Monday, January 12, 2009

ಶ್ರೀರಾಮರಕ್ಷಾಸ್ತೋತ್ರ




॥ ಶ್ರೀಗಣೇಶಾಯ ನಮಃ ॥

ವಿನಿಯೋಗಃ-
ಅಸ್ಯ ಶ್ರೀರಾಮರಕ್ಷಾಸ್ತೋತ್ರಮಂತ್ರಸ್ಯ । ಬುಧ-ಕೌಶಿಕ ಋಷಿಃ । ಅನುಷ್ಟುಪ್ ಛಂದಃ । ಶ್ರೀಸೀತಾರಾಮಚಂದ್ರೋ ದೇವತಾ । ಸೀತಾ ಶಕ್ತಿಃ । ಶ್ರೀಮದ್ ಹನುಮಾನ ಕೀಲಕಮ್ ।ಶ್ರೀರಾಮಚಂದ್ರ-ಪ್ರೀತ್ಯರ್ಥೇ ಶ್ರೀರಾಮ-ರಕ್ಷಾ-ಸ್ತೋತ್ರ-ಮನ್ತ್ರ-ಜಪೇ ವಿನಿಯೋಗಃ ॥
ಋಷ್ಯಾದಿ-ನ್ಯಾಸಃ-
ಬುಧ-ಕೌಶಿಕ ಋಷಯೇ ನಮಃ ಶಿರಸಿ । ಅನುಷ್ಟುಪ್ ಛಂದಸೇ ನಮಃ ಮುಖೇ । ಶ್ರೀಸೀತಾ-ರಾಮಚಂದ್ರೋ ದೇವತಾಯೈ ನಮಃ ಹೃದಿ । ಸೀತಾ ಶಕ್ತಯೇ ನಮಃ ನಾಭೌ । ಶ್ರೀಮದ್ ಹನುಮಾನ ಕೀಲಕಾಯ ನಮಃ ಪಾದಯೋ ।ಶ್ರೀರಾಮಚಂದ್ರ-ಪ್ರೀತ್ಯರ್ಥೇ ಶ್ರೀರಾಮ-ರಕ್ಷಾ-ಸ್ತೋತ್ರ-ಮನ್ತ್ರ-ಜಪೇ ವಿನಿಯೋಗಾಯ ನಮಃ ಸರ್ವಾಂಗೇ ॥

॥ ಅಥ ಧ್ಯಾನಮ್ ॥
ಧ್ಯಾಯೇದಾಜಾನು-ಬಾಹುಂ ಧೃತ-ಶರ-ಧನುಷಂ ಬದ್ಧ-ಪದ್ಮಾಸನಸ್ಥಮ್ ।
ಪೀತಂ ವಾಸೋ ವಸಾನಂ ನವ-ಕಮಲ-ದಲ-ಸ್ಪರ್ಧಿ-ನೇತ್ರಂ ಪ್ರಸನ್ನಮ್ ।
ವಾಮಾಂಕಾರೂಢ-ಸೀತಾ-ಮುಖ-ಕಮಲ-ಮಿಲಲ್ಲೋಚನಂ ನೀರದಾಭಮ್ ।
ನಾನಾಲಂಕಾರ-ದೀಪ್ತಂ ದಧತಮುರು-ಜಟಾಮಂಡನಂ ರಾಮಚಂದ್ರಮ್॥
॥ಇತಿ ಧ್ಯಾನಮ್॥

