Friday, January 2, 2009

ಗೋವಿಂದ ಗೋವಿಂದ ಶ್ರೀ ಶ್ರೀನಿವಾಸ



ಗೋವಿಂದ ಗೋವಿಂದ ಶ್ರೀ ಶ್ರೀನಿವಾಸ - ಪಾರುಪಲ್ಲಿ ರಂಗನಾಥ್ ಅವರು ಸಂಗೀತ ಸಂಯೋಜಿಸಿ ಹಾಡಿರುವ ಈ ಕ್ಯಾಸೆಟ್ ಕೇಳಿಕೊಂಡು ತಿರುಪತಿ ಬೇಟ್ಟ ಹತ್ತುವುದು ಎಂದರೆ ಪರಮ ಸೌಭಾಗ್ಯ. ಗೀತರಚನೆ ಶ್ರೀಯುತ ವಿ.ಸೂರ್ಯನಾರಾಯಣ ರಾವ್

ಹಾಡುಗಳನ್ನು ಲಾಲಿಸುವುದಕ್ಕೆ ಇಲ್ಲಿ ಕ್ಲಿಕ್ಕಿಸಿ : ಗೋವಿಂದ ಗೋವಿಂದ ಶ್ರೀ ಶ್ರೀನಿವಾಸ

೧.ಜಯ ವೆಂಕಟೇಶನೆ ಸಂಕಟ ಹರಣನೆ

ಜಯ ವೆಂಕಟೇಶನೆ ಸಂಕಟ ಹರಣನೆ ಜಯ ಭೋ
ಜಯ ನಮ್ಮಪ್ಪ ವೆಂಕಪ್ಪ ನಾಗಾಧೀಶನೆ ಜಯ ಭೋ

ನಂಬಿದ ಭಕ್ತರಿಗೆಲ್ಲ ಜಯವು ತಜ್ಯವು(?)
ತಜ್ಯವು(?) ದೇವ ನಿನ್ನ ದಾಸರಿಗೆ ಶಾಂತಿ ಭೋಗಗಳು
ನಿನ್ನ ದರುಶನವು ಹೊಂದಿದ ಕ್ಷಣವೇ ನಮಗೂ ಶಾಂತಿಯು
ನಿನ್ನ ದರುಶನದ ದಿವ್ಯಭಾಗ್ಯವೆ ಸೌಭಾಗ್ಯವು

ಏಳು ಬೆಟ್ಟಗಳ ಹತ್ತುವ ಕಾರ್ಯವು ನಮ್ಮ ಸಾಧನೆಯು
ನಾಮಸ್ಮರಣೆಯ ಮಾಡುವ ಕಾರ್ಯವು ನಮ್ಮ ಜೀವನವು
ನಂಬಿದ ನಮ್ಮನು ಕಾಯುವ ಕಾರ್ಯವು ನಿನ್ನ ಭಾರವೆಲೊ
ಕರುಣೆಯ ತೋರುತ ವರಗಳ ನೀಡುತ ಪೊರೆಯೊ ತಂದೆ

ಧ್ಯಾನಿಪ ಭಕ್ತನ ಹೃದಯದೆ ನೆಲೆಸಿದ ದೈವವು ನೀನಯ್ಯ
ಕರ್ಮದ ಮರ್ಮವನರಿಯಲು ಕಾರಣವಯ್ಯ ನಿನ್ನ ದಯಾ
ಬಂಧವ ಬಿಡಿಸಿ ಪರಿರಕ್ಷಿಸುವ ಬಾಂಧವ ನೀನಯ್ಯ
ಬಂಧ ಮೋಕ್ಷಗಳ ಭಾವನನಿರಿಯದ ಬಡವನು ನಾನಯ್ಯ

*********


೨. ಮಹಿತ ವೇದ ವಿಹಿತನೆ.

ಮಹಿತ ವೇದ ವಿಹಿತನೆ ವೇಂಕಟೇಶನೆ
ಇಹಪರಗಳು ನಿನ ವರಗಳು ಶ್ರೀನಿವಾಸನೆ
ಕರುಣಾರಸ ವರುಣಾಲಯ ಕಮಲಾಪ್ರಿಯಾ
ಉರಗಶಯನ ಗರುಡಗಮನ ಉರಾಗಾದ್ರೀಶ

ಕೈವಲ್ಯವ ಬಿಟ್ಟು ಜನರಿಗಾಗಿ ನೀನು
ಗಿರಿ ಶಿಖರದ ಮೇಲೆ ನೆಲೆಸಿರುವೆಯೊ ದೇವ
ದೇವಾ ನೀನಿರುವ ಸ್ಥಳವು ನಿಜ ಕೈವಲ್ಯ
ನಿನ್ನ ದಿವ್ಯ ದರುಶನವೇ ನಮ್ಮ ಭಾಗ್ಯ

