
ಪಲ್ಲವಿ:
ಶೃಂಗಪುರಾಧೀಶ್ವರಿ ಶಾರದೆ
ಶುಭಮಂಗಳೆ ಸರ್ವಾಭೀಷ್ಟಪ್ರಧೆ
ಅನುಪಲ್ಲವಿ:
ಶಂಕರ ಸನ್ನುತೆ ಶ್ರೀ ಪದ್ಮಚರಣೇ ಸಕಲಕಲಾ ವಿಶಾರದೆ ವರದೆ
ಸಲಹೆನ್ನ ತಾಯೆ ಸಾಮಗಾನಪ್ರಿಯೇ
ಚರಣ:
ಕರುಣಿಸೆನ್ನ ಶ್ರುತಿ ಗತಿಗಳ ಮಾತೆ
ಕಮನೀಯ ಸಪ್ತಸ್ವರಸುಪೂಜಿತೆ
ಕಾವ್ಯ ಗಾನ ಕಲಾಸ್ವರೂಪಿಣೀ
ಕಾಮಿತ ದಾಯಿನಿ ಕಲ್ಯಾಣಿ ಜನನಿ
ನನ್ನ ಗುನುಗುವಿಕೆಗೆ ಸಹಕಾರಿಯಾಗಲು ಹಾಡು-ಕೃತಿಗಳ ಸಾಹಿತ್ಯವನ್ನು ಒಂದು ಕಡೆ ಕಲೆ ಹಾಕುವ ಸಣ್ಣ ಪ್ರಯತ್ನ. ಹಾಗೆ ಕೆಲವು ಸಾಂಗೀತಿಕ ಮಾಹಿತಿ, ರಾಗಲಕ್ಷಣಗಳು ಇತ್ಯಾದಿಗಳು ಸಹ ಇವೆ. ***
No comments:
Post a Comment