॥ಮೂಲ-ಪಾಠ॥
ಚರಿತಂ ರಘುನಾಥಸ್ಯ ಶತ-ಕೋಟಿ ಪ್ರವಿಸ್ತರಮ್ ।
ಏಕೈಕಮಕ್ಷರಂ ಪುಂಸಾಂ, ಮಹಾಪಾತಕನಾಶನಮ್ ॥ ೧॥
ಧ್ಯಾತ್ವಾ ನೀಲೋತ್ಪಲ-ಶ್ಯಾಮಂ, ರಾಮಂ ರಾಜೀವ-ಲೋಚನಮ್ ।
ಜಾನಕೀ-ಲಕ್ಷ್ಮಣೋಪೇತಂ, ಜಟಾ-ಮುಕುಟ-ಮಣ್ಡಿತಮ್ ॥ ೨॥
ಸಾಸಿ-ತೂಣ-ಧನುರ್ಬಾಣ-ಪಾಣಿಂ ನಕ್ತಂ ಚರಾನ್ತಕಮ್ ।
ಸ್ವ-ಲೀಲಯಾ ಜಗತ್-ತ್ರಾತುಮಾವಿರ್ಭೂತಮಜಂ ವಿಭುಮ್ ॥ ೩॥
ರಾಮರಕ್ಷಾಂ ಪಠೇತ್ಪ್ರಾಜ್ಞಃ, ಪಾಪಘ್ನೀಂ ಸರ್ವ-ಕಾಮದಾಮ್ ।
ಶಿರೋ ಮೇ ರಾಘವಃ ಪಾತು, ಭಾಲಂ ದಶರಥಾತ್ಮಜಃ ॥ ೪॥
ಕೌಸಲ್ಯೇಯೋ ದೃಶೌ ಪಾತು, ವಿಶ್ವಾಮಿತ್ರಪ್ರಿಯಃ ಶ್ರುತೀ ।
ಘ್ರಾಣಂ ಪಾತು ಮಖ-ತ್ರಾತಾ, ಮುಖಂ ಸೌಮಿತ್ರಿ-ವತ್ಸಲಃ ॥ ೫॥
ಜಿಹ್ವಾಂ ವಿದ್ಯಾ-ನಿಧಿಃ ಪಾತು, ಕಣ್ಠಂ ಭರತ-ವಂದಿತಃ ।
ಸ್ಕಂಧೌ ದಿವ್ಯಾಯುಧಃ ಪಾತು, ಭುಜೌ ಭಗ್ನೇಶ-ಕಾರ್ಮುಕಃ ॥ ೬॥
ಕರೌ ಸೀತಾ-ಪತಿಃ ಪಾತು, ಹೃದಯಂ ಜಾಮದಗ್ನ್ಯ-ಜಿತ್ ।
ಮಧ್ಯಂ ಪಾತು ಖರ-ಧ್ವಂಸೀ, ನಾಭಿಂ ಜಾಮ್ಬವದಾಶ್ರಯಃ ॥ ೭॥
ಸುಗ್ರೀವೇಶಃ ಕಟೀ ಪಾತು, ಸಕ್ಥಿನೀ ಹನುಮತ್ಪ್ರಭುಃ ।
ಊರೂ ರಘೂತ್ತಮಃ ಪಾತು, ರಕ್ಷಃ-ಕುಲ-ವಿನಾಶ-ಕೃತ್ ॥ ೮॥
ಜಾನುನೀ ಸೇತುಕೃತ್ಪಾತು, ಜಂಘೇ ದಶಮುಖಾನ್ತಕಃ ।
ಪಾದೌ ಬಿಭೀಷಣ-ಶ್ರೀದಃ, ಪಾತು ರಾಮೋಽಖಿಲಂ ವಪುಃ ॥ ೯॥
ಏತಾಂ ರಾಮ-ಬಲೋಪೇತಾಂ ರಕ್ಷಾಂ ಯಃ ಸುಕೃತೀ ಪಠೇತ್ ।
ಸ ಚಿರಾಯುಃ ಸುಖೀ ಪುತ್ರೀ, ವಿಜಯೀ ವಿನಯೀ ಭವೇತ್ ॥ ೧೦॥
ಪಾತಾಲ-ಭೂತಲ-ವ್ಯೋಮ-ಚಾರಿಣಶ್ಛದ್ಮ-ಚಾರಿಣಃ ।
ನ ದ್ರಷ್ಟುಮಪಿ ಶಕ್ತಾಸೇ, ರಕ್ಷಿತಂ ರಾಮ-ನಾಮಭಿಃ ॥ ೧೧॥
ರಾಮೇತಿ ರಾಮ-ಭದ್ರೇತಿ ರಾಮಚಂದ್ರೇತಿ ವಾ ಸ್ಮರನ್ ।
ನರೋ ನ ಲಿಪ್ಯತೇ ಪಾಪೈಃ ಭುಕ್ತಿಂ ಮುಕ್ತಿಂ ಚ ವಿನ್ದತಿ ॥ ೧೨॥
ಜಗಜ್ಜೈತ್ರೈಕ-ಮನ್ತ್ರೇಣ ರಾಮ-ನಾಮ್ನಾಽಭಿರಕ್ಷಿತಮ್ ।
ಯಃ ಕಂಠೇ ಧಾರಯೇತ್-ತಸ್ಯ ಕರಸ್ಥಾಃ ಸರ್ವ-ಸಿದ್ಧಯಃ ॥ ೧೩॥
ವಜ್ರ-ಪಂಜರ-ನಾಮೇದಂ, ಯೋ ರಾಮಕವಚಂ ಸ್ಮರೇತ್ ।
ಅವ್ಯಾಹತಾಜ್ಞಃ ಸರ್ವತ್ರ, ಲಭತೇ ಜಯ-ಮಂಗಲಮ್ ॥ ೧೪॥
ಆದಿಷ್ಟ-ವಾನ್ ಯಥಾ ಸ್ವಪ್ನೇ ರಾಮ-ರಕ್ಷಾಮಿಮಾಂ ಹರಃ ।
ತಥಾ ಲಿಖಿತ-ವಾನ್ ಪ್ರಾತಃ, ಪ್ರಬುದ್ಧೋ ಬುಧಕೌಶಿಕಃ ॥ ೧೫॥
ಆರಾಮಃ ಕಲ್ಪ-ವೃಕ್ಷಾಣಾಂ ವಿರಾಮಃ ಸಕಲಾಪದಾಮ್ ।
ಅಭಿರಾಮಸ್ತ್ರಿ-ಲೋಕಾನಾಂ, ರಾಮಃ ಶ್ರೀಮಾನ್ ಸ ನಃ ಪ್ರಭುಃ ॥ ೧೬॥
ತರುಣೌ ರೂಪ-ಸಂಪನ್ನೌ ಸುಕುಮಾರೌ ಮಹಾಬಲೌ ।
ಪುಂಡರೀಕ-ವಿಶಾಲಾಕ್ಷೌ ಚೀರ-ಕೃಷ್ಣಾಜಿನಾಮ್ಬರೌ ॥ ೧೭॥
ಫಲ-ಮೂಲಾಶಿನೌ ದಾನ್ತೌ, ತಾಪಸೌ ಬ್ರಹ್ಮಚಾರಿಣೌ ।
ಪುತ್ರೌ ದಶರಥಸ್ಯೈತೌ ಭ್ರಾತರೌ ರಾಮ-ಲಕ್ಷ್ಮಣೌ ॥ ೧೮॥
ಶರಣ್ಯೌ ಸರ್ವ-ಸತ್ತ್ವಾನಾಂ ಶ್ರೇಷ್ಠೌ ಸರ್ವ-ಧನುಷ್ಮತಾಮ್ ।
ರಕ್ಷಃ ಕುಲ-ನಿಹಂತಾರೌ, ತ್ರಾಯೇತಾಂ ನೋ ರಘೂತ್ತಮೌ ॥ ೧೯॥
ಆತ್ತ-ಸಜ್ಜ-ಧನುಷಾವಿಶು-ಸ್ಪೃಶಾವಕ್ಷಯಾಶುಗ-ನಿಷಂಗ-ಸಂಗಿನೌ ।
ರಕ್ಷಣಾಯ ಮಮ ರಾಮ-ಲಕ್ಷ್ಮಣಾವಗ್ರತಃ ಪಥಿ ಸದೈವ ಗಚ್ಛತಾಮ್ ॥ ೨೦॥
ಸನ್ನದ್ಧಃ ಕವಚೀ ಖಡ್ಗೀ ಚಾಪ-ಬಾಣ-ಧರೋ ಯುವಾ ।
ಗಚ್ಛನ್ಮನೋರಥೋಽಸ್ಮಾಕಂ, ರಾಮಃ ಪಾತು ಸಲಕ್ಷ್ಮಣಃ ॥ ೨೧॥
ರಾಮೋ ದಾಶರಥಿಃ ಶೂರೋ, ಲಕ್ಷ್ಮಣಾನುಚರೋ ಬಲೀ ।
ಕಾಕುತ್ಸ್ಥಃ ಪುರುಷಃ ಪೂರ್ಣಾ, ಕೌಸಲ್ಯೇಯೋ ರಘುತ್ತಮಃ ॥ ೨೨॥