ಶರಣು ಶರಣು ಶರಣೆಂಬೆನು ತಿರುಮಲ ತಿಮ್ಮಪ್ಪ
ಚರಣ ಕಮಲಗಳ ನಂಬಿಹೆ ಪರಿಪಾಲನೆ ಮಾಡೋ

ತಪ್ಪದೆ ದಾಸರ ಕಾಯುವ ದಯಾಸಾಗರ
ತಪ್ಪುಗಳನು ಗಣಿಸದ ವೆಂಕಪ್ಪ ನೀನೆ.
ತಂದೆ ತಾಯಿ ನೀನೆ ಶೆಷಾದ್ರಿವಾಸನೆ
ವಾಸವಾದಿ ವಂದಿತನೆ ವಾಸುದೇವನೆ.

************

೩. ಸಿರಿಸತಿ ಚಿತ್ತವ


ಸಿರಿಸತಿ ಚಿತ್ತವ ಹರಿಸಿದ ಚೋರನೆ ಶ್ರೀವೆಂಕಟೇಶನೆ
ದುರಿತಗಳನು ಗಛ್ಚಾಳನೆ ಮಾಡುವ ಕೋನೇರಿರಾಯನೆ
ಪಾಪಹರ ಚಕ್ರಧರ ಪಾಲನೆಮಾಡೋ ಪರಮಾತ್ಮ
ತಿರುಪತಿ ವೆಂಕಟರಮಣ ರಕ್ಷಿಸು ಕರುಣಾಭರಣ

ಸಾಸಿರ ನಾಮದ ಸಾರ್ವಭೌಮನೆ ಸಾಕಾರದೇವನೆ
ಸಕಲವು ನಿನ ಸಂಕಲ್ಪದ ಮಹಿಮೆ ಸಕಲವು ಅರಿತವನೆ , ಪ್ರಭುವೆ.
ಪಾಪಹರ ಚಕ್ರಧರ ಪಾಲನೆಮಾಡೋ ಪರಮಾತ್ಮ
ತಿರುಪತಿ ವೆಂಕಟರಮಣ ರಕ್ಷಿಸು ಕರುಣಾಭರಣ


ವಿಧವಿಧರೂಪದಿ ವಿಶ್ವವ ಪೊರೆವ ಅವತಾರಾನ್ವಿತನೆ
ನಾಮರೂಪಗಳ ಲೀಲಾಮಯನೆ ನಾಗಾದ್ರಿನಾಥನೆ
ಪಾಪಹರ ಚಕ್ರಧರ ಪಾಲನೆಮಾಡೋ ಪರಮಾತ್ಮ
ತಿರುಪತಿ ವೆಂಕಟರಮಣ ರಕ್ಷಿಸು ಕರುಣಾಭರಣ

******
೪.ಏಳು ಬೆಟ್ಟಗಳ ಅರಸ

ಏಳು ಬೆಟ್ಟಗಳ ಅರಸ ಜಗದೀಶ ಆಳುವಾ ದೊರೆ ನೀನಯ್ಯ
ನಿರ್ಮಲಾಂತಃಕರಣನೆ ಶ್ರೀಕರನೆ ನಿಗಮಪ(?)ತಿ ಉದ್ಧಾರನೆ
ದಯೆ ತೋರಿಸೊ, ನೀ ಪಾಲಿಸೋ ಕಾಪಾಡೆಲೊ ನೀ ದಯಾಳೋ

ದೀನ ಜನ ಮಂದಾರ ತ್ರಿಗುಣಗಳ ಸಂಹಾರ ಎನೆಗೆ ಸಕಲವೂ ನೀನೆಲೊ
ತಿರುಮಲೆಯ ಗಿರಿ ಮೇಲೆ ವರಗಳನು ವರ್ಷಿಸುವ ಪರಮದೈವವು ನೀನೆಲೊ
ದಯೆ ತೋರಿಸೊ, ನೀ ಪಾಲಿಸೋ ಕಾಪಾಡೆಲೊ ನೀ ದಯಾಳೋ

ನಿನ್ನ ದಯ ಬಯಸಿ ನಿನ್ನ ಸನ್ನಿಧಿಗೆ ಬಂದಿರುವ ಬಡವ ಭಕ್ತರ ಕಾಣೆಲೋ
ಎಲ್ಲೆ ಇಲ್ಲದಂತ ನಿನ ಕರುಣೆಯನು ಪಸರಿಸಿ ಚರಿತಾರ್ಥರನ್ನಾಗಿಸೊ
ದಯೆ ತೋರಿಸೊ, ನೀ ಪಾಲಿಸೋ ಕಾಪಾಡೆಲೊ ನೀ ದಯಾಳೋ

*********

No comments: