***********
ರೋಗಹರನೆ ಕೃಪಾಸಾಗರ
ರಾಗ : ದೇಶಿ
ತಾಳ : ಅಟ್ಟ
ರೋಗಹರನೆ ಕೃಪಾಸಾಗರ ಶ್ರೀಗುರು
ರಾಘವೇಂದ್ರ ಪರಿಪಾಲಿಸೋ
ಸಂತತದುರ್ಮತ ಧ್ವಾಂತ ದಿವಾಕರ
ಸಂತವಿನುತ ಮಾತ ಲಾಲಿಸೋ
ಪಾವನಗಾತ್ರ ದೇವವರನೆ ತವ
ಸೇವಕ ಜನರೊಳಗಾಡಿಸೊ
ಘನ್ನಮಹಿಮ ಜಗನ್ನಾತ ವಿಠಲಪ್ರಿಯ
ನಿನ್ನಾರಾಧನೆ ಮಾಡಿಸಸೊ
***********
Dikshitar Kritis - Alphabetical List
16 years ago
No comments:
Post a Comment