ವೇದಾನ್ತ-ವೇದ್ಯೋ ಯಜ್ಞೇಶಃ, ಪುರಾಣ-ಪುರುಷೋತ್ತಮಃ ।
ಜಾನಕೀ-ವಲ್ಲಭಃ ಶ್ರೀಮಾನಪ್ರಮೇಯ-ಪರಾಕ್ರಮಃ ॥ ೨೩॥
ಇತ್ಯೇತಾನಿ ಜಪನ್ನಿತ್ಯಂ, ಮದ್ಭಕ್ತಃ ಶ್ರದ್ಧಯಾನ್ವಿತಃ ।
ಅಶ್ವಮೇಧಾಧಿಕಂ ಪುಣ್ಯಂ, ಸಂಪ್ರಾಪ್ನೋತಿ ನ ಸಂಶಯಃ ॥ ೨೪॥
ರಾಮಂ ದುರ್ವಾ-ದಲ-ಶ್ಯಾಮಂ, ಪದ್ಮಾಕ್ಷಂ ಪೀತ-ವಾಸಸಮ್ ।
ಸ್ತುವಂತಿ ನಾಮಭಿರ್ದಿವ್ಯೈರ್ನ ತೇ ಸಂಸಾರಿಣೋ ನರಃ ॥ ೨೫॥
ರಾಮಂ ಲಕ್ಷ್ಮಣಪೂರ್ವಜಂ ರಘುವರಂ ಸೀತಾಪತಿಂ ಸುಂದರಮ್ ।
ಕಾಕುತ್ಸ್ಥಂ ಕರುಣಾರ್ಣವಂ ಗುಣನಿಧಿಂ ವಿಪ್ರಪ್ರಿಯಂ ಧಾರ್ಮಿಕಮ್ ।
ರಾಜೇಂದ್ರಂ ಸತ್ಯ-ಸನ್ಧಂ ದಶರಥ-ತನಯಂ ಶ್ಯಾಮಲಂ ಶಾಂತ-ಮೂರ್ತಮ್ ।
ವಂದೇ ಲೋಕಾಭಿರಾಮಂ ರಘು-ಕುಲ-ತಿಲಕಂ ರಾಘವಂ ರಾವಣಾರಿಮ್ ॥ ೨೬॥
ರಾಮಾಯ ರಾಮ-ಭದ್ರಾಯ ರಾಮಚಂದ್ರಾಯ ವೇಧಸೇ ।
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ॥ ೨೭॥
ಶ್ರೀರಾಮ ರಾಮ ರಘುನಂದನ ರಾಮ ರಾಮ । ಶ್ರೀರಾಮ ರಾಮ ಭರತಾಗ್ರಜ ರಾಮ ರಾಮ ।
ಶ್ರೀರಾಮ ರಾಮ ರಣ-ಕರ್ಕಶ ರಾಮ ರಾಮ । ಶ್ರೀರಾಮ ರಾಮ ಶರಣಂ ಭವ ರಾಮ ರಾಮ ॥ ೨೮॥
ಶ್ರೀರಾಮಚಂದ್ರ-ಚರಣೌ ಮನಸಾ ಸ್ಮರಾಮಿ । ಶ್ರೀರಾಮಚಂದ್ರ-ಚರಣೌ ವಚಸಾ ಗೃಣಾಮಿ ।
ಶ್ರೀರಾಮಚಂದ್ರ-ಚರಣೌ ಶಿರಸಾ ನಮಾಮಿ । ಶ್ರೀರಾಮಚಂದ್ರ-ಚರಣೌ ಶರಣಂ ಪ್ರಪದ್ಯೇ ॥ ೨೯॥
ಮಾತಾ ರಾಮೋ ಮತ್ಪಿತಾ ರಾಮಚಂದ್ರಃ । ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ ।
ಸರ್ವಸ್ವಂ ಮೇ ರಾಮಚಂದ್ರೋ ದಯಾಲುಃ । ನಾನ್ಯಂ ಜಾನೇ ನೈವ ಜಾನೇ ನ ಜಾನೇ ॥ ೩೦॥
ದಕ್ಷಿಣೇ ಲಕ್ಷ್ಮಣೋ ಯಸ್ಯ, ವಾಮೇ ತು ಜನಕಾತ್ಮಜಾ ।
ಪುರತೋ ಮಾರುತಿರ್ಯಸ್ಯ ತಂ ವಂದೇ ರಘು-ನಂದನಮ್ ॥ ೩೧॥
ಲೋಕಾಭಿರಾಮಂ ರಣ-ರಂಗ-ಧೀರಮ್, ರಾಜೀವ-ನೇತ್ರಂ ರಘು-ವಂಶ-ನಾಥಮ್ ।
ಕಾರುಣ್ಯ-ರೂಪಂ ಕರುಣಾಕರಂ ತಮ್, ಶ್ರೀರಾಮಚಂದ್ರಮ್ ಶರಣಂ ಪ್ರಪದ್ಯೇ ॥ ೩೨॥
ಮನೋಜವಂ ಮಾರುತ-ತುಲ್ಯ-ವೇಗಮ್, ಜಿತೇನ್ದ್ರಿಯಂ ಬುದ್ಧಿ-ಮತಾಂ ವರಿಷ್ಠಮ್ ।
ವಾತಾತ್ಮಜಂ ವಾನರ-ಯೂಥ-ಮುಖ್ಯಮ್, ಶ್ರೀರಾಮ-ದೂತಂ ಶರಣಂ ಪ್ರಪದ್ಯೇ ॥ ೩೩॥
ಕೂಜನ್ತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ ।
ಆರುಹ್ಯ ಕವಿತಾ-ಶಾಖಾಂ ವಂದೇ ವಾಲ್ಮೀಕಿ-ಕೋಕಿಲಮ್ ॥ ೩೪॥
ಆಪದಾಂ ಅಪಹರ್ತಾರಂ, ದಾತಾರಂ ಸರ್ವಸಂಪದಾಮ್ ।
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ॥ ೩೫॥
ಭರ್ಜನಂ ಭವ-ಬೀಜಾನಾಂ ಅರ್ಜನಂ ಸುಖ-ಸಮ್ಪದಾಮ್ ।
ತರ್ಜನಂ ಯಮ-ದೂತಾನಾಂ ರಾಮ ರಾಮೇತಿ ಗರ್ಜನಮ್ ॥ ೩೬॥
ರಾಮೋ ರಾಜ-ಮಣಿಃ ಸದಾ ವಿಜಯತೇ ರಾಮಂ ರಮೇಶಂ ಭಜೇ ।
ರಾಮೇಣಾಭಿಹತಾ ನಿಶಾಚರ-ಚಮೂ ರಾಮಾಯ ತಸ್ಮೈ ನಮಃ ।
ರಾಮಾನ್ನಾಸ್ತಿ ಪರಾಯಣಂ ಪರ-ತರಂ ರಾಮಸ್ಯ ದಾಸೋಽಸ್ಮ್ಯಹಮ್ ।
ರಾಮೇ ಚಿತ್ತ-ಲಯಃ ಸದಾ ಭವತು ಮೇ ಭೋ ರಾಮ ಮಾಮುದ್ಧರ ॥ ೩೭॥
ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ ।
ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ ॥ ೩೮॥
ಇತಿ ಶ್ರೀಬುಧಕೌಶಿಕವಿರಚಿತಂ ಶ್ರೀರಾಮರಕ್ಷಾಸ್ತೋತ್ರಂ ಸಂಪೂರ್ಣಮ್ ॥
॥ ಶ್ರೀಸೀತಾರಾಮಚಂದ್ರಾರ್ಪಣಮಸ್ತು ॥

