Sunday, April 20, 2008

ಮಂದಗಮನೆ


ಮಂದಗಮನೆ ಇವನ್ಯಾರೆ ಪೇಳಮ್ಮ ಮಂಧರಧರ ಗೋವಿಂದ ಕಣಮ್ಮ
ಕೆಂದಳ ಪೋಲ್ವ ಪದಪದ್ಮದಲ್ಲಿ ಅಂಜಿಕೆಗಿಟ್ಟವನು ಯಾರೆಂದು ಪೇಳಮ್ಮ
ಅಂದು ಕಾಳಿಂಗನ ಪೆಡಯ ತುಳಿದ ದಿಟ್ಟ ನಂದನ ಕಂದ ಮುಕುಂದ ಕಣಮ್ಮ
ಕಂಬು ಕಂದರ ಕರ್ಣಾಲಂಬಿತ ಕುಂಡಲ ಅಂಬುಜ ಮುಖದವನ್ಯಾರೆಂದು ಹೇಳಮ್ಮ
ರಂಭೆ ಕೇಳೀತ ಶ್ರೀ ಪುರಂದರವಿಠಲನು ನಂಬಿದ ಭಕ್ತಕುಟುಂಬಿ ಕಣಮ್ಮ

ರಾಮಚಂದ್ರಾಯ

ರಾಮಚಂದ್ರಾಯ ಜನಕರಾಜಜಾ ಮನೋಹರಾಯ ಮಾಮಕಾಭೀಷ್ಟದಾಯ ಮಹಿತ ಮಂಗಳಂ
ಕೋಸಲೇಶಾಯ ಮಂದಹಾಸ ಪೋಷಣಾಯ ವಾಸವಾದಿ ವಿನುತ ಸರ್ವರಾಯ ಮಂಗಳಂ
ವಿಮಲರೂಪಾಯ ವಿವಿಧ ವೇದಾಂತವೇದಾಯ ಸುಮುಖ ಚಿತ್ತ ಕಾಮಿತಾಯ ಶುಭ್ರಮಂಗಳಂ
ರಾಮದಾಸಾಯ ಮ್ರುದುಲ ಹೃದಯ ಕಮಲ ವಾಸಯ ಸ್ವಾಮಿಭದ್ರ ಗಿರಿವರಾಯ ಸರ್ವಮಂಗಳಂ

ಮಧುಕರ ವೃತ್ತಿ ಎನ್ನದು.

ಮಧುಕರ ವೃತ್ತಿ ಎನ್ನದು.
ಪದುಮನಾಭನ ಪಾದ ಪದುಮ ಮಧುಪವೆಂಬ ಮಧುಕರ ವೃತ್ತಿ ಎನ್ನದು.
ಕಾಲಿಗೆ ಗೆಜ್ಜೆ ಕಟ್ಟಿ ನೀಲವರ್ಣನ ಗುಣ ಆಲಾಪಿಸುತ ಬಲು ಓಲಗ ಮಾಡುವಂತ
ರಂಗನಾಥನ ಗುಣ ಹಿಂಗದೆ ಪಾಡುತ್ತ ಶೃಂಗಾರ ನೋಡುತ್ತ ಕಂಗಳ ಆನಂದವೆಂಬ
ಇಂದಿರಾಪತಿ ಪುರಂದರ ವಿಠಲನಲ್ಲಿ ಚಂದದ ಭಕ್ತಿಯಿಂದ ಆನಂದ ಪಡುವಂತ

ಹಾಡಿದರೆ

ಹಾಡಿದರೆ ಎನ್ನ ಒಡೆಯನ ಹಾಡುವೆ.
ಬೆಡಿದರೆ ಎನ್ನ ಓಡೆಯನ ಬೇಡುವೆ
ಓಡೆಯಗೆ ಒಡಲನು ತೋರುವೇ
ಎನ್ನ ಬಡತನ ಬಿನ್ನಹ ಮಾಡುವೆ.
ಓಡೆಯ ಶ್ರೀಪುರಂದರ ವಿಠಲರಾಯನ
ಅಡಿಗಳನು ಸಾರಿ ಬದುಕುವೆ

