***********
ಪೋಂಗೊಳನೂದುತಿಹ ಯದುಕುಲೂತ್ತುಂಗ
ರಾಗ : ದೇಶಿ
ತಾಳ : ಅಟ್ಟ
ಪೋಂಗೊಳನೂದುತಿಹ ಯದುಕುಲೂತ್ತುಂಗ
ತಿಂಗಳಾ ಪಾಂಗನೇ ರಜತ ಶುಭಾಂಗ
ಸಲಿಲಚರ ಧರಾ ಧರನು ಇಳಧರೋಜ್ವಲನೇತ್ರ
ಬಲಿಯ ಬೇಡಿದನು ಭೃಗುಕುಲದಿ ಜನಿಸಿ
ಬಲಿಯ ಬಿಲ್ಲನೆ ಮುರಿದು ಲಲನೆಯರ ಒಳನಗಾಗಿ
ಹೊಳರ ಸಂಭೋಧಿಸಿದ ಚೆಲುವ ಹಯವಿದನ
ವಾರಿಚರ ಕೂರ್ಮಾವತಾರ ಸೂಕರ ಕ್ರೂರ
ಧರಣಿಯನೆಳೆದು ಸೂರನಾ ಗೆಲಿದು
ನೀರಜಾಕ್ಷಿಯ ತಂದು ನಾರೀಪ್ರಿಯ ವ್ರತವಳಿದು
ಏರಿದನು ಹಯವ ಶ್ರೀ ಪುರಂದರ ವಿಠಲಾ
************
Dikshitar Kritis - Alphabetical List
16 years ago
No comments:
Post a Comment