Sunday, January 11, 2009

ಸಕಲ ಗ್ರಹ ಬಲ

ಸಕಲ ಗ್ರಹ ಬಲ ನೀನೆ ಸರಸಿಜಾಕ್ಷ ನಿಖಿಲ ರಕ್ಷಕ ನೀನೆ ವಿಶ್ವ ವ್ಯಾಪಕನೆ
ರವಿಚಂದ್ರ ಬುಧ ನೀನೆ ರಾಹು ಕೇತುವು ನೀನೆ ಕವಿ ಗುರು ಶನಿಯು ಮಂಗಳನು ನೀನೆ
ದಿವ ರಾತ್ರಿಯು ನೀನೆ ನವ ವಿಧಾನವು ನೀನೆ ಭವರೋಗ ಹರ ನೀನೆ ಬೇಷಜನು ನೀನೆ.
ಪಕ್ಷಮಾಸವು ನೀನೆ ಪರ್ವ ಕಾಲವು ನೀನೆ ನಕ್ಷತ್ರ ಯೋಗ ತಿಥಿ ಕರಣ ನೀನೆ.
ಅಕ್ಷಯವಾಗಿ ದ್ರೌಪದಿಯ ಮಾನವಕಾಯ್ದ ಪಕ್ಷಿವಾಹನ ನೀನೆ ರಕ್ಷಕನು ನೀನೆ.
ಋತು ವತ್ಸರವು ನೀನೆ ಪ್ರತ ಯುಗಾದಿಯು ನೀನೆ ಕ್ರತು ಹೋಮ ಯಗ್ನ ಸದ್ಗತಿಯು ನೀನೆ.
ಜಿತವಾಗಿ ಎನ್ನೋಡೆಯ ಪುರಂದರ ವಿಟ್ಠಲಾ ಶ್ರುತಿಗೆ ಸಿಲುಕದ ಮಹಾ ಮಹಿಮ ನೀನೆ.

ಆದಿತ್ಯಹೃದಯಮ್




|| ಆದಿತ್ಯಹೃದಯಮ್||

ತತೋ ಯುದ್ಧಪರಿಶ್ರಾನ್ತಂ ಸಮರೇ ಚಿನ್ತಯಾ ಸ್ಥಿತಮ್|
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್|| ೧||

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್|
ಉಪಾಗಮ್ಯಾಬ್ರವೀದ್ರಾಮಮಗಸ್ತ್ಯೋ ಭಗವಾನ್ ಋಷಿಃ|| ೨||

ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್|
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ|| ೩||

ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್|
ಜಯಾವಹಂ ಜಪೇನ್ನಿತ್ಯಮ್ ಅಕ್ಷಯ್ಯಂ ಪರಮಂ ಶಿವಮ್|| ೪||

ಸರ್ವಮಙ್ಗಲಮಾಙ್ಗಲ್ಯಂ ಸರ್ವಪಾಪಪ್ರಣಾಶನಮ್|
ಚಿನ್ತಾಶೋಕಪ್ರಶಮನಮ್ ಆಯುರ್ವರ್ಧನಮುತ್ತಮಮ್|| ೫||

ರಶ್ಮಿಮಂತಂ ಸಮುದ್ಯನ್ತಂ ದೇವಾಸುರನಮಸ್ಕೃತಮ್|
ಪೂಜಯಸ್ವ ವಿವಸ್ವನ್ತಂ ಭಾಸ್ಕರಂ ಭುವನೇಶ್ವರಮ್|| ೬||

ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ|
ಏಷ ದೇವಾಸುರಗಣಾಂಲ್ಲೋಕಾನ್ ಪಾತಿ ಗಭಸ್ತಿಭಿಃ|| ೭||

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕನ್ದಃ ಪ್ರಜಾಪತಿಃ|
ಮಹೇನ್ದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ|| ೮||

ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ|
ವಾಯುರ್ವಹ್ನಿಃ ಪ್ರಜಾಪ್ರಾಣ ಋತುಕರ್ತಾ ಪ್ರಭಾಕರಃ|| ೯||

ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್|
ಸುವರ್ಣಸದೃಶೋ ಭಾನುರ್ಹಿರಣ್ಯರೇತಾ ದಿವಾಕರಃ|| ೧೦||

ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿರ್ಮರೀಚಿಮಾನ್|
ತಿಮಿರೋನ್ಮಥನಃ ಶಮ್ಭುಸ್ತ್ವಷ್ಟಾ ಮಾರ್ತಾಣ್ಡ ಅಂಶುಮಾನ್|| ೧೧||

ಹಿರಣ್ಯಗರ್ಭಃ ಶಿಶಿರಸ್ತಪನೋ ಭಾಸ್ಕರೋ ರವಿಃ|
ಅಗ್ನಿಗರ್ಭೋಽದಿತೇಃ ಪುತ್ರಃ ಶಙ್ಖಃ ಶಿಶಿರನಾಶನಃ|| ೧೨||

ವ್ಯೋಮನಾಥಸ್ತಮೋಭೇದೀ ಋಗ್ಯಜುಃಸಾಮಪಾರಗಃ|
ಘನವೃಷ್ಟಿರಪಾಂ ಮಿತ್ರೋ ವಿನ್ಧ್ಯವೀಥೀಪ್ಲವಙ್ಗಮಃ|| ೧೩||

ಆತಪೀ ಮಣ್ಡಲೀ ಮೃತ್ಯುಃ ಪಿಙ್ಗಲಃ ಸರ್ವತಾಪನಃ|
ಕವಿರ್ವಿಶ್ವೋ ಮಹಾತೇಜಾಃ ರಕ್ತಃ ಸರ್ವಭವೋದ್ಭವಃ|| ೧೪||

ನಕ್ಷತ್ರಗ್ರಹತಾರಾಣಾಮಧಿಪೋ ವಿಶ್ವಭಾವನಃ|
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್ ನಮೋಽಸ್ತು ತೇ|| ೧೫||

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ|
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ|| ೧೬||

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ|
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ|| ೧೭||

ನಮ ಉಗ್ರಾಯ ವೀರಾಯ ಸಾರಙ್ಗಾಯ ನಮೋ ನಮಃ|
ನಮಃ ಪದ್ಮಪ್ರಬೋಧಾಯ ಮಾರ್ತಾಣ್ಡಾಯ ನಮೋ ನಮಃ|| ೧೮||

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯವರ್ಚಸೇ|
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ|| ೧೯||

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾಮಿತಾತ್ಮನೇ|
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ|| ೨೦||

ತಪ್ತಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ|
ನಮಸ್ತಮೋಽಭಿನಿಘ್ನಾಯ ರುಚಯೇ ಲೋಕಸಾಕ್ಷಿಣೇ|| ೨೧||

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ|
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ|| ೨೨||

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ|
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿಹೋತ್ರಿಣಾಮ್|| ೨೩||

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ|
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ|| ೨೪||

|| ಫಲಶ್ರುತಿಃ||

ಏನಮಾಪತ್ಸು ಕೃಚ್ಛ್ರೇಷು ಕಾನ್ತಾತೇಷು ಭಯೇಷು ಚ|
ಕೀರ್ತಯನ್ ಪುರುಷಃ ಕಶ್ಚಿನ್ನಾವಸೀದತಿ ರಾಘವ|| ೨೫||

ಪೂಜಯಸ್ವೈನಮೇಕಾಗ್ರೋ ದೇವದೇವಂ ಜಗತ್ಪತಿಮ್|
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ|| ೨೬||

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ|
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್|| ೨೭||

ಏತಚ್ಛ್ರುತ್ವಾ ಮಹಾತೇಜಾ ನಷ್ಟಶೋಕೋಽಭವತ್ತದಾ|
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್|| ೨೮||

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್|
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್|| ೨೯||

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್|
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋಽಭವತ್|| ೩೦||

ಅಥ ರವಿರವದನ್ನಿರೀಕ್ಷ್ಯ ರಾಮಂ
ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ|
ನಿಶಿಚರಪತಿಸಂಕ್ಷಯಂ ವಿದಿತ್ವಾ
ಸುರಗಣಮಧ್ಯಗತೋ ವಚಸ್ತ್ವರೇತಿ|| ೩೧||


ಆದಿತ್ಯ ಹೃದಯಂ - ಇಲ್ಲಿ ಕೇಳಬಹುದಾಗಿದೆ

Saturday, January 10, 2009

ಸ್ಕಂದ ಶೋಡಷಂ



ಷಡ್ವಕ್ತ್ರಂ ಶಿಖಿವಾಹನಂ ತ್ರಿನಯನಂ ಚಿತ್ರಾಂಬರಾಲಂಕ್ರಿತಂ
ಶಕ್ತಿಂ ವಜ್ರಮಥೊ ತ್ರಿಶೂಲಮಭಯಂ ಖೇಟಂ ಧನುಃ ಸ್ವಸ್ತಿಕಂ
ಪಾಶಂ ಕುಕ್ಕುಟಮಂಕುಶಂಚ ಧೋರ್ಭಿರ್ಧಧಾನಾಂ ಸದಾ
ಧ್ಯಾಯೇದೇಪ್ಸಿತ ಸಿದ್ಧಿದಂ ಶಿವಸುತಂ ಸ್ಕಂದಂ ಸುರಾರಾದಿತಂ
ಸುಬ್ರಹ್ಮಣ್ಯಂ ಪ್ರಣಮಾಮ್ಯಹಂ ಸರ್ವಙ್ನ ಸರ್ವದಾ ಸದಾ
ಅಭೀಷ್ಟ ಫಲ ಸಿದ್ಯರ್ಥಂ ಪ್ರವಕ್ಷ್ಯೇ ನಾಮ ಶೋಡಷಂ