Friday, April 18, 2008

ಭಾವಯಾಮಿ ರಘುರಾಮಂ

II ಭಾವಯಾಮಿ ರಘುರಾಮಂ II
ರಾಗಮಾಲಿಕ
ತಾಳ: ರೂಪಕ
ರಚನೆ: ಮಹಾರಾಜ ಸ್ವಾತಿ ತಿರುನಾಳ್
II ಭಾವಯಾಮಿ ರಘುರಾಮಂ ಭವ್ಯ ಸುಗುಣಾ ರಾಮಂ I
I ಭಾವುಕ ವಿತರಣಾಪರಾಪಾಂಗ ಲೀಲಾ ಲಸಿತಂ II
ಚರಣ ೧
**********
II ದಿನಕರಾನ್ವಯ ತಿಲಕಂ ದಿವ್ಯಗಾಧಿ ಸುತ ಸವನ I
I ವನ ರಚಿತ ಸುಬಾಹುಮುಖವಧಂ; ಅಹಲ್ಯಾ ಪಾವನಂ II
II ಅನಘಮೀಶ ಚಾಪ ಭಂಗಂ ಜನಕ ಸುತಾ ಪ್ರಾಣೆಶಂ I
I ಘನ ಕುಪಿತ ಭೃಗುರಾಮಾ ಗರ್ವಹರಾಮಿತ ಸಾಕೇತಂ II
ಚರಣ ೨
**********
II ವಿಹತ ಅಭಿಷೇಕಮತ ವಿಪಿನ ಗತಮಾರ್ಯವಾಚ I
I ಸಹಿತ ಸೀತಾ ಸೌಮಿತ್ರೀಮ್ ಶಾಂತತಮ ಶೀಲಂ II
II ಗುಹ ನಿಲಯ ಗತಂ ಚಿತ್ರಕೂಟಾಗತ ಭಾರತ ದತ್ತ I
I ಮಹಿತ ರತ್ನಮಯ ಪಾದುಕಂ ಮದನ ಸುಂದರಾಂಗಂ II
ಚರಣ ೩
**********
II ಕನಕ ಮೃಗರೂಪಧರ ಖಲ ಮಾರೀಚ ಹರಾಮಿಹ I
I ಸುಜನವಿಮತ ದಶಾಸ್ಯಂ ಶೃತ ಜನಕಜಾನ್ವೇಶಣಂ II
II ಅನಘ ಪಂಪಾತೀರ ಸಂಗತಾಂಜನೆಯ ನಭೋಮಣಿ I
I ತನುಜ ಸಖ್ಯಕರಮ್ ವಾಲೀ ತನುದಳನಮೀಶಂ II
ಚರಣ ೪
***********
II ವಿತತ ದಂಡಕಾರಂಣ್ಯಕ ಗತವಿರಾಧ ದಳನಂ I
I ಸುಚರಿತ ಘಟಜ ದತ್ತಾನುಪಮಿತ ವೈಷ್ಣವಾಸ್ತ್ರಂ II
II ಪತಗ ವರ ಜಟಾಯುನುತಂ ಪಂಚವಟಿ ವಿಹಿತ ವಾಸಂ I
I ಅತಿ ಘೋರ ಶೂರ್ಪಣಖಾ ವಚನಾಗತ ಖರಾದಿಹರಂ II
ಚರಣ ೫
***********
II ಕನಕ ಮೃಗರೂಪಧರ ಖಲಮಾರೀಚ ಹರಾಮಿಹ I
I ಸುಜನ ವಿಮತ ದಶಾಸ್ಯಂ ಹೃತ ಜನಕ ಜಾನ್ವೇಷನಂ II
II ಅನಘ ಪಂಪಾತೀರ ಸಂಗತಾಂಜನೇಯ ನಭೋಮಣಿ I
I ತನುಜ ಸಖ್ಯಕರಮ್ ವಾಲಿ ತನುದಳನಮೀಶಂ II
ಚರಣ ೬
**********
II ವಾನರೋತ್ತಮ ಸಹಿತ ವಾಯುಸೂನು ಕರಾರ್ಪಿತ I
I ಭಾನು ಶತ ಭಾಸ್ಕರ ಭವ್ಯ ರತ್ನಾಂಗುಲೀಯಂ II
II ತೇನ ಪುನರಾನೀತಂ ನ್ಯೂನ ಚೂಡಾಮಣಿ ದರ್ಶನಂ I
I ಶ್ರೀನಿಧಿಂ ಉದಧಿ ತೀರಾಶೃತ ವಿಭೀಷಣ ವಿನುತಂ II
ಚರಣ ೭
**********
II ಕಲಿತವರ ಸೇತು ಬಂಧಂ ಖಲನಿಸ್ಸೀಮ ವಿಶಿತಾಶನ I
I ದಳನಂ ಉರು ದಶಕಂಠ ವಿದಾರಂ ಅತಿಧೀರಂ II
II ಜ್ವಲನ ಪೂತ ಜನಕ ಸುತ ಸಹಿತ ಯಾತ ಸಾಕೇತಂ I
I ವಿಲಸಿತ ಪಟ್ಟಾಭಿಷೇಕಂ ವಿಶ್ವಪಾಲಂ ಪದ್ಮನಾಭಂ II

** ಶ್ರೀ ರಾಮಂ ರವಿಕುಲಾಬ್ದಿ ಸೋಮಂ **

** ಶ್ರೀ ರಾಮಂ ರವಿಕುಲಾಬ್ದಿ ಸೋಮಂ **
ರಾಗ: ನಾರಾಯಣಗೌಳ
ತಾಳ: ಆದಿ
ರಚನೆ: ಶ್ರೀ ಮುತ್ತುಸ್ವಾಮಿ ದೀಕ್ಷಿತರ್
II ಪಲ್ಲವಿ II
II ಶ್ರೀ ರಾಮಂ ರವಿ ಕುಲಾಬ್ದಿ ಸೋಮಂ I
I ಶ್ರಿತ ಕಲ್ಪ ಭೂರುಹಂ ಭಜೇಹಂ II
II ಅನುಪಲ್ಲವಿ II
II ಧೀರಾಗ್ರಗಣ್ಯಂ ವರೇಣ್ಯಂ; ದೀನ ಜನಾಧಾರಂ ರಘುವೀರಂ I
I ನಾರದಾದಿ ಸನ್ನುತ ರಾಮಾಯಣ ಪಾರಾಯಣ ಮುದಿತ ನಾರಾಯಣಂ II
II ಚರಣ II
II ದಶರಥಾತ್ಮಜಂ ಲಕ್ಷ್ಮಣಾಗ್ರಜಂ; ದಾನವ ಕುಲ ಭೀಕರಂ ಶ್ರೀಕರಮ್ I
I ಕುಶಲವ ತಾತಂ ಸೀತೋಪೇತಂ; ಕುವಲಯ ನಯನಂ ಸುದರ್ಪ ಶಯನಂ II
II ಸುಷರ ಚಾಪ ಪಾಣಿಂ ಸುಧೀಮಣಿಂ I
I ಸೂನ್ರುತ ಭಾಷಂ ಗುರುಗುಹ ತೋಷಂ II
II ದಶ ವದನ ಭಂಜನಂ ನಿರಂಜನಂ I
I ದಾನ ನಿಧಿಂ ದಯಾರಸಜಲನಿಧಿಂ II