
ಗಜವದನಾ ಬೇಡುವೇ ಗೌರಿ ತನಯ
ತ್ರಿಜಗ ವಂದಿತನೇ ಸುಜನರ ಪೊರೆವನೆ ಪ
ಪಾಶಂಕುಶಧರ ಪಾರಮಪವಿತ್ರ
ಮೂಷಿಕವಾಹನ ಮುನಿಜನ ಪ್ರೇಮ ಅ. ಪ
ಮೋದದಿ ನಿನ್ನಯ ಪಾದಾವ ತೋರೋ
ಸಾಧು ವಂದಿತನೆ ಆದರದಿಂದಲಿ
ಸರಸಿಜಾನಾಭ ಶ್ರೀಪ್ರರಂದರ ವಿಠಲನ
ನಿರುತ ನೆನೆಯುವಂತೆ ದಯಮಡೋ ಚ
***
ನನ್ನ ಗುನುಗುವಿಕೆಗೆ ಸಹಕಾರಿಯಾಗಲು ಹಾಡು-ಕೃತಿಗಳ ಸಾಹಿತ್ಯವನ್ನು ಒಂದು ಕಡೆ ಕಲೆ ಹಾಕುವ ಸಣ್ಣ ಪ್ರಯತ್ನ. ಹಾಗೆ ಕೆಲವು ಸಾಂಗೀತಿಕ ಮಾಹಿತಿ, ರಾಗಲಕ್ಷಣಗಳು ಇತ್ಯಾದಿಗಳು ಸಹ ಇವೆ. ***
No comments:
Post a Comment