Sunday, January 11, 2009

ಸಕಲ ಗ್ರಹ ಬಲ

ಸಕಲ ಗ್ರಹ ಬಲ ನೀನೆ ಸರಸಿಜಾಕ್ಷ ನಿಖಿಲ ರಕ್ಷಕ ನೀನೆ ವಿಶ್ವ ವ್ಯಾಪಕನೆ
ರವಿಚಂದ್ರ ಬುಧ ನೀನೆ ರಾಹು ಕೇತುವು ನೀನೆ ಕವಿ ಗುರು ಶನಿಯು ಮಂಗಳನು ನೀನೆ
ದಿವ ರಾತ್ರಿಯು ನೀನೆ ನವ ವಿಧಾನವು ನೀನೆ ಭವರೋಗ ಹರ ನೀನೆ ಬೇಷಜನು ನೀನೆ.
ಪಕ್ಷಮಾಸವು ನೀನೆ ಪರ್ವ ಕಾಲವು ನೀನೆ ನಕ್ಷತ್ರ ಯೋಗ ತಿಥಿ ಕರಣ ನೀನೆ.
ಅಕ್ಷಯವಾಗಿ ದ್ರೌಪದಿಯ ಮಾನವಕಾಯ್ದ ಪಕ್ಷಿವಾಹನ ನೀನೆ ರಕ್ಷಕನು ನೀನೆ.
ಋತು ವತ್ಸರವು ನೀನೆ ಪ್ರತ ಯುಗಾದಿಯು ನೀನೆ ಕ್ರತು ಹೋಮ ಯಗ್ನ ಸದ್ಗತಿಯು ನೀನೆ.
ಜಿತವಾಗಿ ಎನ್ನೋಡೆಯ ಪುರಂದರ ವಿಟ್ಠಲಾ ಶ್ರುತಿಗೆ ಸಿಲುಕದ ಮಹಾ ಮಹಿಮ ನೀನೆ.

No comments: