡೆ ಧರಣಿ ದೇವಿಗೆ ರಮಣ
ಸಿರಿತನದಲಿ ನೋಡೆ ಶ್ರೀಕಾಂತನು
ಹಿರಿಯತನದಲಿ ಸರಸಿಜೋದ್ಭವನಯ್ಯ
ಗುರುವುತನದಲಿ ನೋಡೆ ಜಗದಾದಿಗುರುವು
ಪಾವನತ್ವದಿ ನೋಡೆ ಅಮರಗಂಗಾಜನಕ
ದೇವತ್ವದಿ ನೋಡೆ ದಿವಿಜರೋಡೆಯ
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ
ಆವಧೈರ್ಯದಿ ನೋಡೆ ಅಸುರಾಂತಕ
ಗಗನದಲಿ ಸಂಚರಿಪ ಗರುಡದೇವನೆ ತುರಗ
ಜಗವ ಧರಿಸಿದ ಶೇಷಪರ್ಯಂಕ ಶಯನ
ನಿಗಮಗೋಚರ ಪುರಂದರವಿಠಲಗಲ್ಲದೆ
ಮಿಗಿಲಾದ ದೈವಗಳಿಗೀ ಭಾಗ್ಯ ಉಂಟೇ?
***

Saturday, March 15, 2008

ಸಾಹಿತ್ಯ

ಹರಿದಾಸರಸಂಘ ದೊರಕಿತು ಎನಗೀಗ ಇನ್ನೇನಿನ್ನೇನು
ವರಗುರು ಉಪದೇಶ ನೆರವಾಯ್ತು ಎನಗೆ ಇನ್ನೇನಿನ್ನೇನು
ಮಾಯದ ಸಂಸಾರ ಮಮಕಾರ ತಗ್ಗಿತು ಇನ್ನೇನಿನ್ನೇನು
ತೋಯಜಾಕ್ಷನ ನಾಮ ಜಿಹ್ವೆಯೊಳು ನೆಲೆಸಿತು ಇನ್ನೇನಿನ್ನೇನು
ಹಲವು ದೈವಗಳೆಂಬ ಹಂಬಲ ಬಿಟ್ಟಿತು ಇನ್ನೇನಿನ್ನೇನು
ಜಲಜನಾಭನ ಧ್ಯಾನ ಹೃದಯದೊಳು ದೊರಕಿತು ಇನ್ನೇನಿನ್ನೇನು
ತಂದೆತಾಯಿ ಮುಚುಕುಂದ ವರದನಾದ ಇನ್ನೇನಿನ್ನೇನು
ಸಂದೇಹವಿಲ್ಲ ಮುಕುಂದ ದಯಮಾಡ್ದ ಇನ್ನೇನಿನ್ನೇನು
ಏನೆಂದು ಹೇಳಲಿ ಆನಂದ ಸಂಭ್ರಮ ಇನ್ನೇನಿನ್ನೇನು
ಆ ನಂದಗೋಪನ ಕಂದನ ಮಹಿಮೆಯು ಇನ್ನೇನಿನ್ನೇನು
ಎನ್ನ ವಂಶಗಳೆಲ್ಲವು ಪಾವವಂಶಗಳೆಲ್ಲ ಪಾವನ ಆದವು ಇನ್ನೇನಿನ್ನೇನು
ಚಿನ್ಮಯ ಪುರಂದರವಿಠಲಯ್ಯ ದೊರಕಿದ ಇನ್ನೇನಿನ್ನೇನು!
****

ಶ್ರೀ ಗಣೇಶಾಯ ನಮಃ




ಗಜವದನಾ ಬೇಡುವೇ ಗೌರಿ ತನಯ
ತ್ರಿಜಗ ವಂದಿತನೇ ಸುಜನರ ಪೊರೆವನೆ ಪ

ಪಾಶಂಕುಶಧರ ಪಾರಮಪವಿತ್ರ
ಮೂಷಿಕವಾಹನ ಮುನಿಜನ ಪ್ರೇಮ ಅ. ಪ

ಮೋದದಿ ನಿನ್ನಯ ಪಾದಾವ ತೋರೋ
ಸಾಧು ವಂದಿತನೆ ಆದರದಿಂದಲಿ
ಸರಸಿಜಾನಾಭ ಶ್ರೀಪ್ರರಂದರ ವಿಠಲನ
ನಿರುತ ನೆನೆಯುವಂತೆ ದಯಮಡೋ ಚ

***