
ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯೇ ||
ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ ಕೂಡಿ ಪಾಡಿ ಪೊಗಳುವೆನು ಪರಮ ಪುರುಷ ಹರಿಯೇ ||
ಮಂಗಳಾತ್ಮಕ ಮೋಹನಕಾಯ ರಂಗ ಸಂಗೀತಲೋಲ ಸದ್ಗುಣ ಶೀಲ
ಅಂಗನೇಯರಿಗೆಲ್ಲ ಅತಿಪ್ರಿಯನಾದ ಶುಭಾಂಗ ಶ್ರೀಪುರಂದರ ವಿಠಲರಾಯ ಶ್ರೀ... ||
ನನ್ನ ಗುನುಗುವಿಕೆಗೆ ಸಹಕಾರಿಯಾಗಲು ಹಾಡು-ಕೃತಿಗಳ ಸಾಹಿತ್ಯವನ್ನು ಒಂದು ಕಡೆ ಕಲೆ ಹಾಕುವ ಸಣ್ಣ ಪ್ರಯತ್ನ. ಹಾಗೆ ಕೆಲವು ಸಾಂಗೀತಿಕ ಮಾಹಿತಿ, ರಾಗಲಕ್ಷಣಗಳು ಇತ್ಯಾದಿಗಳು ಸಹ ಇವೆ. ***
No comments:
Post a Comment