************
ಮಂದಗಮನೆ ಇವನ್ಯಾರೆ ಪೇಳಮ್ಮ
ರಾಗ : ಮೋಹನ
ತಾಳ: ಆದಿ
ಮಂದಗಮನೆ ಇವನ್ಯಾರೆ ಪೇಳಮ್ಮ
ಮಂದಧರ ಧರ ಗೋವಿಂದ ಕಾಣಮ್ಮ
ಕೆಂದಳಿರು ನಖ ಶಶಿಬಿಂಬ ಪದಪದ್ಮ
ಅಂದುಗ ಇಟ್ಟವನಾರೆ ಪೇಳಮ್ಮ
ಅಂದು ಕಾಳಿಂಗನ ಪೆಡೆಯ ತುಳಿದ ದಿಟ್ಟ
ನಂದನ ಕಂದ ಮುಕುಂದ ಕಾಣಮ್ಮ
ಕಂಬುಕಂಧರ ಕರ್ಣಾಲಂಬಿತಕುಂಡಲ
ಅಂಬುಜ ಮುಖದವನಾರೆಂದು ಹೇಳಮ್ಮ
ರಂಭೆ ಕೇಳೀತ ಶ್ರೀ ಪುರಂದರವಿಠಲನು
ನಂಬಿದ ಭಕ್ತ ಕುಟುಂಬಿ ಕಾಣಮ್ಮ
************
Dikshitar Kritis - Alphabetical List
16 years ago
No comments:
Post a Comment