Sunday, January 4, 2009

ರತ್ನಗರ್ಭ ಗಣಪತಿ


ಓಂ ರತ್ನಗರ್ಭ ಗಣಪತಿಂ ಸಮಾಶ್ರಯಾಮಿ ಸಂತತಂ
ರತ್ನ ವಚನ ಗೀಯಮಾನ ನಿಜ ಚರಿತ್ರ ವೈಭವಂ
ತುಮುಲಯೇಶ ಶೇಖರಂ ಪ್ರಣವಮಯ ಸ್ವರೂಪಿನಂ
ಶಿವಸುತಂ ಭವದಮಖಿಲ ಭುವನ ಮಂಗಳಪ್ರದಂ
ರತ್ನಗರ್ಭ ಗಣಪತಿಂ ಪಾಹಿಮಾಂ ಪಾಹಿಮಾಂ
ರತ್ನಗರ್ಭ ಗಣಪತಿಂ ರಕ್ಷಮಾಂ ರಕ್ಷಮಾಂ

ಭಿನ್ನದಂತಮಖಿಲ ದೇಹ ಸನ್ನುತಂ ದಯಾನ್ವಿತಂ
ಪನ್ನಗೋಪ ವೀತಮಾನ ಪನ್ನಪಾದಮಾದರಂ
ಕಷ್ಯಪಾದಿ ಮೌನಿಹೃದಯ ಕಮಲ ಕುಹುಲ ಮಧುಕರಂ
ಋಷ್ಯಶ್ರಿಂಗ ಪ್ರಳಯತೀಂದ್ರ ವಷ್ಯಮಿಷ್ಟದಾಯಕಂ
ರತ್ನಗರ್ಭ ಗಣಪತಿಂ ಪಾಹಿಮಾಂ ಪಾಹಿಮಾಂ
ರತ್ನಗರ್ಭ ಗಣಪತಿಂ ರಕ್ಷಮಾಂ ರಕ್ಷಮಾಂ

Click here to listen

Friday, January 2, 2009

ಎಲ್ಲಿ ಹನುಮನೊ ಅಲ್ಲಿ ರಾಮನು




*********
ಎತ್ತಲೊ ಮಾಯವಾದ ಮುತ್ತಿನ ಮೂಗುತಿ ನೀನು
ಎತ್ತಿತಂದೆ ಎಲ್ಲಿಂದ ರಾಯ? ಮುತ್ತೆತ್ತ ರಾಯ.

ಅತ್ತಾ ಸೀತಮ್ಮನ ಮುದ್ದು ಮೊಗದಲ್ಲಿ ಮತ್ತೆ
ನಗೆಯ ತಂದೆಯಾ ಮಹನೀಯಾ? ಮಾರುತಿರಾಯ!

ಸೀತಮ್ಮ ಸ್ನಾನ ಮಾಡಿ, ಮೂಗುತಿಯ ಹುಡುಕಾಡಿ
ನಿನ್ನ ಕೂಗಿದಳೇನು ಹನುಮಂತ ರಾಯ!

ನೀರಲ್ಲಿ ಬಾಲ ಬಿಟ್ಟು ನದಿಯನ್ನೆ ಶೋಧಿಸಿದೆ
ಎಂತ ಶ್ರದ್ಧೆಯೋ ಮಹನೀಯಾ, ಹನುಮಂತ ರಾಯ!

ಅಮ್ಮಾ ಸೀತಮ್ಮನು ನಿನ್ನ ಭಕ್ತಿಗೆ ಮೆಚ್ಚಿ ಮುತ್ತೆತ್ತೆರಾಯನೆಂದು ಹರಸಿದಳೇನು?
ನಿನ್ನಂತ ದಾಸನನು ಪಡೆದಾ ಶ್ರೀ ರಾಮನು ಎಂಥ ಭಾಗ್ಯವಂಥನಯ್ಯ, ಹನುಮಂತ ರಾಯ

ನಿನ್ನಂತೆ ಭಕ್ತಿ ಇಲ್ಲ, ನಿನ್ನಂತೆ ಶಕ್ತಿ ಇಲ್ಲ.
ಏನೂ ಇಲ್ಲದ ಜೀವ ನನ್ನದು ಸ್ವಾಮಿ
ನಿನ್ನೆ ನಾ ನಂಬಿ ಬಂದೆ ನೀನೆ ನನ್ನ ತಾಯಿ ತಂದೆ.
ಕಾಪಾಡುವಾ ಹೊಣೆಯು ನಿನ್ನದು, ತಂದೆ ನಿನ್ನದು.

’*******

ಎಲ್ಲಿ ಹನುಮನೊ ಅಲ್ಲಿ ರಾಮನು ಎಲ್ಲಿ ರಾಮನೊ ಅಲ್ಲಿ ಹನುಮನು
ರಾಮನೆ ಉಸಿರೇ ಹನುಮಾ, ಹನುಮನ ಪ್ರಾಣವೇ ರಾಮಾ

ಎಲ್ಲಿ ನೆನೆದರು ಅಲ್ಲಿಯೇ ಇರುವನು; ಎಲ್ಲಿ ಕರೆದರು ಅಲ್ಲಿ ಬರುವನು
ನೆರಳಿನಂತೆಯೆ ಬಳಿಯಲಿರುವನು, ಕರುಣೆಯಿಂದಲಿ ಸುಖ ಶಾಂತಿ ನೀಡುವ ಮುಖ್ಯಪ್ರಾಣ

ಮಂತ್ರಾ, ತಂತ್ರಾ ಕೇಳನು, ಸ್ತೋತ್ರ ಮಾಡುತಾ ತನ್ನ ಹೊಗಳು ಎನ್ನನು
ಪ್ರೇಮದಿಂದ ನೀ ಕರೆಯೆ ಬರುವನು, ಭಕ್ತನೊಬ್ಬನೆ ಅವನ ಗೆಲವನು ಎಂದೆಂದು

ಸ್ಮರಣೆ ಮಾತ್ರದಿ ಮನೆದಿ ಬೆರೆವನು, ಕಾಮ ಕ್ರೋಧ ಕ್ಷಣದಲ್ಲಿ ದಹಿಸಿ ಬಿಡುವನು
ಶಾಂತಿ ಕೊಡುವನು ನೆಮ್ಮದಿಯ ತರುವನು ಮನಸಿಗೆ ಮಹದಾನಂದ ನೀಡುವ ಮುಖ್ಯ ಪ್ರಾಣ

