************
ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ
ರಾಗ : ಪೂರ್ವಿ
ತಾಳ: ಆದಿ
ಡಂಗುರಾವ ಸಾರಿ ಹರಿಯ ಡಿಂಗರೀಗರೆಲ್ಲರೂ ಭೂ
ಮಂಡಲಕ್ಕೆ ಪಾಂಡುರಂಗ ವಿಠ್ಥಲನೆ ಪರದೈವ ವೆಂದು
ಹರಿಯು ಮುಡಿದ ಹೋವು ಹರಿವಾಣದೊಳಗಿಟ್ಟುಕೊಂಡು
ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತ
ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು
ಢಂಢಂ ಢಣಾ ಢಣಾರೆಂದು ಹೊಡೆದು ಚಪ್ಪಾಳಿಕ್ಕುತ
ಇಂತು ಜಗಕೆಲ್ಲ ಲಕ್ಷ್ಮೀಕಾಂತನಲ್ಲದಿಲ್ಲವೆಂದು
ಸಂತತ ಶ್ರೀಪುರಂದರವಿಠಲ ಪರದೈವವೆಂದು
************
Dikshitar Kritis - Alphabetical List
17 years ago
No comments:
Post a Comment