’******

ನಿನ್ನಂತೆ ನಾನಾಗಲಾರೆ ಏನುಮಾಡಲಿ ಹನುಮ
ನಿನ್ನಂತಾಗದೆ, ನನ್ನವನಾಗನೆ ನಿನ್ನ ಪ್ರಭು ಶ್ರೀ ರಾಮ

ಏಟುಕದ ಹಣ್ಣನೆ ನಾ ತರಲಾರೆ ಮೇಲಕೆ ಎಗರಿ ಹನುಮ
ಸೂರ್ಯನ ಹಿಡಿವ ಸಾಹಸಕಿಳಿದರೆ ಆ ಕ್ಷಣ ನಾ ನಿರ್ನಾಮ
ಹಾದಿಯ ಹಳ್ಳವೆ ದಾಟಲಸಾಧ್ಯ ಹೀಗಿರುವಾಗ ಹನುಮ
ಸಾಗರ ದಾಟುವ ಹಂಬಲ ಸಾಧ್ಯವೆ ಅಯ್ಯೋ ರಾಮರಾಮ

ಜಗಳ ಕಂಡರೆ ಓಡುವೆ ದೂರ ಎದೆಯಲಿ ಡವ ಡವ ಹನುಮ
ರಕ್ಕಸರಾ ನಾ ಕನಸಲಿ ಕಂಡರು ಬದುಕಿಗೆ ಪೂರ್ಣವಿರಾಮ
ಅಟ್ಟವ ಹತ್ತಲೆ ಶಕ್ತಿಯು ಇಲ್ಲ ಅಂತ ದೇಹವು ಹನುಮಾ
ಬೆಟ್ಟವನೆತ್ತುವೆನೆಂದರೆ ನನ್ನನು ನಂಬುವನೆ ಶ್ರೀರಾಮ?

ಕನಸಲಿ ಮನಸಲಿ ನಿನ್ನ ಉಸಿರಲಿ ತುಂಬಿದೆ ರಾಮನನಾಮ
ಚಂಚಲವಾದ ನನ್ನ ಮನದಲಿ ನನ್ನೀ ಮನದಲಿ ನಿಲ್ಲುವರಾರೂ ಹನುಮ
ಭಕ್ತಿಯು ಇಲ್ಲ ಶಕ್ತಿಯು ಇಲ್ಲ ಹುಟ್ಟಿದೆ ಯಾತಕೊ ಕಾಣೆ
ನೀ ಕೃಪೆಮಾಡದೆ ಹೋದರೆ ಹನುಮ ನಿನ್ನಯ ರಾಮನ ಆಣೇ

’ ********

ಗೋವಿಂದ ಗೋವಿಂದ ಶ್ರೀ ಶ್ರೀನಿವಾಸ



ಗೋವಿಂದ ಗೋವಿಂದ ಶ್ರೀ ಶ್ರೀನಿವಾಸ - ಪಾರುಪಲ್ಲಿ ರಂಗನಾಥ್ ಅವರು ಸಂಗೀತ ಸಂಯೋಜಿಸಿ ಹಾಡಿರುವ ಈ ಕ್ಯಾಸೆಟ್ ಕೇಳಿಕೊಂಡು ತಿರುಪತಿ ಬೇಟ್ಟ ಹತ್ತುವುದು ಎಂದರೆ ಪರಮ ಸೌಭಾಗ್ಯ. ಗೀತರಚನೆ ಶ್ರೀಯುತ ವಿ.ಸೂರ್ಯನಾರಾಯಣ ರಾವ್

ಹಾಡುಗಳನ್ನು ಲಾಲಿಸುವುದಕ್ಕೆ ಇಲ್ಲಿ ಕ್ಲಿಕ್ಕಿಸಿ : ಗೋವಿಂದ ಗೋವಿಂದ ಶ್ರೀ ಶ್ರೀನಿವಾಸ

೧.ಜಯ ವೆಂಕಟೇಶನೆ ಸಂಕಟ ಹರಣನೆ

ಜಯ ವೆಂಕಟೇಶನೆ ಸಂಕಟ ಹರಣನೆ ಜಯ ಭೋ
ಜಯ ನಮ್ಮಪ್ಪ ವೆಂಕಪ್ಪ ನಾಗಾಧೀಶನೆ ಜಯ ಭೋ

ನಂಬಿದ ಭಕ್ತರಿಗೆಲ್ಲ ಜಯವು ತಜ್ಯವು(?)
ತಜ್ಯವು(?) ದೇವ ನಿನ್ನ ದಾಸರಿಗೆ ಶಾಂತಿ ಭೋಗಗಳು
ನಿನ್ನ ದರುಶನವು ಹೊಂದಿದ ಕ್ಷಣವೇ ನಮಗೂ ಶಾಂತಿಯು
ನಿನ್ನ ದರುಶನದ ದಿವ್ಯಭಾಗ್ಯವೆ ಸೌಭಾಗ್ಯವು

ಏಳು ಬೆಟ್ಟಗಳ ಹತ್ತುವ ಕಾರ್ಯವು ನಮ್ಮ ಸಾಧನೆಯು
ನಾಮಸ್ಮರಣೆಯ ಮಾಡುವ ಕಾರ್ಯವು ನಮ್ಮ ಜೀವನವು
ನಂಬಿದ ನಮ್ಮನು ಕಾಯುವ ಕಾರ್ಯವು ನಿನ್ನ ಭಾರವೆಲೊ
ಕರುಣೆಯ ತೋರುತ ವರಗಳ ನೀಡುತ ಪೊರೆಯೊ ತಂದೆ

ಧ್ಯಾನಿಪ ಭಕ್ತನ ಹೃದಯದೆ ನೆಲೆಸಿದ ದೈವವು ನೀನಯ್ಯ
ಕರ್ಮದ ಮರ್ಮವನರಿಯಲು ಕಾರಣವಯ್ಯ ನಿನ್ನ ದಯಾ
ಬಂಧವ ಬಿಡಿಸಿ ಪರಿರಕ್ಷಿಸುವ ಬಾಂಧವ ನೀನಯ್ಯ
ಬಂಧ ಮೋಕ್ಷಗಳ ಭಾವನನಿರಿಯದ ಬಡವನು ನಾನಯ್ಯ

*********


೨. ಮಹಿತ ವೇದ ವಿಹಿತನೆ.

ಮಹಿತ ವೇದ ವಿಹಿತನೆ ವೇಂಕಟೇಶನೆ
ಇಹಪರಗಳು ನಿನ ವರಗಳು ಶ್ರೀನಿವಾಸನೆ
ಕರುಣಾರಸ ವರುಣಾಲಯ ಕಮಲಾಪ್ರಿಯಾ
ಉರಗಶಯನ ಗರುಡಗಮನ ಉರಾಗಾದ್ರೀಶ

ಕೈವಲ್ಯವ ಬಿಟ್ಟು ಜನರಿಗಾಗಿ ನೀನು
ಗಿರಿ ಶಿಖರದ ಮೇಲೆ ನೆಲೆಸಿರುವೆಯೊ ದೇವ
ದೇವಾ ನೀನಿರುವ ಸ್ಥಳವು ನಿಜ ಕೈವಲ್ಯ
ನಿನ್ನ ದಿವ್ಯ ದರುಶನವೇ ನಮ್ಮ ಭಾಗ್ಯ

ಶರಣು ಶರಣು ಶರಣೆಂಬೆನು ತಿರುಮಲ ತಿಮ್ಮಪ್ಪ
ಚರಣ ಕಮಲಗಳ ನಂಬಿಹೆ ಪರಿಪಾಲನೆ ಮಾಡೋ

ತಪ್ಪದೆ ದಾಸರ ಕಾಯುವ ದಯಾಸಾಗರ
ತಪ್ಪುಗಳನು ಗಣಿಸದ ವೆಂಕಪ್ಪ ನೀನೆ.
ತಂದೆ ತಾಯಿ ನೀನೆ ಶೆಷಾದ್ರಿವಾಸನೆ
ವಾಸವಾದಿ ವಂದಿತನೆ ವಾಸುದೇವನೆ.

************

೩. ಸಿರಿಸತಿ ಚಿತ್ತವ


ಸಿರಿಸತಿ ಚಿತ್ತವ ಹರಿಸಿದ ಚೋರನೆ ಶ್ರೀವೆಂಕಟೇಶನೆ
ದುರಿತಗಳನು ಗಛ್ಚಾಳನೆ ಮಾಡುವ ಕೋನೇರಿರಾಯನೆ
ಪಾಪಹರ ಚಕ್ರಧರ ಪಾಲನೆಮಾಡೋ ಪರಮಾತ್ಮ
ತಿರುಪತಿ ವೆಂಕಟರಮಣ ರಕ್ಷಿಸು ಕರುಣಾಭರಣ

ಸಾಸಿರ ನಾಮದ ಸಾರ್ವಭೌಮನೆ ಸಾಕಾರದೇವನೆ
ಸಕಲವು ನಿನ ಸಂಕಲ್ಪದ ಮಹಿಮೆ ಸಕಲವು ಅರಿತವನೆ , ಪ್ರಭುವೆ.
ಪಾಪಹರ ಚಕ್ರಧರ ಪಾಲನೆಮಾಡೋ ಪರಮಾತ್ಮ
ತಿರುಪತಿ ವೆಂಕಟರಮಣ ರಕ್ಷಿಸು ಕರುಣಾಭರಣ


ವಿಧವಿಧರೂಪದಿ ವಿಶ್ವವ ಪೊರೆವ ಅವತಾರಾನ್ವಿತನೆ
ನಾಮರೂಪಗಳ ಲೀಲಾಮಯನೆ ನಾಗಾದ್ರಿನಾಥನೆ
ಪಾಪಹರ ಚಕ್ರಧರ ಪಾಲನೆಮಾಡೋ ಪರಮಾತ್ಮ
ತಿರುಪತಿ ವೆಂಕಟರಮಣ ರಕ್ಷಿಸು ಕರುಣಾಭರಣ

******
೪.ಏಳು ಬೆಟ್ಟಗಳ ಅರಸ

ಏಳು ಬೆಟ್ಟಗಳ ಅರಸ ಜಗದೀಶ ಆಳುವಾ ದೊರೆ ನೀನಯ್ಯ
ನಿರ್ಮಲಾಂತಃಕರಣನೆ ಶ್ರೀಕರನೆ ನಿಗಮಪ(?)ತಿ ಉದ್ಧಾರನೆ
ದಯೆ ತೋರಿಸೊ, ನೀ ಪಾಲಿಸೋ ಕಾಪಾಡೆಲೊ ನೀ ದಯಾಳೋ

ದೀನ ಜನ ಮಂದಾರ ತ್ರಿಗುಣಗಳ ಸಂಹಾರ ಎನೆಗೆ ಸಕಲವೂ ನೀನೆಲೊ
ತಿರುಮಲೆಯ ಗಿರಿ ಮೇಲೆ ವರಗಳನು ವರ್ಷಿಸುವ ಪರಮದೈವವು ನೀನೆಲೊ
ದಯೆ ತೋರಿಸೊ, ನೀ ಪಾಲಿಸೋ ಕಾಪಾಡೆಲೊ ನೀ ದಯಾಳೋ

ನಿನ್ನ ದಯ ಬಯಸಿ ನಿನ್ನ ಸನ್ನಿಧಿಗೆ ಬಂದಿರುವ ಬಡವ ಭಕ್ತರ ಕಾಣೆಲೋ
ಎಲ್ಲೆ ಇಲ್ಲದಂತ ನಿನ ಕರುಣೆಯನು ಪಸರಿಸಿ ಚರಿತಾರ್ಥರನ್ನಾಗಿಸೊ
ದಯೆ ತೋರಿಸೊ, ನೀ ಪಾಲಿಸೋ ಕಾಪಾಡೆಲೊ ನೀ ದಯಾಳೋ

*********